ಟ್ವಿಟ್ಟರ್‌ನಲ್ಲಿ ನೀರಜ್‌ ಚೋಪ್ರಾ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿಕ್ರೀಡಾ ಕ್ಷೇತ್ರದಲ್ಲಿ ಮಿಂಚುವಂತೆ ಮಕ್ಕಳಿಗೆ ನೀರಜ್‌ ಚೋಪ್ರಾ ಪ್ರೇರಣೆ75 ಶಾಲೆಗಳ ಮಕ್ಕಳೊಂದಿಗೆ ಆಡುವ ಜೊತೆ ಸಂವಾದ ನಡೆಸಿದ ಚಿನ್ನದ ಹುಡುಗ

ಅಹಮದಾಬಾದ್‌(ಡಿ.5): ಶಾಲಾ ಮಕ್ಕಳನ್ನು ಮೈದಾನದಲ್ಲಿ ಮಿಂಚುವಂತೆ ಪ್ರೇರೇಪಿಸಿದ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ(Neeraj Chopra) ಅವರು ಗುಜರಾತ್‌ನ ಅಹ್ಮದಾಬಾದ್‌(Ahmedabad)ನಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಸುಮಾರು 75 ಶಾಲೆಗಳ ಮಕ್ಕಳೊಂದಿಗೆ ಸಂವಾದ ನಡೆಸಿದರು. ಜೊತೆಗೆ ಅಲ್ಲಿ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡುವಂತೆ ಮಕ್ಕಳಿಗೆ ಪ್ರೇರೇಪಿಸಿದರು. ಈ ಭೇಟಿಯ ಕ್ಷಣಗಳನ್ನು ನೀರಜ್‌ ಚೋಪ್ರಾ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗಳನ್ನು ಹಂಚಿಕೊಂಡು ರಿಟ್ವಿಟ್‌ ಮಾಡಿದ ಪ್ರಧಾನಿ, ನೀರಜ್‌ ಅವರನ್ನು ಕೊಂಡಾಡಿದ್ದಾರೆ. 

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸರಣಿ ಟ್ವಿಟ್‌ ಮಾಡಿದ ಮೋದಿ, ಇದು ನೀರಜ್‌ ಚೋಪ್ರಾ ಅವರು ಕೈಗೊಂಡ ಉತ್ತಮ ನಿರ್ಧಾರವಾಗಿದೆ. ಯುವ ವಿದ್ಯಾರ್ಥಿಗಳ ನಡುವೆ ಹೋಗಿ ಅವರನ್ನು ಕ್ರೀಡೆ ಮತ್ತು ಫಿಟ್‌ನೆಸ್‌ ಹೊಂದುವಂತೆ ಪ್ರೇರೇಪಿಸಿದ್ದು ಒಳ್ಳೆಯ ಪ್ರಯತ್ನ. ಇಂತಹ ಪ್ರಯತ್ನಗಳು ಮಕ್ಕಳನ್ನು ಕ್ರೀಡೆ ಮತ್ತು ವ್ಯಾಯಾಮದ ಕಡೆಗೆ ಕುತೂಹಲದಿಂದ ನೋಡುವಂತೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. 

ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!

ಶಾಲಾ ಭೇಟಿ ವೇಳೆ ಅವರು ಮಕ್ಕಳೊಂದಿಗೆ ಆರ್ಚರಿ, ವಾಲಿಬಾಲ್, ಮತ್ತು ಜಾವೆಲಿನ್ ಥ್ರೋ ಮುಂತಾದವುಗಳನ್ನು ಆಡಿದರು. ಜಾವೆಲಿನ್ ಥ್ರೋ ದಲ್ಲಿ ನೀರಜ್‌ ದೇಶಕ್ಕೆ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದು ತಂದಿದ್ದರು. ಮತ್ತೊಂದು ಟ್ವಿಟ್‌ನಲ್ಲಿ ಮಕ್ಕಳೊಂದಿಗೆ ನೀರಜ್‌ ಚೋಪ್ರಾ ಸಂವಾದ ಮಾಡುತ್ತಿರುವ ವಿಡಿಯೋವನ್ನು ಶೇರ್‌ ಮಾಡಿದ ಪ್ರಧಾನಿ ಮೋದಿ, ಇದು ನಿಮ್ಮನ್ನು ಖುಷಿಪಡಿಸಬಹುದು. ನೀವು ಇದನ್ನು ಹೀಗೆ ಮುಂದುವರೆಸಿ ಮಕ್ಕಳನ್ನು ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಮಿಂಚುವಂತೆ ಪ್ರೇರೇಪಿಸುತ್ತಿರಿ ಎಂದು ಬರೆದುಕೊಂಡಿದ್ದಾರೆ. 

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

ಇನ್ನು ವಿದ್ಯಾರ್ಥಿಗಳೊಂದಿಗೆ ಸಂವಾದದ ಬಳಿಕ ಫೋಟೋಗಳನ್ನು ಟ್ವಿಟ್ಟರ್‌(Twitter)ನಲ್ಲಿ ಶೇರ್‌ ಮಾಡಿದ ನೀರಜ್‌ ಚೋಪ್ರಾ, ಸಂಸ್ಕಾರಧಾಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಒಂದು ಸುಂದರವಾದ ದಿನ ಕಳೆದೆ. ಅವರೊಂದಿಗೆ ಆಟವಾಡಿದೆ. ಹಾಗೂ ವ್ಯಾಯಾಮ ಹಾಗೂ ಫಿಟ್‌ನೆಸ್‌ನ ಅಗತ್ಯದ ಬಗ್ಗೆ ಮಾತನಾಡಿದೆ. ಶಾಲೆಯೊಂದು ಕ್ರೀಡೆ ಹಾಗೂ ಶಿಕ್ಷಣ ಎರಡಕ್ಕೂ ಸಮನಾದ ಆದ್ಯತೆಯನ್ನು ನೀಡುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದರು.

Scroll to load tweet…

ಅದೇ ಕಾರ್ಯಕ್ರಮದ ಮತ್ತಷ್ಟು ಫೋಟೋಗಳನ್ನು ಶೇರ್‌ ಮಾಡಿದ ಪ್ರಧಾನಿ, ಇದೊಂದು ಅತ್ಯುತ್ತಮವಾದ ಕ್ಷಣ, ನೀರಜ್‌ ಅಹ್ಮದಾಬಾದ್‌(Ahmedabad)ನ ಸಂಸ್ಕಾರ್‌ಧಾಮ್‌ ಶಾಲೆ(Sanskardham School)ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ನಗರದ 75 ಶಾಲೆಗಳ ಮಕ್ಕಳನ್ನು ಭೇಟಿಯಾಗಿದ್ದಾರೆ ಎಂದು ಟ್ವಿಟ್‌ ಮಾಡಿದ್ದಾರೆ. 

ನೀರಜ್‌ ಚೋಪ್ರಾ ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಆರಂಭಿಸಿದ ಕ್ರೀಡೆಗೆ ಸಂಬಂಧಿಸಿದಂತೆ ಯುವ ಸಮೂಹವನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಒಲಿಂಪಿಯನ್‌ ಹಾಗೂ ಪ್ಯಾರಾ ಒಲಿಂಪಿಯನ್‌ಗಳನ್ನು ಯುವ ಸಮೂಹಕ್ಕೆ ಫಿಟ್ನೆಸ್ ಆಧಾರಿತ ಚಟುವಟಿಕೆಗಳಲ್ಲಿ ಕೆಲಸ ಮಾಡಲು ಮತ್ತು ಸಮತೋಲಿತ ಆಹಾರವನ್ನು ತಿನ್ನಲು ಪ್ರೇರೇಪಿಸುಂತೆ ಮನವಿ ಮಾಡಿದರು. 

Scroll to load tweet…

ಈ ಕಾರ್ಯಕ್ರಮದಡಿ ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ಕ್ರೀಡಾಪಟುಗಳಾದ ತರುಣ್‌ ದೀಪ್‌ ರೈ(Tarundeep Rai)(ಅರ್ಚರಿ) ಸಾರ್ಥಕ್‌ ಭಂಭ್ರಿ(ಅಥ್ಲೆಟಿಕ್ಸ್), ಸುಶೀಲ್‌ ದೇವಿ(Sushila Devi)(ಜುಡೋ), ಕೆ.ಸಿ. ಗಣಪತಿ( KC Ganapathy), ಹಾಗೂ ವರುಣ್‌ ಥಕ್ಕರ್‌(ಸೈಲಿಂಗ್‌) ಮುಂತಾದವರು ದೇಶದ್ಯಾಂತ ಇರುವ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಬರುವಂತೆ ಪ್ರೋತ್ಸಾಹಿಸುವ ಜೊತೆ ಸ್ಫೂರ್ತಿ ತುಂಬಲಿದ್ದಾರೆ. ಇವರಲ್ಲದೇ ಪ್ಯಾರಾ ಒಲಿಂಪಿಯನ್‌ಗಳಾದ ಅವನಿ ಲೆಖರ, (ಪ್ಯಾರಾ ಶೂಟಿಂಗ್‌), ಭಾವಿನಾ ಪಟೇಲ್(ಪ್ಯಾರಾ ಟೇಬಲ್‌ ಟೆನ್ನಿಸ್) ಹಾಗೂ ದೇವೇಂದ್ರ ಝಝರಿಯಾ(ಪ್ಯಾರಾ ಅಥ್ಲೆಟಿಕ್ಸ್‌) ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.