ಉಲ​ನ್‌ ​ಉಡೆ (ರಷ್ಯಾ)ಅ.11): ಮಹಿಳಾ ವಿಶ್ವ ಬಾಕ್ಸಿಂಗ್‌​ನಲ್ಲಿ ಮೇರಿ ಕೋಮ್‌ ದಾಖ​ಲೆಯ 8ನೇ ಪದಕ ಖಚಿ​ತ​ಪ​ಡಿ​ಸಿ​ದ್ದಾರೆ. ವಿಶ್ವ ಬಾಕ್ಸಿಂಗ್‌ ಚಾಂಪಿ​ಯ​ನ್‌​ಶಿಪ್‌ ಇತಿ​ಹಾ​ಸ​ದ​ಲ್ಲಿಯೇ 8ನೇ ಪದಕ ಗೆಲ್ಲಲಿರುವ ಮೊದಲ ಬಾಕ್ಸರ್‌ ಎಂಬ ದಾಖ​ಲೆ​ಗೆ ಮೇರಿ ಪಾತ್ರರಾಗಿದ್ದಾ​ರೆ. ಎಐಬಿಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮೇರಿ ಅವರದ್ದಾಗಿದೆ. ಕ್ಯೂಬಾದ ಪುರುಷ ಬಾಕ್ಸರ್‌ ಫೆಲಿಕ್ಸ್‌ ಸೇವನ್‌ ಅತಿ​ಹೆಚ್ಚು 7 ಪದಕ ಗೆದ್ದಿ​ದ್ದರು. ದಿಗ್ಗ​ಜ ಫೆಲಿಕ್ಸ್‌ ಹಿಂದಿ​ಕ್ಕಿದ ಮೇರಿ ವಿಶ್ವ ಬಾಕ್ಸಿಂಗ್‌​ನಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್‌ ಎನಿ​ಸಿ​ಕೊಂಡಿ​ದ್ದಾರೆ. 7 ಪದ​ಕ​ ಗೆದ್ದಿದ್ದ ಐರಿಷ್‌ ಮಹಿಳಾ ಬಾಕ್ಸರ್‌ ಕ್ಯಾಟಿ ಟೇಲರ್‌ ವೃತ್ತಿ​ಪರ ಬಾಕ್ಸಿಂಗ್‌​ನತ್ತ ವಾಲಿದ್ದಾರೆ. 6 ಬಾರಿ ವಿಶ್ವ ಚಾಂಪಿ​ಯನ್‌ ಎನಿಸಿರುವ ಮೇರಿ, ವಿಶ್ವ ಬಾಕ್ಸಿಂಗ್‌ನಲ್ಲಿ ಇದುವರೆಗೂ 6 ಚಿನ್ನ, 1 ಬೆಳ್ಳಿ ಪದಕ ಗೆದ್ದಿ​ದ್ದಾರೆ. ಈ ಆವೃ​ತ್ತಿ​ಯಲ್ಲಿ ಸೆಮಿಫೈ​ನಲ್‌ ಪ್ರವೇ​ಶಿ​ಸುವ ಮೂಲ​ಕ ಪದ​ಕ​ವೊಂದನ್ನು ಖಚಿ​ತ​ಪ​ಡಿ​ಸಿ​ದರು.

ಇದನ್ನೂ ಓದಿ: ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

51 ಕೆ.ಜಿ ವಿಭಾ​ಗದ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಕೊಲಂಬಿ​ಯಾದ ವೆಲೆ​ನ್ಸಿಯಾ ವಿಕ್ಟೋ​ರಿಯಾ ಅವ​ರನ್ನು ಮೇರಿ ಮಣಿ​ಸಿ​ದ​ರು. 2012ರ ಒಲಿಂಪಿಕ್‌ ಪದಕ ವಿಜೇತೆ ಮೇರಿ, ‘ಪ್ರಿ ಕ್ವಾರ್ಟರ್‌ ಪಂದ್ಯ​ಕ್ಕಿಂತ ಕ್ವಾರ್ಟರ್‌ ಫೈನಲ್‌ ಪಂದ್ಯ ಸುಲ​ಭವಿತ್ತು. ಪ್ರಿ ಕ್ವಾರ್ಟ​ರ್‌​ನಲ್ಲಿ ಥಾಯ್ಲೆಂಡ್‌ ಬಾಕ್ಸರ್‌ ಜಿಟ್‌​ಪೊಂಗ್‌ ಹೆಚ್ಚು ಬಲ​ಶಾಲಿ ಆಗಿ​ದ್ದ​ರು’ ಎಂದು ತಿಳಿ​ಸಿ​ದರು. ಶನಿ​ವಾರ ನಡೆ​ಯಲಿರುವ ಸೆಮಿ​ಫೈ​ನ​ಲ್‌​ನಲ್ಲಿ ಮೇರಿ, ಯುರೋ​ಪಿ​ಯನ್‌ ಚಾಂಪಿ​ಯನ್‌ ಟರ್ಕಿ ಬಾಕ್ಸ​ರ್‌ ಬ್ಯೂಸೆ​ನಾಜ್‌ ಕಾಕಿ​ರೋಗ್ಲು ಅವ​ರನ್ನು ಎದು​ರಿ​ಸ​ಲಿ​ದ್ದಾರೆ.

ಇದನ್ನೂ ಓದಿ: ಬಾಕ್ಸಿಂಗ್‌ಗೆ ಕಾಲಿಡಲು ಮೊಹಮದ್‌ ಅಲಿ ಸ್ಫೂರ್ತಿ; ಮೇರಿ ಕೋಮ್‌

ಅತಿ​ಹೆಚ್ಚು ಪದಕ ಗೆದ್ದ ಬಾಕ್ಸ​ರ್‌​ಗ​ಳು :
ಭಾರತದ ಮೇರಿ ಕೋಮ್‌ 8ಪದಕ
ಕ್ಯೂಬಾದ ಫೆಲಿಕ್ಸ್‌ ಸೇವನ್‌ 7ಪದಕ
ಐರ್ಲೆಂಡ್‌ನ ಕ್ಯಾಟಿ ಟೇಲರ್‌ 7 ಪದಕ

ನನ್ನ ಮೇಲೆ ಬಹಳ ನಿರೀ​ಕ್ಷೆ​ಯಿದೆ ಎಂದು ತಿಳಿ​ದಿದೆ. ಸದ್ಯ ಅರ್ಧ ಕೆಲಸವನ್ನಷ್ಟೇ ಮುಗಿ​ಸಿ​ದ್ದೇನೆ. ಚಿನ್ನದ ಪದಕ ಗೆಲ್ಲುವ ವಿಶ್ವಾ​ಸ​ ನನ​ಲ್ಲಿದೆ. ಈ ಬಾರಿಯೂ ಇಡೀ ದೇಶವೇ ನನ್ನ ಬೆಂಬ​ಲಕ್ಕೆ ನಿಂತಿ​ದೆ. ಇಷ್ಟುದೊಡ್ಡ ಬೆಂಬಲ ಸಿಕ್ಕಿಯೂ ನಾನು ಗೆಲ್ಲ​ದಿ​ದ್ದರೆ ಹೇಗೆ? ಎಂದು ಮೇರಿ ಕೋಮ್ ಹೇಳಿದ್ದಾರೆ.

ಇದನ್ನೂ ಓದಿ: ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1

ಭಾರ​ತಕ್ಕೆ 4 ಪದಕ ಖಚಿ​ತ:
ಮೇರಿ ಕೋಮ್‌ ಸೇರಿದಂತೆ ಉಳಿದ ಮೂವರು ಬಾಕ್ಸರ್‌ಗಳು ಸೆಮೀಸ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ 4 ಕಂಚಿನ ಪದಕ ಖಚಿತವಾದಂತಾಗಿದೆ. ವಿಶ್ವ ಬಾಕ್ಸಿಂಗ್‌​ನಲ್ಲಿ ಪಾದಾ​ರ್ಪಣೆ ಮಾಡಿರುವ ಮಂಜು ರಾಣಿ, ಜಮುನಾ ಬೊರೊ ಚೊಚ್ಚಲ ಪದಕದ ನಿರೀಕ್ಷೆ ಮೂಡಿಸಿದರು. 48 ಕೆ.ಜಿ ವಿಭಾ​ಗ​ದಲ್ಲಿ ಮಂಜು, ದ. ಕೊರಿ​ಯಾದ ಕಿಮ್‌ ಹ್ಯಾಂಗ್‌ ವಿರುದ್ಧ 4-1ರಿಂದ ಗೆದ್ದರು. ಜಮುನಾ, 54 ಕೆ.ಜಿ​. ವಿಭಾಗದಲ್ಲಿ ಜರ್ಮನಿ ಬಾಕ್ಸರ್‌ ಉರ್ಸುಲಾ ಗೊಟ್‌​ಲೊಬ್‌ ಎದುರು ಗೆದ್ದರು. ಲೊವ್ಲಿನಾ, 69 ಕೆ.ಜಿ. ವಿಭಾಗದಲ್ಲಿ ಸೆಮೀಸ್‌ಗೇರಿದ್ದು ಸತತ 2ನೇ ಪದಕ ಖಚಿ​ತ​ಪ​ಡಿ​ಸಿ​ದ​ರು.

ಕವಿ​ತಾಗೆ ನಿರಾಸೆ: ಕವಿತಾ ಚಾಹರ್‌ +81 ಕೆ.ಜಿ. ವಿಭಾಗದಲ್ಲಿ ಬೆಲಾರಸ್‌ನ ಎದು​ರಾಳಿ ಕಟ್ಸಿ​ಯಾ​ರ್ಯನಾ ಕವ​ಲೇವಾ ವಿರುದ್ಧ 1-4ರಲ್ಲಿ ಪರಾಭವ ಹೊಂದಿದರು.