ಬೆ​ಲ್ಜಿ​ಯಂ(ಅ.22): ಸೊಂಟದ ಶಸ್ತ್ರ​ಚಿ​ಕಿತ್ಸೆಯಿಂದಾಗಿ ಟೆನಿಸ್‌ಗೆ ವಿದಾಯ ಘೋಷಿ​ಸು​ವು​ದಾಗಿ ಪ್ರಕ​ಟಿ​ಸಿದ್ದ ಮಾಜಿ ನಂ.1 ಟೆನಿ​ಸಿಗ, ಬ್ರಿಟನ್‌ನ ಆ್ಯಂಡ್ರಿ ಮರ್ರೆ ಇತ್ತೀ​ಚೆ​ಗಷ್ಟೇ ವೃತ್ತಿ​ಪರ ಟೆನಿಸ್‌ಗೆ ವಾಪ​ಸಾ​ಗಿ​ದ್ದರು. 

ನಿವೃತ್ತಿಯಿಂದ ಹೊರಬಂದ ಮರ್ರೆಗೆ ಡಬಲ್ಸ್’ನಲ್ಲಿ ಮೊದಲ ಪ್ರಶಸ್ತಿ

ಹಲವು ತಿಂಗಳು ಕಾಲ ಟೆನಿಸ್‌ನಿಂದ ದೂರ​ವಿದ್ದ ಮರ್ರೆ, ನಿವೃ​ತ್ತಿ​ ನಿರ್ಧಾರ ಹಿಂಪ​ಡೆದ ಬಳಿಕ ಸಿಂಗಲ್ಸ್‌ನಲ್ಲಿ ಮೊದಲ ಪ್ರಶಸ್ತಿ ಜಯಿ​ಸಿ​ದ್ದಾರೆ. ಭಾನು​ವಾರ ಇಲ್ಲಿ ಮುಕ್ತಾ​ಯ​ಗೊಂಡ ಯುರೋ​ಪಿ​ಯನ್‌ ಓಪನ್‌ ಟೂರ್ನಿಯ ಪುರು​ಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ವಿಜರ್‌ಲೆಂಡ್‌ನ ಸ್ಟ್ಯಾನಿ​ಸ್ಲಾಸ್‌ ವಾವ್ರಿಂಕಾ ವಿರುದ್ಧ 3-6, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿ​ಸಿ​ದರು.  2 ವರ್ಷ​ಗ​ಳಲ್ಲಿ ಇದು ಅವರ ಮೊದಲ ಪ್ರಶಸ್ತಿ. ಈ ಗೆಲು​ವಿ​ನೊಂದಿಗೆ 116 ಸ್ಥಾನ​ಗಳ ಏರಿಕೆ ಕಂಡಿ​ರುವ ಮರ್ರೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ 127ನೇ ಸ್ಥಾನ ಪಡೆ​ದಿ​ದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ 32 ವರ್ಷದ ಆ್ಯಂಡಿ ಮರ್ರೆ, ನಾನು ಈ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಇಷ್ಟು ಬೇಗ ಪ್ರಶಸ್ತಿ ಜಯಿಸುತ್ತೇನೆ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಆ್ಯಂಡಿ ಮರ್ರೆ ಸಾಧನೆಯನ್ನು ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ದೇಶದವರೇ ಆದ ಸ್ಟ್ಯಾನಿ​ಸ್ಲಾಸ್‌ ವಾವ್ರಿಂಕಾ ಅವರನ್ನು ಮಣಿಸಿದ ಮರ್ರೆಯನ್ನು ಕೊಂಡಾಡಿದ್ದಾರೆ. ಆ್ಯಂಡಿಯ ಸಾಧನೆ ನಿಜಕ್ಕೂ ಅತ್ಯದ್ಭುತ. ಸ್ಟ್ಯಾನಿ​ಸ್ಲಾಸ್‌ ವಾವ್ರಿಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಒಳ್ಳೆಯ ಕಮ್’ಬ್ಯಾಕ್ ಮಾಡಿದರು. ಆ್ಯಂಡಿ ಆರೋಗ್ಯ ಚೇತರಿಸಿಕೊಂಡಿದ್ದು ನೋಡಿ ಖುಷಿ ಎನಿಸುತ್ತಿದೆ ಎಂದು ಹೇಳಿದ್ದಾರೆ.