National Games 2022: ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕೀರ್ತಿಗೆ ಒಲಿದ ಕಂಚು

ರಾಷ್ಟ್ರೀಯ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಕೀರ್ತಿ
ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕೀರ್ತಿಗೆ ಒಲಿದ ಕಂಚಿನ ಪದಕ
ಅಮ್ಲನ್‌ ಬೊರ್ಗೊಹೈನ್‌ ಹಾಗೂ ಜ್ಯೋತಿ ಯರ್ರಾಜಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ಚಾಂಪಿಯನ್‌ 

National Games 2022 Karnataka Keerti Clinch bronze in Cycling kvn

ಅಹಮದಾಬಾದ್‌(ಅ): 36ನೇ ರಾಷ್ಟ್ರೀಯ ಕ್ರೀಡಾಕೂಟದದಲ್ಲಿ ಕರ್ನಾಟಕ ಮತ್ತೊಂದು ಪದಕ ಗೆದ್ದಿದೆ. ಸೈಕ್ಲಿಂಗ್‌ನ ವೈಯಕ್ತಿಕ ಪಸ್ರ್ಯೂಟ್‌ 3 ಕಿ.ಮೀ. ರೇಸ್‌ನಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿ ಕಂಚಿನ ಪದಕ ಗೆದ್ದರು. ಇನ್ನು  ಅಮ್ಲನ್‌ ಬೊರ್ಗೊಹೈನ್‌ ಹಾಗೂ ಜ್ಯೋತಿ ಯರ್ರಾಜಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ಅಸ್ಸಾಂನ 23 ವರ್ಷದ ಅಮ್ಲನ್‌ 10.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ತಮಿಳುನಾಡಿನವರಾದ ಎಲಾಕಿಯದಸನ್‌(10.44 ಸೆ.) ಬೆಳ್ಳಿ, ಶಿವ ಕುಮಾರ್‌(10.48 ಸೆ.) ಕಂಚಿನ ಪದಕ ಪಡೆದರು. ಮಹಿಳಾ ವಿಭಾಗದಲ್ಲಿ ಆಂಧ್ರ ಪ್ರದೇಶದ ಜ್ಯೋತಿ 11.51 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ತಮ್ಮದಾಗಿಸಿಕೊಂಡರು. 5000 ಮೀ. ಓಟದಲ್ಲಿ ಪುರುಷರ ವಿಭಾಗದಲ್ಲಿ ಉತ್ತರ ಪ್ರದೇಶದ ಅಭಿಷೇಕ್‌ ಪೌಲ್‌ ಹಾಗೂ ಮಹಿಳಾ ವಿಭಾಗದಲ್ಲಿ ಪಾರುಲ್‌ ಚೌಧರಿ ಚಾಂಪಿಯನ್‌ ಆದರು. 400 ಮೀ. ನಲ್ಲಿ ಸರ್ವಿಸಸ್‌ನ ಮುಹಮ್ಮದ್‌ ಅಜ್ಮಲ್‌(46.29 ಸೆ.), ಮಹಾರಾಷ್ಟ್ರದ ಐಶ್ವರ್ಯಾ ಮಿಶ್ರ(52.62 ಸೆ.) ಕ್ರಮವಾಗಿ ಪುರುಷ, ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟರು.

ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಮುರಳಿ ಶ್ರೀಶಂಕರ್‌(7.73 ಮೀ.) ಪುರುಷರ ಹೈಜಂಪ್‌ನಲ್ಲಿ ಬೆಳ್ಳಿ ತೃಪ್ತಿಪಟ್ಟುಕೊಂಡರು. ತಮಿಳುನಾಡಿದ ಜೆಸ್ವಿನ್‌ ಆಲ್ಡಿ್ರನ್‌(8.26 ಮೀ.) ಚಿನ್ನ ತಮ್ಮದಾಗಿಸಿಕೊಂಡರು.

ಟೆನಿಸ್‌: ಡಬಲ್ಸ್‌ನಲ್ಲಿ ಕರ್ನಾಟಕ ಸೆಮೀಸ್‌ಗೆ

ಪುರುಷ ಹಾಗೂ ಮಹಿಳಾ ವಿಭಾಗದ ಟೆನಿಸ್‌ ಡಬಲ್ಸ್‌ನಲ್ಲಿ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕಂಚಿನ ಪದಕ ಖಚಿತಪಡಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಆದಿಲ್‌ ಕಲ್ಯಾಣ್‌ಪುರ್‌-ಪ್ರಜ್ವಲ್‌ ದೇವ್‌ ಜೋಡಿ ಅರ್ಜುನ್‌ ಖಾಡೆ-ಅನ್ವಿತ್‌ ಬೇಂದ್ರೆ ವಿರುದ್ಧ ಗೆದ್ದರೆ, ಮಹಿಳಾ ವಿಭಾಗದಲ್ಲಿ ಸೋಹಾ ಸಾದಿಕ್‌-ಶರ್ಮದಾ ಬಾಲು ತೆಲಂಗಾಣದ ಪಾವನಿ ಪಥಾಕ್‌-ಅಭಯ್‌ ವಿರುದ್ಧ ಗೆದ್ದು ಅಂತಿಮ 4ರ ಘಟ್ಟಪ್ರವೇಶಿಸಿದರು.

ದಸರಾ ಕ್ರೀಡಾಕೂಟ: 3 ನೂತನ ಕೂಟ ದಾಖಲೆ

ಮಹೇಂದ್ರ ದೇವನೂರು, ಕನ್ನಡಪ್ರಭ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್‌ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಶನಿವಾರ ಮೂರು ಕೂಟ ದಾಖಲೆ ನಿರ್ಮಾಣವಾಯಿತು. ಮಹಿಳೆಯರ 1500 ಮೀ. ಓಟದ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ಚೈತ್ರಾ ದೇವಾಡಿಗ 4.44.42 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನಗಳಿಸು ಮೂಲಕ 2014ರಲ್ಲಿ ಬೆಂಗಳೂರು ನಗರ ವಿಭಾಗದ ಶ್ರುತಿ (4.44.80 ನಿ.) ಅವರ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದರು. ಮೈಸೂರಿನ ಪಿ. ಚೈತ್ರಾ ದ್ವಿತೀಯ, ಬೆಂಗಳೂರು ಗ್ರಾಮಾಂತರದ ಎಸ್‌.ಎಂ. ಸಾನಿಕಾ ತೃತೀಯ ಸ್ಥಾನಿಯಾದರು.

ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಬೆಂಗಳೂರು ನಗರ ವಿಭಾಗದ ಕಲಾವತಿ ಬಸಪ್ಪಾ ತೇಲಿ 41.79 ಮೀ. ಎಸೆಯುವ ಮೂಲಕ 2014ರಲ್ಲಿ ಮೈಸೂರು ವಿಭಾಗದ ಪ್ರಿಯಾಂಕ (41.42 ಮೀ.) ಹೆಸರಿನಲ್ಲಿದ್ದ ದಾಖಲೆ ಮುರಿದರು. ದ್ವಿತೀಯ ಸ್ಥಾನ ಪಡೆದ ಮೈಸೂರು ವಿಭಾಗದ ಎಂ.ಎನ್‌. ಸುಷ್ಮಾ ಕೂಡ 41.62 ಮೀಟರ್‌ ದೂರ ಡಿಸ್ಕಸ್‌ ಎಸೆದರು. ಶ್ರುಷಿತಾ ಉಳಲಪ್ಪ ಕಲಿವಾಲ್‌ ತೃತೀಯ ಸ್ಥಾನಗಳಿಸಿದರು. ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬೆಂಗಳೂರು ನಗರ ವಿಭಾಗದ ಎಸ್‌.ಹರ್ಷಿತ್‌ (2.14 ಮೀ.) ನೂತನ ಕೂಟ ದಾಖಲೆ ನಿರ್ಮಿಸಿದರು. ಇವರು 2014ರಲ್ಲಿ ಬೆಂಗಳೂರು ನಗರ ವಿಭಾಗದ ಬಿ. ಚೇತನ್‌ ಅವರು ನಿರ್ಮಿಸಿದ್ದ 2.10 ಮೀ. ದಾಖಲೆ ಸರಿಗಟ್ಟಿದರು. ಮೈಸೂರಿನ ಅನಿಲ್‌ಕುಮಾರ್‌ ದ್ವಿತೀಯ, ಬೆಂಗಳೂರು ನಗರದ ತ್ರಿಲೋಕ್‌ ತೃತೀಯ ಸ್ಥಾನ ಪಡೆದರು.

National Games 2022: ಒಂದೇ ದಿನ ರಾಜ್ಯಕ್ಕೆ ಐದು ಪದಕ

ಪುರುಷರ ವಿಭಾಗದ 400 ಮೀ. ಓಟದಲ್ಲಿ ಅಕಾಶ್‌, 1500 ಮೀ. ಓಟದಲ್ಲಿ ನಾಗರಾಜ್‌, 110 ಮೀ. ಹರ್ಡಲ್ಸ್‌ನಲ್ಲಿ ಮೈಸೂರಿನ ಎಂ.ಡಿ. ಸುಶಾಂತ್‌, ಡಿಸ್ಕಸ್‌ ಥ್ರೋನಲ್ಲಿ ಮೈಸೂರಿನ ಮಹಮ್ಮದ್‌ ಎಸ್‌.ಅಹ್ಮದ್‌, 4*100 ಮೀ.ರಿಲೆಯಲ್ಲಿ ಮೈಸೂರು ವಿಭಾಗ (ನಿಖಿಲ್‌ ದಾಮೋದರ್‌, ಸುಶಾಂತ್‌, ರೋಹಿತ್‌, ಸುಮನ್‌ 42.08 ಸೆ.) ಸ್ಥಾನ ಗಳಿಸಿದರು.

ಮಹಿಳಾ ವಿಭಾಗದ ಎತ್ತರ ಜಿಗಿತದಲ್ಲಿ ಬೆಂಗಳೂರು ನಗರದ ಬಿ.ಎಸ್‌. ಸುಪ್ರಿಯಾ, 400 ಮೀ. ಓಟದಲ್ಲಿ ಬೆಳಗಾವಿಯ ಮೇಘಾ, 100 ಮೀ.ಹರ್ಡಲ್ಸ್‌ನಲ್ಲಿ ಬೆಂಗಳೂರು ನಗರದ ಧ್ರುತಿ, 4*100 ಮೀ.ರಿಲೆಯಲ್ಲಿ ಮೈಸೂರು ವಿಭಾಗ ಪ್ರಥಮ ಸ್ಥಾನ ಪಡೆಯಿತು.

Latest Videos
Follow Us:
Download App:
  • android
  • ios