ಭಾರತದ ಸೈಕ್ಲಿಂಗ್ ಫೆಡರೇಶನ್ ಅಧ್ಯಕ್ಷರಾಗಿ ಬಿಜೆಪಿ ಶಾಸಕ ಪಂಕಜ್ ಸಿಂಗ್ ಅವಿರೋಧ ಆಯ್ಕೆ!
ಭಾರತದ ಸೈಕ್ಲಿಂಗ್ ಫೆಡರೇಶನ್ ಆಡಳಿತ ಮಂಡಳಿ, ಪದಾಧಿಕಾರಿಗಳ ನೇಮಕವಾಗಿದೆ. ಇದೀಗ ಉತ್ತರ ಪ್ರದೇಶದ ಬಿಜೆಪಿ ಶಾಸಕ ಪಂಕಜ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಂಕಜ್ ಸಿಂಗ್ ಭಾರತದ ಸೈಕ್ಲಿಂಗ್ ಹೊಸ ರೂಪುರೇಷೆ ನೀಡುವ ಭರವಸೆ ನೀಡಿದ್ದಾರೆ.
ನೈನಿತಾಲ್(ಏ.24): ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಕ್ರಿಕೆಟ್ ದುನಿಯಾದಲ್ಲಿ ಇತರ ಕ್ರೀಡೆಗಳು ಇದೀಗ ಅದೇ ಮಟ್ಟದ ಜನಪ್ರಿಯತೆ, ಮೂಲಸೌಕರ್ಯಗಳನ್ನು ಪಡೆದಿದೆ.ಇದೀಗ ಸೈಕ್ಲಿಂಗ್ ಹೊಸ ಅಧ್ಯಾಯ ಬರೆಯಲು ಭಾರತ ಸಜ್ಜಾಗಿದೆ. ಭಾರತದಲ್ಲಿ ಸೈಕ್ಲಿಂಗ್ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯತೆ ಹಾಗೂ ಅಭಿವೃದ್ಧಿಪಡಿಸಲು ಹೊಸ ಕಾರ್ಯಕ್ರಮ ರೂಪಿಸುವುದಾಗಿ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ನೂತನ ಅಧ್ಯಕ್ಷ ಪಂಕಚ್ ಸಿಂಗ್ ಹೇಳಿದ್ದಾರೆ. ಇಂದು ಭಾರತದ ಸೈಕ್ಲೆಂಗ್ ಫೆಡರೇಶನ್ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಪಂಕಜ್ ಸಿಂಗ್ ಅವಿರೋಧವಾಗಿ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉತ್ತರಖಂಡದ ನೈನಿತಾಲ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಚುನವಣಾ ಸಭೆಯಲ್ಲಿ ಸೈಕ್ಲಿಂಗ್ ಫೆಡರೇಶನ್ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸತತ 2ನೇ ಬಾರಿ ಮನೀಂದರ್ ಪಾಲ್ ಸಿಂಗ್ ಸೈಕ್ಲಿಂಗ್ ಫೆಡರೇಶನ್ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕೇರಳ ಸುಧೀಶ್ ಕುಮಾರ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ 26 ರಾಜ್ಯಗಳ ಫೆಡರೇಶನ್ ಪಾಲ್ಗೊಂಡಿತ್ತು.
90 ಕಿ.ಮೀ ಕ್ರಮಿಸಿ ಐರನ್ ಮ್ಯಾನ್ ರಿಲೇ ಚಾಲೆಂಜ್ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ!
ಸೈಕ್ಲಿಂಡ್ ಫೆಡರೇಶನ್ ಕಾರ್ಯಕಾರಿಣಿ ಸಮಿತಿಗೆ ಉತ್ತರ ಪ್ರದೇಶ, ದೆಹಲಿ, ಹರ್ಯಾಣ, ಉತ್ತರಖಂಡ, ಗುಜರಾತ್, ಕೇರಳ, ತೆಲಂಗಾಣದ ತಲಾ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಚಂಡೀಘಡ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಬಿಹಾರ್, ತಮಿಳುನಾಡು, ಒಡಿಶಾ, ಹಿಮಾಚಲ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್‌ನಿಂದ ತಲಾ ಒಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ.
National Games 2022: ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕೀರ್ತಿಗೆ ಒಲಿದ ಕಂಚು
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಂಕಜ್ ಸಿಂಗ್, ಎಲ್ಲಾ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ. ಅಭೂತಪೂರ್ವ ಬೆಂಬಲ ನೀಡಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ, ತಳಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಭಾರತದಲ್ಲಿ ಸೈಕ್ಲಿಂಗ್ ಫೆಡರೇಶನ್ ಹೊಸ ಅಧ್ಯಾಯ ಆರಂಭಿಸುವ ಭರವಸೆ ನೀಡಿದ್ದಾರೆ. ನಾನು ಹೆಚ್ಚು ಕೆಲಸ ಮಾಡಬೇಕಿದೆ. ಸೈಕ್ಲಿಂಗ್ ಅತ್ಯಂತ ಜನಪ್ರಿಯ ಕ್ರೀಡೆ. ಆದರೆ ಭಾರತದಲ್ಲಿ ಸೈಕ್ಲಿಂಗ್ ಅಭಿವೃದ್ಧಿ ಮಾಡಬೇಕು. ತಳಮಟ್ಟದಿಂದ ಕ್ರೀಡಾಪಟುಗಳಿಗೆ ನೆರವು ಸಿಗಬೇಕು. ಹೀಗಾದಲ್ಲಿ ಮಾತ್ರ ಪ್ರತಿಭಾನ್ವಿತರು ಸೈಕ್ಲಿಂಗ್ ಕ್ರೀಡೆಯತ್ತ ಆಕರ್ಷಿತರಾಗಲು ಸಾಧ್ಯ. ಇಂತಹ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿದೆ ಎಂದು ಪಂಕಜ್ ಸಿಂಗ್ ಹೇಳಿದ್ದಾರೆ.