Asianet Suvarna News Asianet Suvarna News

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

*ರಾಷ್ಟ್ರಪತಿಯವರಿಂದ 2021ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
*ದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮ
*ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ
*35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ 
*ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ
 

President Ram Nath Kovind on Saturday handed out the National Sports Awards 2021 in Delhi mnj
Author
Bengaluru, First Published Nov 13, 2021, 6:25 PM IST

ನವದೆಹಲಿ(ನ.13): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ನವದೆಹಲಿಯಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ (National Sports Award) ಮಾಡಿದ್ದಾರೆ. ಶನಿವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramanath Kovind) ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 12 ಆಟಗಾರರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನದಂದು (National Sports Day) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ, ಆದರೆ ಒಲಂಪಿಕ್ ಗೇಮ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳ ಕಾರಣದಿಂದ ಈ ವರ್ಷ ಅವುಗಳನ್ನು ನವೆಂಬರ್ 13 ಕ್ಕೆ ಮುಂದೂಡಲಾಗಿತ್ತು.

Ind vs NZ ಟಿ20 ಸರಣಿ ವೀಕ್ಷಿಸಲು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ, ಆದರೆ ಷರತ್ತುಗಳು ಅನ್ವಯ..!.

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಹಾಗೂ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಕಟಿಸಿತ್ತು. ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ನೀರಜ್ ಚೋಪ್ರಾ(Neeraj Chopra) ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟಿಸಿತ್ತು. .

ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ:

ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲೊವ್ಲಿನಾ (ಬಾಕ್ಸಿಂಗ್), ಶ್ರೀಜೇಶ್ ಪಿಆರ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್ಬಾಲ್), ಮತ್ತು ಮನ್‌ಪ್ರೀತ್ ಸಿಂಗ್ (ಹಾಕಿ) ಪ್ರತಿಷ್ಠಿತ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ(Arjuna Award) ಘೋಷಿಸಲಾಗಿದೆ. ಅರ್ಜುನ್ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳ ವಿವರ ಇಲ್ಲಿದೆ

ಅರ್ಪಿಂದರ್ ಸಿಂಗ್(ಅಥ್ಲಿಟಿಕ್ಸ್), ಸಿಮ್ರನ್‌ಜಿತ್ ಕೌರ್(ಬಾಕ್ಸಿಂಗ್), ಶಿಖರ್ ಧವನ್(ಕ್ರಿಕೆಟ್) ಸಿಎ ಭವಾನಿ ದೇವಿ(ಫೆನ್ಸಿಂಗ್), ಮೋನಿಕಾ(ಹಾಕಿ), ವಂದನಾ ಕಟಾರಿಯಾ(ಹಾಕಿ), ಸಂದೀಪ್ ನರ್ವಾಲ್(ಕಬಡ್ಡಿ)ಹಿಮಾನಿ ಉತ್ತಮ್ ಪರಾಬ್(ಮಲ್ಲಕಂಬ), ಅಭಿಷೇಕ್ ವರ್ಮಾ(ಶೂಟಿಂಗ್), ಅಂಕಿತಾ ರೈನಾ(ಟೆನಿಸ್), ದೀಪಕ್ ಪೂನಿಯಾ(ರಸ್ಲಿಂಗ್) ದಿಲ್‌ಪ್ರೀತ್ ಸಿಂಗ್(ಹಾಕಿ), ಹರ್ಮನ್‌ಪ್ರೀತ್ ಸಿಂಗ್(ಹಾಕಿ), ರೂಪಿಂದರ್ ಪಾಲ್ ಸಿಂಗ್ (ಹಾಕಿ),  ಸುರೇಂದರ್ ಕುಮಾರ್ (ಹಾಕಿ), ಅಮಿತ್ ರೋಹಿದಾಸ್ (ಹಾಕಿ). 

Neeraj Chopra Biopic: ತಮ್ಮ ಜೀವನಾಧಾರಿತ ಸಿನೆಮಾ ಬಗ್ಗೆ ಖಡಕ್ ಸ್ಪಷ್ಟನೆ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ

ಬೀರೇಂದ್ರ ಲಾಕ್ರಾ (ಹಾಕಿ), ಸುಮಿತ್ (ಹಾಕಿ), ನೀಲಕಂಠ ಶರ್ಮಾ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ವಿವೇಕ್ ಸಾಗರ್ ಪ್ರಸಾದ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಮನದೀಪ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ವರುಣ್ ಕುಮಾರ್ (ಹಾಕಿ), ಸಿಮ್ರಂಜೀತ್ ಸಿಂಗ್ (ಹಾಕಿ), ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್), ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸುಹಾಶ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್), ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ), ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್:

ಸರ್ಪಾಲ್ ಸಿಂಗ್ (ಹಾಕಿ)
ಅಶನ್ ಕುಮಾರ್(ಕಬಡ್ಡಿ)
T. P. ಔಸೆಫ್ (ಅಥ್ಲೆಟಿಕ್ಸ್)
ಸರ್ಕಾರ್ ತಲ್ವಾರ್ (ಕ್ರಿಕೆಟ್)
ತಪನ್ ಕುಮಾರ್  (ಈಜು)

ಮೇಜರ್ ಧ್ಯಾನ್‌ಚಂದ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ 

ದೇವಿಂದರ್ ಸಿಂಗ್ ಗರ್ಚಾ( ಹಾಕಿ)
ವಿಕಾಸ್ ಕುಮಾರ್ (ಕಬಡ್ಡಿ)
ಸಜ್ಜನ್ ಸಿಂಗ್( ಕುಸ್ತಿ)
ಲೇಖಾ ಕೆ.ಸಿ. (ಬಾಕ್ಸಿಂಗ್)
ಅಭಿಜೀತ್ ಕುಂಟೆ (ಚೆಸ್)

Follow Us:
Download App:
  • android
  • ios