ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮಡಿಲಿಗೆ 103ನೇ ಪ್ರಶಸ್ತಿ!

ಸ್ವಿಸ್‌ ಒಳಾಂಗಣ ಟೂರ್ನಿಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್, 10ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಟ್ಟು 103ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. 

Tennis legend roger federer bags 103rd championship award

ಬಾಸೆಲ್‌ (ಸ್ವಿಜರ್‌ಲೆಂಡ್‌)(ಅ.29): 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ, ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ ರೋಜರ್‌ ಫೆಡ​ರರ್‌ ತಮ್ಮ ವೃತ್ತಿ​ಬ​ದು​ಕಿನ 103ನೇ ಪ್ರಶಸ್ತಿ ಗೆದ್ದಿ​ದ್ದಾರೆ. ಭಾನು​ವಾರ ಇಲ್ಲಿ ನಡೆದ ಸ್ವಿಸ್‌ ಒಳಾಂಗಣ ಟೂರ್ನಿಯ ಪುರು​ಷರ ಸಿಂಗಲ್ಸ್‌ ಫೈನಲ್‌ ಪಂದ್ಯ​ದಲ್ಲಿ ಫೆಡ​ರರ್‌, 20 ವರ್ಷದ ಆಸ್ಪ್ರೇ​ಲಿ​ಯಾದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6-2, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿ​ಸಿ​ದರು.ಅಮೆ​ರಿ​ಕದ ಮಾಜಿ ಟೆನಿ​ಸಿಗ ಜಿಮ್ಮಿ ಕಾನ​ರ್‍ಸ್ರ ಸಾರ್ವ​ಕಾ​ಲಿಕ ದಾಖಲೆ ಸರಿ​ಗ​ಟ್ಟಲು ಫೆಡ​ರರ್‌ ಇನ್ನು 6 ಪ್ರಶಸ್ತಿಗಳನ್ನು ಗೆಲ್ಲ​ಬೇ​ಕಿದೆ. ಕಾನ​ರ್‍ಸ್ 109 ಟ್ರೋಫಿಗಳನ್ನು ಜಯಿಸಿದ್ದರು.

ಇದನ್ನೂ ಓದಿ: ಟೆನಿಸ್‌ ವಿಶ್ವ ರ‍್ಯಾಂಕಿಂಗ್; ಫೆಡರರ್‌ಗೆ ಶಾಕ್ ನೀಡಿದ್ದ ಸುಮಿತ್‌ಗೆ ಬಡ್ತಿ!

10ನೇ ಬಾರಿಗೆ ಸ್ವಿಸ್‌ ಒಳಾಂಗಣ ಟೂರ್ನಿಯಲ್ಲಿ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದ ಫೆಡ​ರರ್‌, 2019ರಲ್ಲಿ 4ನೇ ಪ್ರಶಸ್ತಿ ಜಯಿ​ಸಿ​ದರು. ಒಂದು ಟೂರ್ನಿ​ಯಲ್ಲಿ 15 ಬಾರಿ ಫೈನಲ್‌ ಪ್ರವೇ​ಶಿ​ಸಿದ ವಿಶ್ವದ ಮೊದಲ ಪುರುಷ ಇಲ್ಲವೇ ಮಹಿಳಾ ಟೆನಿಸ್‌ ಪಟು ಎನ್ನುವ ದಾಖಲೆಯನ್ನು ಫೆಡ​ರರ್‌ ಬರೆದರು. ಮಾರ್ಟಿನಾ ನವಾ​ರ್ಟಿ​ಲೋವಾ 14 ಬಾರಿ ಷಿಕಾಗೋ ಹಾಗೂ ಡಬ್ಲ್ಯು​ಟಿಎ ಟೂರ್‌ ಟೂರ್ನಿ​ಗಳ ಫೈನಲ್‌ ಪ್ರವೇ​ಶಿ​ಸಿದ್ದರು.

ಇದನ್ನೂ ಓದಿ: 2 ವರ್ಷ​ಗ​ಳ ಬಳಿಕ ಮೊದಲ ಪ್ರಶಸ್ತಿ ಗೆದ್ದ ಮರ್ರೆ!

ಫೆಡರರ್‌ ಈ ಟೂರ್ನಿಯಲ್ಲಿ ತಮ್ಮ ವೃತ್ತಿ​ಬ​ದು​ಕಿ​ನ 1500 ಪಂದ್ಯ​ವನ್ನು ಸಹ ಆಡಿ​ದರು. ಅವರು ಒಟ್ಟು 1233 ಪಂದ್ಯ​ಗ​ಳಲ್ಲಿ ಗೆಲುವು ಸಾಧಿ​ಸಿ​ದ್ದಾರೆ. ಜಿಮ್ಮಿ ಕಾನ​ರ್‍ಸ್ 1556 ಪಂದ್ಯ​ಗ​ಳನ್ನು ಆಡಿದ್ದು 1274 ಗೆಲು​ವು​ಗ​ಳನ್ನು ಕಂಡಿ​ದ್ದರು. ಅವರ ದಾಖಲೆ ಸರಿ​ಗ​ಟ್ಟಲು ಫೆಡ​ರರ್‌ ಇನ್ನೂ 53 ಪಂದ್ಯ​ಗ​ಳನ್ನು ಆಡ​ಬೇ​ಕಿದ್ದು, 40 ಗೆಲುವುಗಳನ್ನು ಸಾಧಿ​ಸ​ಬೇ​ಕಿದೆ.

Latest Videos
Follow Us:
Download App:
  • android
  • ios