ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸುಮಿತ್‌ ನಗಾಲ್‌ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದೀಗ ಎರಡನೇ ಸುತ್ತಿನಲ್ಲಿ ಕಠಿಣ ಎದುರಾಳಿ ಆಸ್ಟ್ರೀಯಾದ ಡೋಮಿನಿಕ್ ಥಿಮ್ ಅವರನ್ನು ಎದುರಿಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನ್ಯೂಯಾರ್ಕ್(ಸೆ.03): ಭಾರತದ ನಂ.1 ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಅವರು ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಕಳೆದ 7 ವರ್ಷಗಳಲ್ಲಿ ಗ್ರ್ಯಾನ್‌ಸ್ಲಾಮ್‌ನಲ್ಲಿ ಮೊದಲ ಸುತ್ತು ಗೆದ್ದ ಪ್ರಥಮ ಟೆನಿಸಿಗ ಎಂಬ ಹೆಗ್ಗಳಿಕೆಗೆ ಸುಮಿತ್‌ ಪಾತ್ರರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2013ರಲ್ಲಿ ಭಾರತದ ಸೋಮ್‌ದೇವ್‌ ದೇವ್‌ವರ್ಮನ್‌ ಆಸ್ಪ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ ಹಾಗೂ ಯುಎಸ್‌ ಓಪನ್‌ನಲ್ಲಿ 2ನೇ ಸುತ್ತಿಗೇರಿದ್ದರು. ಫ್ಲಶಿಂಗ್‌ ಮೆಡೋಸ್‌ನ ಬಯೋ-ಬಬಲ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ಅಮೆರಿಕದ ಬ್ರಾಡ್ಲಿ ಕ್ಲಾನ್‌ ವಿರುದ್ಧ 6-1, 6-3, 3-6, 6-1 ಸೆಟ್‌ಗಳಲ್ಲಿ ಗೆದ್ದರು. 

Scroll to load tweet…

ಇದೀಗ ಎರಡನೇ ಸುತ್ತಿನಲ್ಲಿ ಭಾರತದ ಆಟಗಾರನಿಗೆ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ. ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಆಸ್ಟ್ರೀಯಾದ ಆಟಗಾರ ಡೋಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ. 

ಯುಎಸ್‌ ಓಪನ್ 2020‌: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ

ಬ್ರಿಟನ್‌ನ ಆ್ಯಂಡಿ ಮರ್ರೆ, ಜಪಾನ್‌ನ ನಿಶಿವೊಕಾ ಎದುರು ಪ್ರಯಾಸದ ಜಯ ಪಡೆದರು. ಮಹಿಳಾ ಸಿಂಗಲ್ಸ್‌ನಲ್ಲಿ 24ನೇ ಗ್ರ್ಯಾನ್‌ಸ್ಲಾಮ್‌ ನಿರೀಕ್ಷೆಯಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌, ತಮ್ಮದೇ ರಾಷ್ಟ್ರದ ಕ್ರಿಸ್ಟಿಅನ್‌ ವಿರುದ್ಧ 7-5, 6-3 ಸೆಟ್‌ಗಳಲ್ಲಿ ಸುಲಭ ಜಯ ಪಡೆದರು.