Asianet Suvarna News Asianet Suvarna News

Neeraj Chopra: ಮೈದಾನದಲ್ಲಿ ಮಾತ್ರವಲ್ಲ ಫೀಲ್ಡ್ ನ ಹೊರಗೂ ಚಿನ್ನದ ಹುಡುಗ ಚಾಂಪಿಯನ್!

•    ಯುವ ಅಥ್ಲೀಟ್ ಗಳನ್ನ ಹುರಿದುಂಬಿಸ್ತಾರೆ ನೀರಜ್ ಚೋಪ್ರಾ
•    ತನ್ನ ಯಶಸ್ಸಿನ ದಾರಿಯನ್ನು ಬಿಚ್ಚಿಟ್ಟಿದ್ದ ಜಾವೆಲಿನ್ ಥ್ರೋ ಸ್ಟಾರ್
•    ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮಾಡುವ ಪ್ರತಿ ಟ್ವೀಟ್ ಗಳನ್ನೂ ಇದೆ ಕ್ರೀಡಾಪ್ರೀತಿ

Tokyo Olympic Javeline gold winner athlete Neeraj Chopra motivates youth to involve in sports
Author
Bengaluru, First Published Dec 7, 2021, 4:43 PM IST

ಬೆಂಗಳೂರು (ಡಿ.07): ಅಥ್ಲೆಟಿಕ್ಸ್ ನಲ್ಲಿ ಭಾರತದ ಏಕೈಕ ಒಲಿಂಪಿಕ್ ಚಾಂಪಿಯನ್ (Olympic Champion) ನೀರಜ್ ಚೋಪ್ರಾ, (Neeraj Chopra) ಟೋಕಿಯೋದಲ್ಲಿ ಸ್ವರ್ಣಕ್ಕೆ ಮುತ್ತಿಟ್ಟು ಹಲವು ತಿಂಗಳುಗಳು ಕಳೆದಿವೆ. ಆದರೆ, ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಅವರ ಚಾರ್ಮ್ ಇಂದಿಗೂ ಹಾಗೆ ಉಳಿದುಕೊಂಡಿದೆ. ಅದಕ್ಕೆ ಕಾರಣ 23 ವರ್ಷದ ಯುವ ಜಾವೆಲಿನ್ ಥ್ರೋ (Javelin Throw) ಅಥ್ಲೀಟ್ ಮಾಡುವ ಟ್ವೀಟ್ ಗಳು..! ಟೋಕಿಯೋ ಒಲಿಂಪಿಕ್ ಸ್ಟೇಡಿಯಂನಲ್ಲಿ (Olympic Stadium) ಚಿನ್ನದ ಥ್ರೋ ಎಸೆದ ಬೆನ್ನಲ್ಲಿಯೇ ಇಡೀ ಭಾರತದಲ್ಲಿ ಅವರ ಬಗ್ಗೆ ಗುಣಗಾನ ಆರಂಭವಾಗಿತ್ತು. ರಾಜಕಾರಣಿಗಳು, ಮಾಜಿ ಕ್ರೀಡಾಪಟುಗಳು, ಉದ್ಯಮಿಗಳಿಂದ ಹಿಡಿದು ದೇಶದ ಪ್ರತಿ ಪ್ರಜೆಯೂ ಅವರ ಐತಿಹಾಸಿಕ ಸಾಧನೆಗೆ ಹೆಮ್ಮೆ ಪಟ್ಟಿದ್ದರು. ಮೈದಾನದಲ್ಲಿ ಅವರ ಈ ಸಾಧನೆ ಇಡೀ ದೇಶ ಹೆಮ್ಮೆ ಪಡುವಂಥದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಬೆನ್ನಲ್ಲಿಯೇ ಅವರಿಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ದೊರೆತಿದ್ದು ಸಹಜವೇ. ಆದರೆ, ಮೈದಾನದ ಹೊರಗೆ ಅವರ ಕೆಲವೊಂದು ಕಾರ್ಯಗಳು ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಫೈನಲ್ ವೇಳೆ ಪಾಕಿಸ್ತಾನದ ಆರ್ಶದ್ ನದೀಂ, (Arshad Nadeem) ನೀರಜ್ ಚೋಪ್ರಾ ಅವರ ಜಾವೆಲಿನ್ ತೆಗೆದುಕೊಂಡಿದ್ದ ಪ್ರಕರಣದಲ್ಲಿ ತಮ್ಮ ಹೆಸರನ್ನು ಬಳಸಿಕೊಂಡು ದ್ವೇಷ-ಪ್ರಚೋದನೆ ಮಾಡದಂತೆ ವಿಡಿಯೋ ಸಂದೇಶವನ್ನು ನೀಡಿದ್ದರು. ಅನುಭವಿ ಹಾಗೂ ಹಿರಿಯ ಅಥ್ಲೀಟ್ ಗಳೂ ಮೌನ ವಹಿಸುವ ಇಂಥ ಪ್ರಕರಣಗಳಲ್ಲಿ, ನೀರಜ್ ಚೋಪ್ರಾ ತಮ್ಮ ನಿಲುವನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಿದ್ದರು.

ಟೋಕಿಯೋ ಒಲಿಂಪಿಕ್ಸ್ (Tokyo Olympics) ಮುಕ್ತಾಯದ ಬಳಿಕ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ (Tokyo Paralympics) ಸಮಯದಲ್ಲೂ ನೀರಜ್ ಚೋಪ್ರಾ, ಪ್ರತಿ ಅಥ್ಲೀಟ್ ನ ಸಾಧನೆಗೆ ಹೆಮ್ಮೆ ಪಟ್ಟು ಟ್ವೀಟ್ ಮಾಡಿದ್ದರು. ಅವನಿ ಲೆಖಾರಾ (Avani Lekhara), ದೇವೇಂದ್ರ ಜಜರಿಯಾ (Devendra Jhajharia), ಸುಂದರ್ ಸಿಂಗ್ ಗುರ್ಜರ್ (Sundar Singh Gurjar), ಸುಮಿತ್‌ ಆಂಟಿಲ್ (Sumit Antil) ಇವರೆಲ್ಲರ್ ಭರ್ಜರಿ ನಿವರ್ಹಣೆಯನ್ನು ಮೆಚ್ಚಿ ನೀರಜ್ ತಮ್ಮ ಟ್ವಿಟರ್ ಪುಟದಲ್ಲಿ ಬರೆದಿದ್ದರು. ಅದರೊಂದಿಗೆ ನಮ್ಮ ಪ್ಯಾರಾಲಿಂಪಿಕ್ ಅಥ್ಲೀಟ್ ಗಳನ್ನು ಬೆಂಬಲಿಸುವಂತೆ ಅವರು ಮಾಡಿರುವ ಟ್ವೀಟ್ ಗಳು ಗಮನಸೆಳೆಯುತ್ತದೆ.

 

ಚಿನ್ನದ ಹುಡುಗನನ್ನು ಕೊಂಡಾಡಿದ ಮೋದಿ

ತಮ್ಮ ಯಶಸ್ಸನ್ನು ನೀರಜ್ ಚೋಪ್ರಾ ಯುವ ಅಥ್ಲೀಟ್ ಗಳನ್ನು ಹುರಿದುಂಬಿಸಲು ಅತ್ಯಂತ ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್ ಅಲ್ಲದೆ, ನೈರೋಬಿಯಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ ಷಿಪ್ (Junior World Championship) ಸ್ಪರ್ಧೆಗಳಲ್ಲಿ ಮಿಂಚಿದ ಭಾರತೀಯ ಅಥ್ಲೀಟ್ ಗಳನ್ನೂ ಪ್ರೋತ್ಸಾಹಿಸಿ ಮೆಚ್ಚುಗೆಯ ಸಾಲುಗಳನ್ನು ಬರೆದಿದ್ದರು. ಸಾಕಷ್ಟು ಯಶಸ್ಸು, ಗೌರವ ಸಿಕ್ಕಿದ್ದರೂ ಈಗಲೂ ನೀರಜ್ ಚೋಪ್ರಾ ಸರಳವಾಗಿ ಇರುವುದನ್ನು ಇಷ್ಟಪಟ್ಟಿದ್ದಾರೆ. ಇನ್ನಷ್ಟು ಯುವಕರು ಕ್ರೀಡೆಯ ಬಗ್ಗೆ ಗಮನ ನೀಡಿ ದೇಶಕ್ಕೆ ಹೆಮ್ಮೆ ತರುವಂಥ ಕೆಲಸ ಮಾಡಬೇಕು ಎನ್ನುವುದನ್ನು ಆಶಿಸುತ್ತಾರೆ.

ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

ಕ್ರೀಡಾಳುಗಳ ಜೀವನದಲ್ಲಿ ಗಾಯಗಳು ದೊಡ್ಡ ಹಿನ್ನಡೆ. ಇದಕ್ಕೆ ತಮ್ಮ ಉದಾಹರಣೆಯನ್ನೇ ನೀಡಿ ಅವರು ಮಾಡಿರುವ ಟ್ವೀಟ್ ಗಳು ಅದೇ ಸ್ಥಿತಿಯಲ್ಲಿರುವ ಇನ್ನಷ್ಟು ಯುವ ಕ್ರೀಡಾಪಟುಗಳಿಗೆ ಸಾಧನೆ ಮಾಡುವ ಉತ್ಸಾಹವನ್ನು ಇನ್ನಷ್ಟು ತುಂಬಬಹುದು. ಈ ಎಲ್ಲದರ ನಡುವೆ, ಒಲಿಂಪಿಕ್ಸ್ ನಲ್ಲಿ ಬರೀ ಒಂದು ಚಿನ್ನಕ್ಕೆ ಮಾತ್ರವೇ ನಾವು ತೃಪ್ತಿಪಡಬಾರದು ಎನ್ನುವ ಎಚ್ಚರಿಕೆಯನ್ನೂ ಅವರು ತಮ್ಮ ಟ್ವೀಟ್ ಗಳಲ್ಲಿ ನೀಡುತ್ತಾರೆ. ಶಾಲಾ ಮಕ್ಕಳ ಜೊತೆ ಸಂವಾದ, ವ್ಯಾಯಾಮ ಹಾಗೂ ಡಯಟ್ ಗಳ ಮಹತ್ವವನ್ನೂ ಅವರು ತಮ್ಮ ಟ್ವೀಟ್ ಗಳಲ್ಲಿ ಬರೆಯುತ್ತಾರೆ.

Follow Us:
Download App:
  • android
  • ios