23 ಗ್ರ್ಯಾಂಡ್‌ಸ್ಲಾಂ ಒಡತಿ ಸೆರೆನಾ ವಿಲಿಯಮ್ಸ್ ಹಾಗೂ ಆಸ್ಟ್ರಿಯಾದ ಸ್ಟಾರ್ ಟೆನಿಸಿಗ ಯುಎಸ್ ಈಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನ್ಯೂಯಾರ್ಕ್(ಸೆ.09): ನಿರೀಕ್ಷೆಯಂತೆಯೇ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಹಾಗೂ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ ಭಾರತದ ಭೋಪಣ್ಣ ಜೋಡಿ ಪುರುಷರ ಡಬಲ್ಸ್ ಹೋರಾಟ ಅಂತ್ಯಗೊಂಡಿದೆ. 

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೆನಡಾದ ಅಗುರ್‌ ಅಲಿಯಾಸಿಮ್‌ ವಿರುದ್ಧ 7-6, 6-1, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್‌ನಲ್ಲಿ ಆಸ್ಪ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ಗೆ ಅಮೆರಿಕದ ಸೆರೆನಾ ವಿಲಿಯಮ್ಸ್‌ ಪ್ರವೇಶಿಸಿದ್ದು, ಬುಲ್ಗೇರಿಯಾದ ಸ್ವೆಟಾನಾ ಪಿರನ್ಕೋವಾ ವಿರುದ್ಧ ಆಡಲಿದ್ದಾರೆ.

Scroll to load tweet…
Scroll to load tweet…

ಕೊರೋನಾ ಭಯವಿದ್ದರೂ ಫ್ರೆಂಚ್‌ ಓಪನ್‌ಗೆ ಪ್ರೇಕ್ಷಕರು!

ಬೋಪಣ್ಣ ಜೋಡಿಗೆ ಸೋಲು: ಪುರುಷರ ಡಬಲ್ಸ್‌ ಕ್ವಾರ್ಟರ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ ಹಾಗೂ ಕೆನಡಾದ ಡೆನಿಸ್‌ ಶಾಪೊವಲೊವ್‌ ಜೋಡಿ ಡಚ್‌ನ ಜ್ಯುಲಿಯನ್‌ ಹಾಗೂ ರೊಮೇನಿಯಾದ ಟೆಕಾವ್‌ ಜೋಡಿ ವಿರುದ್ಧ ಸೋಲುಂಡು ಹೊರಬಿತ್ತು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.