Asianet Suvarna News Asianet Suvarna News

ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜು..!

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ ಜಾವೆಲಿನ್‌ ದಾಖಲೆ ಮೊತ್ತಕ್ಕೆ ಹರಾಜು

* 1.5 ಕೋಟಿ ರುಪಾಯಿಗೆ ಹರಾಜಾದ ನೀರಜ್ ಚೋಪ್ರಾ ಜಾವೆಲಿನ್

*  ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ಇ-ಹರಾಜಿನಲ್ಲಿ ಇಡಲಾಗಿತ್ತು.

Tokyo Olympics Gold Medalist Neeraj Chopra javelin gets over Rs 1.5 crore kvn
Author
New Delhi, First Published Oct 10, 2021, 9:04 AM IST

ನವದೆಹಲಿ(ಅ.10): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ನೀಡಲಾಗಿದ್ದ ಉಡುಗೊರೆಗಳ ಇ-ಹರಾಜು (E Auction) ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಹರಾಜು ಪ್ರಕ್ರಿಯೆ ವೇಳೆ ಟೋಕಿಯೋ ಒಲಿಂಪಿಕ್ಸ್‌ (Neeraj Chopra) ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಬಿಕರಿಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ. 

ಇನ್ನು ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ (sardar vallabhbhai patel) ಅವರ ವಿಗ್ರಹ ಖರೀದಿಗೆ ಅತಿಹೆಚ್ಚು 140 ಬಾರಿ ಬಿಡ್‌ ಸಲ್ಲಿಕೆಯಾಗಿದೆ. ಇದರ ಹೊರತಾಗಿ ಮರದಲ್ಲಿ ಕೆತ್ತನೆಯಾದ ಗಣೇಶ ವಿಗ್ರಹಕ್ಕೆ 117 ಬಾರಿ, ಪುಣೆ ಮೆಟ್ರೋ ಲೈನ್‌ ನೀಡಿದ ಕಾಣಿಕೆಗೆ 104 ಬಾರಿ ಹಾಗೂ ವಿಜಯ ಜ್ಯೋತಿ ಸ್ಮರಣಿಕೆಗೆ 98 ಸಲ ಬಿಡ್‌ ಸಲ್ಲಿಕೆಯಾಗಿದೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್‌ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದಾದ ಬಳಿಕ ನೀರಜ್ ಚೋಪ್ರಾ ದೇಶದ ಐಕಾನ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. 

Neeraj Chopra ಹೊಸ ಟ್ರೆಂಡ್‌: ದೇಶದೆಲ್ಲೆಡೆ ಹೆಚ್ಚಾಯ್ತು ಜಾವೆಲಿನ್‌ ಕ್ರೇಜ್‌!

ಇನ್ನು ಚೋಪ್ರಾ ಅವರ ಜಾವೆಲಿನ್‌ ಬಳಿಕ, ಕತ್ತಿವರಸೆ (Fencing) ಆಟಗಾರ್ತಿ ಭವಾನಿ ದೇವಿ (CA Bhavani Devi) ಯ ಸಹಿ ಹೊಂದಿದ ಕತ್ತಿಗೆ 1.25 ಕೋಟಿ ರುಪಾಯಿ, ಸುಮಿತ್‌ ಆ್ಯಂಟಿಲ್‌ (Sumit Antil) ಅವರ ಜಾವೆಲಿನ್‌ಗೆ 1.002 ಕೋಟಿ ರುಪಾಯಿ, 2020ರ ಪ್ಯಾರಾಲಿಂಪಿಕ್ಸ್‌ ತಂಡದ ಆಟಗಾರರ ಆಟೋಗ್ರಾಫ್‌ ಹೊಂದಿದ ಅಂಗವಸ್ತ್ರಕ್ಕೆ 1 ಕೋಟಿ ರುಪಾಯಿ, ಲವ್ಲಿನಾ ಬೊರ್ಗೊಹೇನ್‌ (Lovlina Borgohain) ಅವರ ಬಾಕ್ಸಿಂಗ್‌ ಗ್ಲೋವ್‌ 91 ಲಕ್ಷ ರುಪಾಯಿಗೆ ಮಾರಾಟವಾಗಿವೆ ಎಂದು ಸಂಸ್ಕೃತಿ ಇಲಾಖೆ ತಿಳಿಸಿದೆ.

ಅಯೋಧ್ಯೆ ರಾಮಮಂದಿರ, ವಾರಾಣಸಿಯ ರುದ್ರಾಕ್ಷ್ ಆಡಿಟೋರಿಯಂ, ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಮತ್ತು ಪ್ಯಾರಾಲಿಂಪಿಕ್ಸ್‌ (Paralympics) ನಲ್ಲಿ ಪದಕ ವಿಜೇತರ ಕ್ರೀಡಾ ಪಟುಗಳು ಬಳಸಿದ ಸಲಕರಣೆಗಳು ಸೇರಿದಂತೆ ಇನ್ನಿತರ ಅತ್ಯಮೂಲ್ಯ ಮತ್ತು ಕುತೂಹಲಕಾರಿ ವಸ್ತುಗಳನ್ನು ಇ-ಹರಾಜಿನಲ್ಲಿ ಇಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸೆ.17ರಿಂದ ಅ.7ರವರೆಗೆ ಇ-ಹರಾಜಿನಲ್ಲಿ ಇಡಲಾಗಿತ್ತು. ಇದರಿಂದ ಬಂದ ಹಣವು ಗಂಗಾ ನದಿಯ ಪುನರುಜ್ಜೀವನ ಯೋಜನೆಯಾಗಿರುವ ನಮಾಮಿ ಗಂಗೆ ಮಿಷನ್‌ಗೆ (Namami Gange Mission) ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಘೋಷಿಸಿದ್ದರು.

ದುಬೈನಲ್ಲಿ ಸ್ಕೈ ಡೈವ್‌ ಮಾಡಿದ ನೀರಜ್‌ ಚೋಪ್ರಾ

ದುಬೈ: ಮಾಲ್ಡೀವ್ಸ್‌ ಪ್ರವಾಸದಿಂದ ಹಿಂದಿರುಗಿದ ಬಳಿಕ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ತಮ್ಮ ಬಿಡುವಿನ ಸಮಯವನ್ನು ದುಬೈ (Dubai) ನಲ್ಲಿ ಕಳೆಯುತ್ತಿದ್ದಾರೆ. ಶನಿವಾರ ಅವರು ಸ್ಕೈಡೈವ್‌ ಮಾಡುವ ವಿಡಿಯೋವೊಂದನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

‘ವಿಮಾನದಿಂದ ಜಿಗಿಯುವ ಮೊದಲ ನಾನು ಹೆದರುತ್ತಿದ್ದೆ. ಆದರೆ ಈಗ ಖುಷಿಯಾಗುತ್ತಿದೆ’ ಎಂದು ಬರೆದಿದ್ದಾರೆ. ಅಲ್ಲದೇ, ತಮ್ಮ ಅಭಿಮಾನಿಗಳಿಗೆ ಒಮ್ಮೆಯಾದರೂ ಸ್ಕೈಡೈವ್‌ ಮಾಡುವಂತೆ ಮನವಿ ಮಾಡಿದ್ದಾರೆ. ನೀರಜ್‌ರ ವಿಡಿಯೋ ವೈರಲ್‌ ಆಗಿದೆ.

Follow Us:
Download App:
  • android
  • ios