ಒಲಿಂಪಿಕ್ಸ್ ಪದಕ ವಿಜೇತ ರವಿ ದಹಿಯಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಿರಲು ನಿರ್ಧಾರ..!
* ವಿಶ್ವಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ರವಿಕುಮಾರ್ ದಹಿಯಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ರವಿ ದಹಿಯಾ
* ವಿಶ್ವಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಎರಡನೇ ಪೈಲ್ವಾನ್ ರವಿ
ನವದೆಹಲಿ(ಆ.26): ಮುಂಬರುವ ಅಕ್ಟೋಬರ್ 2ರಿಂದ 10ರ ವರೆಗೂ ನಾರ್ವೆಯ ಓಸ್ಲೋದಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದಿರಲು ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಕುಸ್ತಿಪಟು ರವಿ ದಹಿಯಾ ನಿರ್ಧರಿಸಿದ್ದಾರೆ.
ಟೋಕಿಯೋದಿಂದ ವಾಪಸಾದ ಬಳಿಕ ಅಭ್ಯಾಸ ನಡೆಸಲು ಸಾಧ್ಯವಾಗದ ಕಾರಣ, ಆಗಸ್ಟ್ 27ರಂದು ಭಾರತೀಯ ಕುಸ್ತಿ ಫೆಡರೇಷನ್ ಆಯೋಜಿಸಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಸ್ಪರ್ಧಿಸದಿರಲು ಅವರು ತೀರ್ಮಾನಿಸಿರುವುದಾಗಿ 23 ವರ್ಷದ ರವಿ ಹೇಳಿದ್ದಾರೆ. ಸರಿಯಾಗಿ ಅಭ್ಯಾಸ ನಡೆಸದೇ ಆಯ್ಕೆ ಟ್ರಯಲ್ಸ್‌ನಲ್ಲಿ ನಾನು ಭಾಗವಹಿಸಲು ಬಯಸುವುದಿಲ್ಲ. ಅಭ್ಯಾಸ ನಡೆಸದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥವೇ ಇಲ್ಲ. ಈ ಕಾರಣಕ್ಕಾಗಿ ನಾನು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದೇನೆ ಎಂದು ಪಿಟಿಐಗೆ ದಹಿಯಾ ತಿಳಿಸಿದ್ದಾರೆ.
ಟೋಕಿಯೋ 2020: ಕ್ರೀಡಾ ಸಾಧಕರ ಜತೆ ಮೋದಿ ಮಾತುಕತೆಯಲ್ಲಿ ಸಿಕ್ಕ 8 ಅಂಶಗಳಿವು..!
ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಮತ್ತೊಬ್ಬ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಸಹ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಭಜರಂಗ್ ಪೂನಿಯಾ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಅನಿವಾರ್ಯವಾಗಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ.