ಮಿಮಿಕ್ರಿ ಮಾತ್ರವಲ್ಲ, ನಟನೆಗೂ ಸೈ ಎಂದ ಟೆನಿಸ್ ಪಟು ಜೋಕೋವಿಚ್!
ನಂಬರ್ 2 ಟೆನಿಸ್ ಪಟು ನೋವಾಕ್ ಜೋಕೋವಿಚ್ ಮಿಮಿಕ್ರಿ ಹೊಸದೇನಲ್ಲ. ಆದರೆ ನಟನೆ ಹೊಸದು. ಇದೀಗ ಜೋಕೋವಿಚ್ ನಟನೆಯಲ್ಲೂ ಸೈ ಎನಿಸಿದ್ದಾರೆ. ಜೊಕೋವಿಚ್ ನಟನೆಯ ವಿಡಿಯೋ ಇಲ್ಲಿದೆ.
ಸರ್ಬಿಯಾ(ಡಿ.09): ಟೆನಿಸ್ ದಿಗ್ಗದ ಸರ್ಬಿಯಾದ ನೋವಾಕ್ ಜೋಕೋವಿಚ್ ವಿಶ್ವದ ನಂಬರ್ 2 ಟೆನಿಸ್ ಪಟು. ಟೆನಿಸ್ ಜೊತೆಗೆ ಜೋಕೋವಿಚ್ ಅನುಕರಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಟೆನಿಸ್ ಕೋರ್ಟ್‌ನಲ್ಲಿ ಹಲವು ದಿಗ್ಗಜರನ್ನು ಅನುಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ಜೋಕೋವಿಚ್ ನಟನೆಯಲ್ಲೂ ವೃತ್ತಿಪರ ನಟರನ್ನೂ ಮೀರಿಸಿದ್ದಾರೆ.
ಇದನ್ನೂ ಓದಿ: ಸುಮೋ ಪಟುಗಳೊಂದಿಗೆ ಜೋಕೋವಿಚ್!
ಜೊಕೋವಿಚ್ ಪಿಯಾನೋ ನುಡಿಸುವಂತೆ ನಟಿಸಿದ್ದಾರೆ. ಪಿಯಾನೋ ಕೀ ಬೋರ್ಡ್ ಮೇಲೆ ಮಿಂಚಿನ ಕೈಚಳಕ ಹಾಗೂ ತಲ್ಲೀನತೆ ತೋರಿದ್ದಾರೆ. ಅದ್ಬುತವಾಗಿ ಪಿಯಾನೋ ನುಡಿಸುತ್ತಿದ್ದಾರೆ ಅಂದುಕೊಂಡರೆ ತಪ್ಪು. ಜೋಕೋವಿಚ್ ಪಿಯಾನೋ ಕೀ ಬೋರ್ಡ್ ಮೇಲೆ ಕೈಯಾಡಿಸಿದ್ದಾರೆ ಅಷ್ಟೆ.ಅಸಲಿಗೆ ಪಿಯಾನೋ ನುಡಿಸಿದ್ದು, ಉಝ್‍ಬೆಕ್-ಅಮೆರಿಕದ ಖ್ಯಾತ ಪಿಯಾನಿಸ್ಟ್ ಲೋಲಾ ಅಸ್ಟೋನೋವಾ.
ಇದನ್ನೂ ಓದಿ: ಸತತ 2ನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ಜೊಕೊವಿಚ್!
ಆರಂಭದಲ್ಲಿ ಜೋಕೋವಿಚ್ ಪಿಯಾನೋ ನುಡಿಸುವಂತೆ ಕಾಣುತ್ತಿದೆ. ಆದರೆ ಕ್ಯಾಮರಾ ಕಣ್ಣು ಬಲ ಬದಿಗೆ ಸರಿದಾಗ ಲೋಲೋ ಪಿಯಾನೋ ನುಡಿಸುತ್ತಿರುವುದು ಕಾಣುತ್ತದೆ. ಅಂತ್ಯದಲ್ಲಿ ಲೋಲಾ, ಉತ್ತಮವಾಗಿ ನುಡಿಸಿದೆ ವಿದ್ಯಾರ್ಥಿ ಎಂದು ಜೋಕೋವಿಚ್‌ಗೆ ಹೇಳಿದ್ದಾರೆ. ಇದಕ್ಕೆ ಜೋಕೋವಿಚ್ ಧನ್ಯವಾದ ಪ್ರೋಫೆಸರ್ ಎಂದು ಪ್ರತಿಕ್ರಿಯಿಸಿದ್ದಾರೆ.