ಟೊಕಿಯೋ ಒಲಿಂಪಿಕ್ಸ್, ವಿಂಬಲ್ಡನ್‌ ಟೂರ್ನಿಯಿಂದ ಹಿಂದೆ ಸರಿದ ರಾಫೆಲ್ ನಡಾಲ್!

  • ಪ್ರತಿಷ್ಠಿತ ಟೂರ್ನಿ ಆಡುತ್ತಿಲ್ಲ ಎಂದು ಟೆನಿಸ್ ದಿಗ್ಗಜ ನಡಾಲ್
  • ಮಹತ್ವದ ನಿರ್ಧಾರ ಪ್ರಕಟಿಸಿದ 20 ಗ್ರ್ಯಾಂಡ್ ಸ್ಲಾಂ ವಿಜೇತ ನಡಾಲ್
  • ಕಾರಣ ಬಹಿರಂಗ ಪಡಿಸಿದ ರಾಫೆಲ್ ನಡಾಲ್
Tennis Rafael Nadal withdraws from Tokyo Olympics and Wimbledon due to Fitness and prolong career ckm

ಸ್ಪೇನ್(ಜೂ.17):  ಟೆನಿಸ್ ದಿಗ್ಗಜ, 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ. ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಹಾಗೂ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ನಡಾಲ್ ಘೋಷಿಸಿದ್ದಾರೆ. ತನ್ನ ಮುಂದಿನ ಕರಿಯರ್ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನಡಾಲ್ ಹೇಳಿದ್ದಾರೆ.

ಫ್ರೆಂಚ್‌ ಓಪನ್‌ ಟೆನಿಸ್‌ ಸ್ಟೇಡಿಯಂನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ!.

ಎಲ್ಲರಿಗೂ ಹಾಯ್,  ಈ ವರ್ಷದ ವಿಂಬಲ್ಡನ್‌ ಚಾಂಪಿಯನ್‌ಶಿಪ್ ಮತ್ತು ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸದಿರಲು ನಾನು ನಿರ್ಧರಿಸಿದ್ದೇನೆ.  ಈ ನಿರ್ಧಾರ ಸುಲಭವಾಗರಿಲಿಲ್ಲ.  ಆದರೆ ನನ್ನ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು, ತಂಡದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲರ ಸಲಹೆ ಸ್ವೀಕರಿಸಿದ ಇದು ಸರಿಯಾದ ನಿರ್ಧಾರ ಎಂದು ಭಾವಿಸಿದ್ದೇನೆ ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ.

 

ಕರಿಯರ್ ವಿಸ್ತರಿಸುವುದು ಸಂತೋಷವನ್ನುಂಟುಮಾಡುವ ವಿಚಾರ. ಮುಂದಿನ ಕರಿಯರ್ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಉನ್ನತ ಮಟ್ಟದಲ್ಲಿ ಸ್ಪರ್ಧಿಸುವುದು ಹಾಗೂ ವೃತ್ತಿಪರ ಗುರಿಗಳಿಗಾಗಿ ಗರಿಷ್ಠ ಮಟ್ಟದಲ್ಲಿ ಸ್ಪರ್ಧೆ ಮಾಡಲು ಇದು ಅನಿವಾರ್ಯವಾಗಿದೆ ಎಂದು ನಡಾಲ್ ಹೇಳಿದ್ದಾರೆ.

 

'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!

ಇತ್ತಿಗೆ ಅಂತ್ಯಗೊಂಡ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ  ರಾಫೆಲ್ ನಡಾಲ್ ಮುಗ್ಗರಿಸಿದ್ದರು. ಸೆಮೀಸ್ ಫೈಟ್‌ನಲ್ಲಿ ನೋವಾಕ್ ಜೋಕೋವಿಚ್ ವಿರುದ್ಧ 6-3, 3-6, 6-7, 2-6 ಅಂತರದಲ್ಲಿ ಸೋಲು ಅನುಭವಿಸಿದ್ದರು.

ವಿಂಬಲ್ಡನ್ ಟೂರ್ನಿ ಜೂನ್ 28 ರಂದು ಆರಂಭಗೊಳ್ಳಲಿದೆ. ಇನ್ನು ಟೊಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಫ್ರೆಂಚ್ ಓಪನ್ ಟೂರ್ನಿ ಆಡಿರುವ 35 ವರ್ಷದ ನಡಾಲ್, ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios