ಫ್ರೆಂಚ್‌ ಓಪನ್‌ ಟೆನಿಸ್‌ ಸ್ಟೇಡಿಯಂನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ!

*  ಸ್ಪೇನ್‌ ಟೆನಿಸ್‌ ದಿಗ್ಗಜ ನಡಾಲ್‌ಗೆ ವಿಶೇಷ ಗೌರವ ಸಲ್ಲಿಸಿದ ಫ್ರೆಂಚ್ ಟೆನಿಸ್ ಫೆಡರೇಷನ್‌

* 20 ಟೆನಿಸ್‌ ಗ್ರ್ಯಾನ್‌ಸ್ಲಾಂ ಒಡೆಯ ರಾಫೆಲ್‌ ನಡಾಲ್‌

* ಕಿಂಗ್‌ ಆಫ್‌ ಕ್ಲೇ ಕೋರ್ಟ್‌ ಖ್ಯಾತಿಯ  ಆಟಗಾರ ರಾಫೆಲ್ ನಡಾಲ್

French Open Tennis Legend Rafael Nadal Statue Revealed At Roland Garros kvn

ಪ್ಯಾರಿಸ್(ಮೇ.29)‌: ದಾಖಲೆಯ 13 ಬಾರಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ವಿಜೇತ, ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ರ ಪತ್ರಿಮೆಯನ್ನು ಫ್ರೆಂಚ್‌ ಓಪನ್‌ ನಡೆಯುವ ರೋಲ್ಯಾಂಡ್‌ ಗ್ಯಾರೋಸ್‌ ಕ್ರೀಡಾಂಗಣದಲ್ಲಿ ಗುರುವಾರ ಅನಾವರಣಗೊಳಿಸಲಾಯಿತು. 

ಸ್ವತಃ ನಡಾಲ್‌ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಮೆಯನ್ನು ಸ್ಟೀಲ್‌ನಿಂದ ನಿರ್ಮಿಸಿದ್ದು, ಪ್ರತಿಮೆಯು 3 ಮೀಟರ್‌ ಎತ್ತರ, 5 ಮೀಟರ್‌ ಅಗಲವಿದೆ. ರೋಲ್ಯಾಂಡ್‌ ಗ್ಯಾರೋಸ್‌ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಮೊದಲ ಪ್ರತಿಮೆ ಇದು ಎನಿಸಿದೆ. ಈ ಪ್ರತಿಮೆ ಮೂಲಕ ಕಿಂಗ್ ಆಫ್‌ ಕ್ಲೇ ಕೋರ್ಟ್‌ ಖ್ಯಾತಿಯ ನಡಾಲ್‌ಗೆ ವಿನೂತನ ಗೌರವ ಸಲ್ಲಿಸಲಾಗಿದೆ

ಈ ಪ್ರತಿಮೆಯೂ ಮನೋಜ್ಞವಾಗಿದೆ ಎಂದು ನಡಾಲ್‌ ಹೇಳಿದ್ದಾರೆ. ಈ ಪ್ರತಿಮೆ ತುಂಬಾ ಸಹಜವಾಗಿ ಮೂಡಿ ಬಂದಿದೆ. ತುಂಬಾ ಅಚ್ಚುಕಟ್ಟಾಗಿ, ಆಧುನಿಕತೆಯ ಮೆರಗಿನೊಂದಿಗೆ ಈ ಪ್ರತಿಮೆ ನಿರ್ಮಿಸಲಾಗಿದ್ದು, ಇದು ನೋಡಿ ಖುಷಿಯಾಯಿತು. ಈ ರೀತಿಯ ಪ್ರತಿಮೆ ನಿರ್ಮಾಣವಾಗಿದ್ದು, ಅದರಲ್ಲೂ ಇಂತಹ ಪ್ರತಿಷ್ಟಿತ ಸ್ಥಳ ಈ ಪ್ರತಿಮೆ ಸ್ಥಾಪಿಸಲಾಗಿದೆ ಎಂದರೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?. ಈ ಯೋಜನೆ ರೂಪಿಸಿ ಅನುಷ್ಟಾನಗೊಳಿಸಿದ ಫ್ರೆಂಚ್ ಟೆನಿಸ್ ಫೆಡರೇಷನ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಡಾಲ್ ಹೇಳಿದ್ದಾರೆ.

ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯು ಮೇ 30ರಿಂದ ಆರಂಭವಾಗಲಿದೆ. ಸದ್ಯ ರಾಫೆಲ್ ನಡಾಲ್‌ 20 ಗ್ರ್ಯಾನ್‌ಸ್ಲಾಂಗಳ ಒಡೆಯರಾಗಿದ್ದು, ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೀಗ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಮತ್ತೊಂದು ಗ್ರ್ಯಾನ್‌ಸ್ಲಾಂ ಗೆಲ್ಲುವ ಮೂಲಕ ಫೆಡರರ್ ದಾಖಲೆ ಅಳಿಸಿಹಾಕಲು ಎಡಗೈ ಆಟಗಾರ ಎದುರು ನೋಡುತ್ತಿದ್ದಾರೆ.

Latest Videos
Follow Us:
Download App:
  • android
  • ios