ಟೆನಿಸ್ ದಿಗ್ಗಜ ನೋವಾಕ್ ಜೊಕೊವಿಚ್ ಇದೀಗ ಟೆನಿಸ್ ಕೋರ್ಟ್ ಬದಲು, ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಪಾನ್‌ನ ಸುಮೋ ಪಟುಗಳೊಂದಿಗೆ ಜೋಕೋವಿಚ್ ಕುಸ್ತಿ ಮೂಲಕ ಗಮನಸೆಳೆದಿದ್ದಾರೆ.

ಟೋಕಿ​ಯೋ(ಜಪಾ​ನ್‌)ಅ.01): ಅತ್ಯು​ತ್ತಮ ಫಿಟ್ನೆಸ್‌ ಹೊಂದಿ​ರು​ವ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್‌ ಜೋಕೋ​ವಿಚ್‌, ಸೋಮ​ವಾರ ಇಲ್ಲಿನ ನಿವೃತ್ತ ಸುಮೋ ಪ​ಟು​ಗಳ ಜೊತೆ ಸೆಣ​ಸುವ ಸಾಹಸಕ್ಕೆ ಕೈಹಾ​ಕಿ​ದರು. 32ರ ಹರೆ​ಯದ ಆಟ​ಗಾರ ಜೋಕೋವಿಚ್‌ ಜಪಾನ್‌ ಓಪನ್‌ ಟೆನಿಸ್‌ ಟೂರ್ನಿ ಆಡು​ವು​ದಕ್ಕಾಗಿ ಟೋಕಿಯೋ ಆಗ​ಮಿ​ಸಿ​ದ್ದರು. 

Scroll to load tweet…
Scroll to load tweet…
View post on Instagram

ಇದೇ ವೇಳೆ ಸಾಂಪ್ರ​ದಾ​ಯಿಕ ಸುಮೋ ಕುಸ್ತಿ​ ರಿಂಗ್‌ಗೆ ಭೇಟಿ ನೀಡಿದ ಜೋಕೋವಿಚ್‌, ಮುಂಜಾನೆ ಸುಮೋ ಕುಸ್ತಿ​ಪ​ಟು​ಗಳ ವ್ಯಾಯಾಮ ವೀಕ್ಷಿ​ಸಿ​ದರು. ಮಾಜಿ ಕುಸ್ತಿ​ಪ​ಟು​ವೊ​ಬ್ಬ​ರನ್ನು ಎದು​ರಿ​ಸುವ ವಿಫಲ ಯತ್ನ​ವೂ ಜೋಕೋವಿಚ್‌ ಮಾಡಿ​ದರು. ಈ ವಿಡಿಯೋ ವೈರಲ್‌ ಆಗಿದೆ.


Scroll to load tweet…