ಯುಎಸ್ ಓಪನ್ 2020: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ
ಸರ್ಬಿಯಾ ನೋವಾಕ್ ಜೋಕೋವಿಚ್ ಹಾಗೂ ಚೆಕ್ ಗಣರಾಜ್ಯದ ಪ್ಲಿಸ್ಕೋವಾ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನ್ಯೂಯಾರ್ಕ್(ಸೆ.01): ಕೊರೋನಾ ವೈರಸ್ ಭೀತಿಯ ನಡುವೆ ಫ್ಲಶಿಂಗ್ ಮೆಡೋಸ್‌ನ ಬಯೋ-ಬಬಲ್‌ನಲ್ಲಿ ಸೋಮವಾರದಿಂದ ಆರಂಭವಾಗಿರುವ ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್ ಮೊದಲ ಸುತ್ತಲ್ಲಿ ಪ್ಲಿಸ್ಕೋವಾ, ಉಕ್ರೇನ್‌ನ ಅನಾಲೀನಾ ವಿರುದ್ಧ ಗೆಲುವು ಪಡೆದರು. ಇನ್ನು ಕೆರ್ಬರ್, ಕ್ವಿಟೋವಾ ಕೂಡಾ ಗೆಲುವು ದಾಖಲಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.
ಜೋಕೋ ಶುಭಾರಂಭ: 18ನೇ ಗ್ರ್ಯಾನ್‌ಸ್ಲಾಮ್ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೋವಿಚ್ ಮಂಗಳವಾರ ಸಿಂಗಲ್ಸ್ ಮೊದಲ ಸುತ್ತಲ್ಲಿ ಬೋಸ್ನಿಯಾದ ದಮೀರ್‌ರನ್ನು ಅವರನ್ನು ಸುಲಭವಾಗಿ ಮಣಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ಬಿಯಾದ ಆಟಗಾರ 6-1,6-4 ಮತ್ತು 6-1 ನೇರ ಸೆಟ್‌ಗಳಲ್ಲಿ ದಮೀರ್‌ರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಇಂದಿನಿಂದ ಯುಎಸ್ ಓಪನ್ ಆರಂಭ: ಖಾಲಿ ಮೈದಾನದಲ್ಲಿ ಪಂದ್ಯ..!
ಇಂದು ಭಾರತದ ಸುಮಿತ್ ನಗಾಲ್, ಅಮೆರಿಕದ ಬ್ರಾಡ್ಲಿ ಕ್ಲಾನ್ ಎದುರು ಸೆಣಸಲಿದ್ದಾರೆ.