ಹೋಬಾರ್ಟ್‌(ಜ.19): ಸುಮಾರು 2 ವರ್ಷಗಳ ಬಳಿಕ ಟೆನಿಸ್‌ಗೆ ವಾಪಸಾಗಿರುವ ಭಾರತದ ತಾರೆ ಸಾನಿಯಾ ಮಿರ್ಜಾ ತಮ್ಮ ಪುನಾರಗಮನವನ್ನು ಭರ್ಜರಿ ಯಶಸ್ಸಿನೊಂದಿಗೆ ಆರಂಭಿಸಿದ್ದಾರೆ.

ಹೋಬಾರ್ಟ್‌ ಓಪನ್‌: ಫೈನಲ್‌ಗೆ ಸಾನಿಯಾ ಜೋಡಿ

ಇಲ್ಲಿ ಶನಿವಾರ ನಡೆದ ಹೋಬಾರ್ಟ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್‌ ಫೈನಲ್‌ನಲ್ಲಿ ಸಾನಿಯಾ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್‌ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಸಾನಿಯಾ-ನಾಡಿಯಾ ಜೋಡಿ, ಚೀನಾದ ಶೂಯಿ ಪೆಂಗ್‌ ಹಾಗೂ ಶೂಯಿ ಜಾಂಗ್‌ ಜೋಡಿ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.

ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!

ಒಟ್ಟು 1 ಗಂಟೆ 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿ ಅತ್ಯದ್ಭುತ ಆಟ ಪ್ರದರ್ಶಿಸಿತು. ತಾಯಿಯಾದ ಬಳಿಕ 33 ವರ್ಷದ ಸಾನಿಯಾಗೆ ಇದು ಮೊದಲ ಟೆನಿಸ್‌ ಟೂರ್ನಿಯಾಗಿದೆ. ಹೋಬಾರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ, ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಂ ಆಸ್ಪ್ರೇಲಿಯಾ ಓಪನ್‌ಗೆ ಸಿದ್ಧವಾಗಿರುವ ಸಂದೇಶ ರವಾನಿಸಿದ್ದಾರೆ.