* ವಿಂಬಲ್ಡನ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನೊವಾಕ್‌ ಜೋಕೋವಿಚ್*  ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ವಿರುದ್ದ ಜೋಕೋಗೆ ಸುಲಭ ಜಯ* ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸಾನಿಯಾ ಮಿರ್ಜಾ ಜೋಡಿ ಎರಡನೇ ಸುತ್ತು ಪ್ರವೇಶ

ಲಂಡನ್‌(ಜು.02): ಹಾಲಿ ಚಾಂಪಿಯನ್‌ ನೊವಾಕ್‌ ಜೋಕೋವಿಚ್‌ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2ನೇ ಸುತ್ತಿನ ವಿಂಬಲ್ಡನ್‌ ಪಂದ್ಯದಲ್ಲಿ ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ವಿರುದ್ಧ 6-3, 6-3, 6-3 ಸೆಟ್‌ಗಳಲ್ಲಿ ಜಯಗಳಿಸಿದರು. 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸಹ 2ನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ 3ನೇ ಸುತ್ತಿಗೇರಿದರು.

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ: 2ನೇ ಸುತ್ತಿಗೆ ಜೋಕೋ, ಮರ್ರೆ ಲಗ್ಗೆ

Scroll to load tweet…

ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಬೆಥಾನಿ ಮಟೆಕ್‌-ಸ್ಯಾಂಡ್ಸ್‌ ಜೋಡಿ, 6ನೇ ಶ್ರೇಯಾಂಕಿತ ಜೋಡಿಯಾದ ಅಮೆರಿಕದ ಡೆಸಿರೆ ಕ್ರಾಜಿಕ್‌ ಹಾಗೂ ಚಿಲಿಯ ಅಲೆಕ್ಸಾ ಗೌರಾಚಿ ವಿರುದ್ಧ 7-5, 6-3 ನೇರ ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿತು. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಭಾರತದ ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಜೋಡಿ ಸೋತು ಹೊರಬಿತ್ತು.