ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ದುಬೈ​ನಲ್ಲಿ ಅಬ್ಬರಿಸಲು ರೆಡಿಯಾಗಿದ್ದು, ನವೆಂಬರ್ 22ರಂದು ನಡೆಯಲಿರುವ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Indian Boxer Vijender Singh Next Professional Fight In Dubai On November 22

ನವ​ದೆ​ಹ​ಲಿ[ಅ.09]: ಭಾರ​ತದ ತಾರಾ ಪ್ರೊ ಬಾಕ್ಸರ್‌ ವಿಜೇಂದರ್‌ ಸಿಂಗ್‌, ನ.22ರಂದು ದುಬೈ​ನಲ್ಲಿ ಮುಂದಿನ ಪಂದ್ಯ ಆಡ​ಲಿ​ದ್ದಾರೆ. ಸೋಲಿ​ಲ್ಲದ ಸರ​ದಾ​ರ ವಿಜೇಂದರ್‌ (11-0, 8 ನಾಕೌ​ಟ್‌) ಎದು​ರಾಳಿ ಯಾರೆಂಬುದು ಇನ್ನೂ ಅಂತಿ​ಮ​ಗೊಂಡಿ​ಲ್ಲ. 

ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ

2024ರ ಒಲಿಂಪಿ​ಕ್ಸ್‌ಗೆ ಕಬಡ್ಡಿ ಸೇರಲಿ: ರಿಜಿ​ಜು

ವಿಜೇಂದರ್‌ ತಮ್ಮ ಅಜೇಯ ದಾಖಲೆ ಮುಂದು​ವ​ರಿ​ಸುವ ವಿಶ್ವಾಸದಲ್ಲಿದ್ದಾರೆ. ಜುಲೈ ತಿಂಗ​ಳಲ್ಲಿ ಅಮೆ​ರಿಕದಲ್ಲಿ ನಡೆದಿದ್ದ ಮೊದಲ ಪಂದ್ಯ​ದಲ್ಲಿ ವಿಜೇಂದರ್‌, ಮೈಕ್‌ ಸ್ನೈಡರ್‌ ವಿರುದ್ಧ ಟೆಕ್ನಿ​ಕಲ್‌ ನಾಕೌಟ್‌ನಿಂದ ಗೆಲುವು ಸಾಧಿ​ಸಿ​ದ್ದ​ರು. ಸದ್ಯ ತರ​ಬೇ​ತುದಾರ ಲೀ ಬೇರ್ಡ್‌ ಜೊತೆ ಮ್ಯಾಂಚೆ​ಸ್ಟ​ರ್‌​ನಲ್ಲಿ ತಯಾರಿ ನಡೆ​ಸು​ತ್ತಿ​ದ್ದು, ‘ದುಬೈನಲ್ಲಿ ಅಭಿ​ಮಾ​ನಿ​ಗಳು ನನ್ನ ಅತ್ಯು​ತ್ತಮ ​ಪ್ರ​ದ​ರ್ಶ​ನವನ್ನು ವೀಕ್ಷಿಸಲಿದ್ದಾರೆ.’ ಎಂದು ವಿಜೇಂದರ್‌ ಆತ್ಮ​ವಿ​ಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

ಹರ್ಯಾಣ ಮೂಲದ ವಿಜೇಂದರ್ ಸಿಂಗ್ 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್’ನಲ್ಲಿ ಈಕ್ವೇಡರ್’ನ ಕಾರ್ಲೋಸ್ ಗೋಂಗೊರಾ ಮಣಿಸಿ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್’ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಬಾಕ್ಸರ್ ಎನ್ನುವ ಗೌರವಕ್ಕೆ ವಿಜೇಂದರ್ ಭಾಜನರಾಗಿದ್ದರು.  ಆ ಬಳಿಕ ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ ಗೌರವಕ್ಕೂ ವಿಜೇಂದರ್ ಪಾತ್ರರಾಗಿದ್ದರು. 

Latest Videos
Follow Us:
Download App:
  • android
  • ios