ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ನವೊಮಿ ಒಸಾಕ ಹಾಗೂ ಅಲೆಕ್ಸಾಂಡರ್‌ ಜ್ವೆರೆವಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..

ನ್ಯೂಯಾರ್ಕ್(ಸೆ.10): ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾ,ಮ್ ಟೆನಿಸ್‌ನಲ್ಲಿ ಜಪಾನ್‌ನ ತಾರಾ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಒಸಾಕ ಅವರು ಅಮೆರಿಕದ ಶಿಲ್ಬೆ ರೋಜರ್ಸ್‌ ಎದುರು 6-3, 6-4ರ ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಒಸಾಕ, ಸೆಮೀಸ್‌ಗೆ ಲಗ್ಗೆ ಇಟ್ಟರು. ಸೆಮೀಸ್‌ನಲ್ಲಿ ಒಸಾಕ ಅಮೆರಿಕದ ಜೆನ್ನಿರ್ಫ ಬ್ರ್ಯಾಡಿ ಎದುರು ಸೆಣಸಲಿದ್ದಾರೆ.

Scroll to load tweet…

2018ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಕಂಟಕವಾಗಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಒಸಾಕ, ಈಗ ಮತ್ತೆ 2020ರಲ್ಲೂ ಸೆರೆನಾಗೆ ಕಾಡುವುದಕ್ಕೆ ಸಜ್ಜಾಗಿದ್ದಾರೆ.

ಯುಎಸ್‌ ಓಪನ್‌‌: ಥೀಮ್‌, ಸೆರೆನಾ ಕ್ವಾರ್ಟರ್‌ ಪ್ರವೇಶ

ಜ್ವೆರೆವ್‌ ಸೆಮೀಸ್‌ಗೆ:

ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 1995 ರ ಬಳಿಕ ಯುಎಸ್‌ ಓಪನ್‌ನಲ್ಲಿ ಸೆಮೀಸ್‌ ಹಂತಕ್ಕೇರಿದ ಜರ್ಮನಿಯ ಮೊದಲ ಆಟಗಾರ ಎನಿಸಿದ್ದಾರೆ. 1995 ರಲ್ಲಿ ಜರ್ಮನಿಯ ಬೋರಿಸ್‌ ಬೇರ್ಕ್ ಸೆಮೀಸ್‌ಗೇರಿದ್ದರು.

Scroll to load tweet…

ಜ್ವೆರೆವ್‌, ಕ್ರೊಯೇಷಿಯಾದ ಬೊರ್ನಾ ಕೊರಿಕ್‌ ವಿರುದ್ಧ 1-6, 7-6(7-5), 7-6(7-1), 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. ರೋಚಕ ಹೋರಾಟದಲ್ಲಿ ಜ್ವೆರೆವ್‌, ಬೊರ್ನಾ ಕೊರಿಕ್‌ ಎದುರು ಜಯಿಸಿದರು. ಮೊದಲ ಸೆಚ್‌ನಲ್ಲಿ ಹಿನ್ನಡೆ ಅನುಭವಸಿದ ಜ್ವೆರೆವ್‌, 2 ಹಾಗೂ 3ನೇ ಸೆಟ್‌ಗಳಲ್ಲಿ ಟೈ ಬ್ರೇಕರ್‌ನಲ್ಲಿ ಮುನ್ನಡೆ ಪಡೆದರು. 4ನೇ ಸೆಟ್‌ನಲ್ಲಿ ಮುನ್ನಡೆ ಸಾಧಿಸುವ ಮೂಲಕ ಜ್ವೆರೆವ್‌ ಪಂದ್ಯ ತಮ್ಮದಾಗಿಸಿಕೊಂಡರು. ಸೆಮೀಸ್‌ನಲ್ಲಿ ಜ್ವೆರೆವ್‌, ಸ್ಪೇನ್‌ನ ಪ್ಯಾಬ್ಲೋ ಕರೆನೊ ಬಸ್ಟಾಅವರನ್ನು ಎದುರಿಸಲಿದ್ದಾರೆ.