ಲಂಡನ್(ಜು.14): ವಿಂಬಲ್ಡನ್ ಟೂರ್ನಿಯಲ್ಲಿ ನೋವಾಕ್ ಜೊಕೊವಿಚ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ದಿಗ್ಗಜ ರೋಜರ್ ಫೆಡರರ್ ಮಣಿಸಿದ ಜೊಕೊವಿಚ್ 16ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದರು. 

 

ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಹೋರಾಟದಲ್ಲಿ ನೋವಾಕ್ ಜೋಕೊವಿಚ್ 7-6, 1-6, 7-6, 4-6, 13-12 ಅಂತರದಲ್ಲಿ ಫೆಡರರ್ ಮಣಿಸಿದರು. ಸೋಲಿನೊಂದಿಗೆ 21ನೇ ಗ್ರ್ಯಾಂಡ್ ಸ್ಲಾಂ ಗೆಲ್ಲೋ ಕನಸು ನುಚ್ಚು ನೂರಾಯಿತು.