90 ಕಿ.ಮೀ ಕ್ರಮಿಸಿ ಐರನ್ ಮ್ಯಾನ್ ರಿಲೇ ಚಾಲೆಂಜ್ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ!
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಶೇಷ ಸಾಧನೆ ಮಾಡಿದ್ದಾರೆ. ಈಜು, ಒಟ ಹಾಗೂ ಸೈಕ್ಲಿಂಗ್‌ನ ಟ್ರಯಥ್ಲಾನ್ ಐರನ್ ಮ್ಯಾನ್ ರಿಲೇ ಚಾಲೆಂಜ್ ಪೂರ್ಣಗೊಳಿಸಿದ ಮೊದಲ ಸಂಸದ ಅನ್ನೋ ಹೆಗ್ಗಳಿಗೆ ತೇಜಸ್ವಿ ಸೂರ್ಯ ಪಾತ್ರರಾಗಿದ್ದಾರೆ. ಬರೋಬ್ಬರಿ 90 ಕಿಲೋಮೀಟರ್ ಕ್ರಮಿಸಿ ಈ ಸಾಧನೆ ಮಾಡಿದ್ದಾರೆ.
ಗೋವಾ(ನ.14): ಯುವ ನಾಯಕ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇದೀಗ ಗೋವಾ ಐರನ್ ಮ್ಯಾನ್ ರಿಲೇ ಚಾಲೆಂಜ್ ಪೂರ್ಣಗೊಳಿಸಿದ ಮೊದಲ ಸಂಸದ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೋವಾದಲ್ಲಿ ಆಯೋಜಿಸಲಾದ ಐರನ್‌ಮ್ಯಾನ್ 90.3 ರಿಲೇ ಚಾಲೆಂಜ್‌ನಲ್ಲಿ ಪಾಲ್ಗೊಂಡ ತೇಜಸ್ವಿ ಸೂರ್ಯ ಬರೋಬ್ಬರಿ 90 ಕಿಲೋಮೀಟರ್ ಕ್ರಮಿಸಿ ಸವಾಲು ಪೂರ್ಣಗೊಳಿಸಿದ್ದಾರೆ. ಈ ಮೂಲಕ ರೆಕಾರ್ಡ್ ಬುಕ್‌ನಲ್ಲಿ ತೇಜಸ್ವಿ ಸೂರ್ಯ ತಮ್ಮ ಹೆಸರು ದಾಖಲಿಸಿದ್ದಾರೆ. ನಾಗರೀಕ ಸೇವಕ ಶ್ರೇಯಸ್ ಹೊಸೂರು ಹಾಗೂ ಉದ್ಯಮಿ ಅನಿಕೇತ್ ಜೈನ್ ಜೊತೆ ಭಾರತ ತಂಡ ಪ್ರತಿನಿಧಿಸಿದ ತೇಜಸಿ ಸೂರ್ಯ ಈ ಸಾಧನೆ ಮಾಡಿದ್ದಾರೆ. ಇದು . ಈಜು, ಒಟ ಹಾಗೂ ಸೈಕ್ಲಿಂಗ್‌ನ ಟ್ರಯಥ್ಲಾನ್ ರಿಲೇ ಸ್ಪರ್ಧೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಫಿಟ್ ಇಂಡಿಯಾ ಆಂದೋಲನಕ್ಕೆ ಪೂರಕವಾಗಿ ಜನರನ್ನು ಮತ್ತಷ್ಟು ಜಾಗೃತಿಗೊಳಿಸಲು ಸಂಸದ ತೇಜಸ್ವಿ ಸೂರ್ಯ ಈ ಐರನ್‌ಮ್ಯಾನ್ ರಿಲೇನಲ್ಲಿ ಪಾಲ್ಗೊಂಡಿದ್ದರು. ಶ್ರೇಯಸ್ ಹೊಸೂರು ಮೊದಲ ಹಂತದಲ್ಲಿ 1.9 ಕಿಲೋಮೀಟರ್ ಈಜು ಪೂರ್ಣಗೊಳಿಸಿದರು. ಬಳಿಕ ತೇಜಸ್ವಿ 90 ಕಿಲೋಮೀಟರ್ ಸೈಕ್ಲಿಂಗ್ ಪೂರ್ಣಗೊಳಿಸಿದರೆ, ತಂಡದ ಅಂಕಿತ್ ಜೈನ್ 21.1 ಕಿಲೋಮೀಟರ್ ಹಾಫ್ ಮ್ಯಾರಾಥನ್ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ ತಂಡವಾಗಿಯೂ ಚಾಲೆಂಜ್ ಪೂರ್ಣಗೊಳಿಸಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವತ್ಥ್ ನಾರಾಯಣ, ತೇಜಸ್ವಿ ಸೂರ್ಯ
ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಆಂದೋಲನದ ಅಂಗವಾಗಿ ಆಯೋಜಿಸಲಾಗಿದ್ದ ‘ಐರನ್ ಮ್ಯಾನ್ ರಿಲೇ’ಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ರಿಲೇಯನ್ನು ಪೂರ್ಣಗೊಳಿಸಿದ ಮೊದಲ ಸಂಸದ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ಇದು ಒಟ್ಟು 3 ವಿಭಾಗಗಳನ್ನು ಒಳಗೊಂಡ 70 ಮೈಲು ದೂರದ ಸ್ಪರ್ಧೆಯಾಗಿದ್ದು, ಮೂವರು ಕನ್ನಡಿಗರು ಸೇರಿ ಇದನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಹಂತದಲ್ಲಿ 1.9 ಕಿ.ಮೀ. ದೂರದ ಈಜು, 2ನೇ ಹಂತದಲ್ಲಿ 90 ಕಿ.ಮೀ. ದೂರದ ಸೈಕ್ಲಿಂಗ್ ಮತ್ತು ಕೊನೆಯ ಹಂತದಲ್ಲಿ 21.1 ಕಿ.ಮೀ. ದೂರದ ಮ್ಯಾರಥಾನ್ ಅನ್ನು ಒಳಗೊಂಡಿದೆ. ನಾಗರಿಕ ಸೇವೆಯ ಅಧಿಕಾರಿ ಶ್ರೇಯಸ್ ಹೊಸೂರು ಅವರು ಮೊದಲ ಹಂತದ 1.9 ಕಿ.ಮೀ. ದೂರದ ಈಜು ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದರೆ, ಸಂಸದ ತೇಜಸ್ವಿ ಸೂರ್ಯ 2ನೇ ಹಂತದ 90 ಕಿ.ಮೀ. ದೂರದ ಸೈಕ್ಲಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಉದ್ಯಮಿ ಅಂಕಿತ್ ಜೈನ್ ಕೊನೆ ಹಂತದ 21.1 ಕಿ.ಮೀ. ದೂರದ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದಾರೆ.
Tejasvi Surya: 3 ವರ್ಷ ಸಂಸದರಾಗಿ ತೇಜಸ್ವಿ ಸೂರ್ಯ ಮಾಡಿದ್ದೇನು? ಮುಸ್ಲಿಮರೆಂದರೆ ದ್ವೇಷ ಯಾಕೆ?
ಫಿಟ್ ಇಂಡಿಯಾ ಆಂದೋಲನದ ಅಂಗವಾಗಿ 2019ರಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2 ವರ್ಷ ಸ್ಥಗಿತಗೊಂಡಿದ್ದ ಈ ಸ್ಪರ್ಧೆಯನ್ನು ಈ ವರ್ಷ ಮತ್ತೆ ನಡೆಸಲಾಗಿದೆ.
ಗುಜರಾತ್ ಚುನಾವಣೆ: ತೇಜಸ್ವಿ ಸೂರ್ಯ ಸ್ಟಾರ್ ಪ್ರಚಾರಕ
ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ, ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಜ್‌ನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಯೋಗಿ ಆದಿತ್ಯನಾಥ್, ಹೇಮಾಮಾಲಿನಿ ಮೊದಲಾದವರು ಸೇರಿದ್ದಾರೆ.