ಯುಎಸ್ ಓಪನ್: ಪ್ರೇಕ್ಷಕರಿಗೆ ಮಾಸ್ಕ್, ಲಸಿಕೆ ದಾಖಲೆ ಕಡ್ಡಾಯವಲ್ಲ
* ಯುಎಸ್ ಓಪನ್ ಟೆನಿಸ್ ಟೂರ್ನಿ ಆಗಸ್ಟ್ 30ರಿಂದ ಆರಂಭ
* 100% ಸಾಮರ್ಥ್ಯದೊಂದಿಗೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ
* ಪ್ರೇಕ್ಷಕರು ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನೂ ತೋರಿಸುವ ಅಗತ್ಯವಿಲ್ಲ
ನ್ಯೂಯಾರ್ಕ್(ಆ.27): ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಟೂರ್ನಿಯ ಪ್ರಧಾನ ಸುತ್ತು ನ್ಯೂಯಾರ್ಕ್‌ನಲ್ಲಿ ಆಗಸ್ಟ್ 30ಕ್ಕೆ ಆರಂಭವಾಗಲಿದ್ದು, 100% ಸಾಮರ್ಥ್ಯದೊಂದಿಗೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರು ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನೂ ತೋರಿಸುವ ಅಗತ್ಯವೂ ಇಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಯುಎಸ್ ಓಪನ್ ಅರ್ಹತಾ ಸುತ್ತು: ಪ್ರಜ್ನೇಶ್‌ಗೆ ಮುನ್ನಡೆ
ನ್ಯೂಯಾರ್ಕ್: ಭಾರತದ ಅಗ್ರ ಶ್ರೇಯಾಂಕಿತ ಪ್ರಜ್ನೇಶ್ ಗುಣೇಶ್ವರನ್ ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯ ಅರ್ಹತಾ ಸುತ್ತಿನಲ್ಲಿ 2ನೇ ಹಂತ ಪ್ರವೇಶಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೆನಡಾದ ಬ್ರೈಡೆನ್ ಸ್ನುರ್ ವಿರುದ್ಧ ಪ್ರಜ್ನೇಶ್ 6-4, 7-6 ನೇರ ಸೆಟ್‌ಗಳಲ್ಲಿ ಗೆದ್ದುಕೊಂಡರು. ಮುಂದಿನ ಸುತ್ತಿನಲ್ಲಿ ಪ್ರಜ್ನೇಶ್ ಅಮೆರಿಕಾದ ಕ್ರಿಸ್ಟೋಪರ್ ಎಬಂಕ್ಸ್ ವಿರುದ್ಧ ಸೆಣಸಲಿದ್ದಾರೆ.
ಯುಎಸ್ ಓಪನ್: ಪ್ರಧಾನ ಸುತ್ತಿಗೇರದ ನಗಾಲ್, ರಾಮ್‌ಕುಮಾರ್
ಈ ಮೊದಲು ಭಾರತದ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಸುಮಿತ್ ನಗಾಲ್ ಹಾಗೂ ರಾಮ್‌ಕುಮಾರ್ ರಾಮನಾಥನ್ ಸೋತು ಹೊರಬಿದ್ದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಮೊದಲ ಪಂದ್ಯದಲ್ಲೇ ಪರಾಭವಗೊಂಡು ನಿರ್ಗಮಿಸಿದ್ದರು.