ಐಪಿಎಲ್‌ ಮಾದರಿಯಲ್ಲಿ ದೇಶದಲ್ಲಿ ಆರಂಭವಾಗಲಿದೆ ಟೇಕ್ವಾಂಡೋ ಲೀಗ್‌!

ದೇಶದಲ್ಲಿ ಕ್ರೀಡೆಯನ್ನು ಸಂಪೂರ್ಣವಾಗಿ ಪರಿವರ್ತನೆ ಮಾಡುವ ಆಶಯದಲ್ಲಿ ಅನಾವರಣಗೊಂಡ ವಿಶ್ವದ ಮೊಟ್ಟಮೊದಲ ಟೇಕ್ವಾಂಡೋ ಲೀಗ್‌ ಇದಾಗಿದೆ. ಒಟ್ಟು 12 ತಂಡಗಳು ಇದರಲ್ಲಿ ಭಾಗವಹಿಸಲಿದೆ.  

Taekwondo Premier League with 12 teams launched at glittering ceremony in New Delhi san

ನವದೆಹಲಿ (ಮಾ. 27): ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಐಪಿಲ್‌ ಮಾದರಿಯಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್‌, ಟೆನಿಸ್‌ನಲ್ಲಿ ಪ್ರೀಮಿಯರ್‌ ಲೀಗ್‌ಗಳು ನಡೆದಿದ್ದವು. ಇದಕ್ಕೆ ಈಗ ಒಲಿಂಪಿಕ್‌ ಕ್ರೀಡೆಯಾದ ಟೇಕ್ವಾಂಡೋ ಕೂಡ ಸೇರ್ಪಡೆಯಾಗಿದೆ. ಮಹತ್ವಾಕಾಂಕ್ಷೆಯ ಇಂಡಿಯನ್ ಟೇಕ್ವಾಂಡೋ ಪ್ರೀಮಿಯರ್ ಲೀಗ್ (ಟಿಪಿಎಲ್) ಅನ್ನು ಭಾನುವಾರ ನವದೆಹಲಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅನಾವರಣ ಮಾಡಲಾಯಿತು. ದೇಶದಲ್ಲಿ ಕ್ರೀಡೆಯನ್ನು ಪರಿವರ್ತಿಸುವ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಗಳನ್ನು ರೂಪಿಸುವ ಭರವಸೆಯೊಂದಿಗೆ ಈ ಲೀಗ್‌ಅನ್ನು ಆರಂಭಿಸಲಾಗಿದೆ. ಜೂನ್ 2023 ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಫ್ರಾಂಚೈಸಿ-ಮಾದರಿ ಲೀಗ್‌ಗೆ ಹೈದರಾಬಾದ್, ರಾಜಸ್ಥಾನ, ಮಹಾರಾಷ್ಟ್ರ, ಅಸ್ಸಾಂ, ದೆಹಲಿ, ಬೆಂಗಳೂರು, ಡೆಹ್ರಾಡೂನ್, ಪಂಜಾಬ್, ಹರಿಯಾಣ, ಹಿಮಾಚಲ, ಚೆನ್ನೈ ಮತ್ತು ಗುಜರಾತ್‌ ರಾಜ್ಯಗ ತಂಡವನ್ನು ಮಾಲೀಕರು ಖರೀದಿ ಮಾಡಿದ್ದಾರೆ.

ಟೇಕ್ವಾಂಡೋ ಗ್ರ್ಯಾಂಡ್‌ಮಾಸ್ಟರ್‌ಗಳಾದ ಜುನ್ ಲೀ ಮತ್ತು ವಿಶ್ವ, ಒಲಂಪಿಕ್ ಮತ್ತು ಏಷ್ಯನ್ ಚಾಂಪಿಯನ್ ಮೂನ್ ಡೇ ಸಂಗ್ ಲೀಗ್‌ ಅನಾವರಣ ಕಾರ್ಯಕ್ರಮದಲ್ಲಿದ್ದ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಟಿಪಿಎಲ್‌ ಖಂಡಿತವಾಗಿ ಗಮನಾರ್ಹ ಬದಲಾವಣೆ ತರಲಿದೆ ಎಂದು 400 ಆಟಗಾರರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಹೇಳುವ ಮೂಲಕ ಲೀಗ್‌ಅನ್ನು ಶ್ಲಾಘಿಸಿದರು. ದೇಶದಲ್ಲಿ 10 ಲಕ್ಷ ನೋಂದಾಯಿತ ಟೇಕ್ವಾಂಡೋ ಆಟಗಾರರಿದ್ದಾರೆ, ಇದು ಭಾರತದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಅಗ್ರ ಆಟಗಾರರು ತಮ್ಮ ಕೌಶಲ್ಯಗಳನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆಯುತ್ತಾರೆ ಮತ್ತು ಭಾರತವು ಶೀಘ್ರದಲ್ಲೇ ಟೇಕ್ವಾಂಡೋದಲ್ಲಿ ಒಲಿಂಪಿಕ್ ಪದಕ ವಿಜೇತರನ್ನು ನೋಡುತ್ತದೆ ಎಂದು ನನಗೆ ಖಾತ್ರಿಯಿದೆ' ಎಂದು ಮೂನ್ ಡೇ ಸಂಗ್ ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಕೊರಿಯಾ ಮೂಲದ ಕ್ರೀಡೆಯಾಗಿರುವ ಟೇಕ್ವಾಂಡೋ ಮಾರ್ಷಲ್‌ ಆರ್ಟ್ಸ್‌ನ ಅಥವಾ ಸಮರಕಲೆಯ ಒಂದು ರೂಪವಾಗಿದೆ. ಕಿಕ್ಕಿಂಗ್‌ ಹಾಗೂ ಪಂಚಿಂಗ್‌ ಇದರಲ್ಲಿ ಒಳಗೊಂಡಿರುತ್ತದೆ. ಸುಮಾರು 200 ದೇಶಗಳಲ್ಲಿ 20 ಮಿಲಿಯನ್ ಕ್ರೀಡಾಪಟುಗಳು ಟೇಕ್ವಾಂಡೋ ಅಭ್ಯಾಸ ಮಾಡುತ್ತಾರೆ ಹಾಗೂ ಇದು ಒಲಿಂಪಿಕ್ ಕ್ರೀಡೆಯೂ ಆಗಿದೆ. "ಇದು ಟೇಕ್ವಾಂಡೋದಲ್ಲಿ ಹೊಸ ಅಧ್ಯಾಯದ ಪ್ರಾರಂಭವಾಗಿದೆ, ವಾಸ್ತವವಾಗಿ ಹೊಸ ಯುಗ. ನಾವು ಕಳೆದ ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಕ್ರೀಡೆಯನ್ನು ಬೆಂಬಲಿಸಲು ಆಸಕ್ತಿ ಹೊಂದಿರುವ ಹಲವಾರು ಉದ್ಯಮಿಗಳು ಮತ್ತು ಕಂಪನಿಗಳನ್ನು ನೋಡಲು ಸಂತಸವಾಗುತ್ತದೆ' ಎಂದು ಲೀಗ್‌ನ ಸಂಸ್ಥಾಪಕ ನಿರ್ದೇಶಕರಾದ ಗಣೇಶ್ ದುವ್ವೂರಿ, ಜಿಕೆ ವೆಂಕಟ್ ಮತ್ತು ನವನೀತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರ್ಯಾಂಡ್ ಮಾಸ್ಟರ್ ಜುನ್ ಲೀ, ಟಿಪಿಎಲ್ ಕಮಿಷನರ್, ಮಾಸ್ಟರ್ ಕಿಮ್ ಚಾಂಗ್ ಕ್ವಾನ್, ಮುಖ್ಯ ಟಿಪಿಎಲ್ ಕೋಚ್, ಆಡ್ ಮೂನ್ ಡೇ ಸಂಗ್ ನೇತೃತ್ವದ ಅಂತರರಾಷ್ಟ್ರೀಯ ಸಮಿತಿಯು 12 ನಗರಗಳಲ್ಲಿ ನಡೆಯಲಿರುವ ಸೆಲೆಕ್ಷನ್‌ ಟ್ರಯಲ್ಸ್‌ನಿಂದ ಆಟಗಾರರನ್ನು ಆಯ್ಕೆ ಮಾಡುತ್ತದೆ. ಪ್ರತಿ ತಂಡಕ್ಕೆ ಮಾರ್ಗದರ್ಶಕರು ಮತ್ತು ತರಬೇತುದಾರರನ್ನು ಈಗಾಗಲೇ ಗುರುತಿಸಲಾಗಿದೆ."ಟಿಪಿಎಲ್ ಅನ್ನು ಮೊದಲ ಬಾರಿಗೆ ತಂಡದ ಸ್ವರೂಪದಲ್ಲಿ ಆಡಲಾಗುತ್ತದೆ, ಪ್ರತಿ ತಂಡವು ಐದು ಅಗ್ರ ಆಟಗಾರರನ್ನು ಹೊಂದಿರುತ್ತದೆ. ಸ್ಪರ್ಧೆಯನ್ನು ವೇಗವಾಗಿ ಮತ್ತು ರೋಮಾಂಚನಕಾರಿಯಾಗಿಡಲು ನಾವು 58.1kg-67.9kg ವಿಭಾಗಕ್ಕೆ ನಿರ್ಬಂಧಿಸಲಾಗಿದೆ' ಎಂದು ಸಂಸ್ಥಾಪಕ ನಿರ್ದೇಶಕರಾದ ಗಣೇಶ್ ಮಾಹಿತಿ ನೀಡಿದ್ದಾರೆ. 

ಅಪರೂಪದ ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ವಿಜಯಪುರ ಬಾಲಕನಿಗೆ ಚಿನ್ನ

ವಿಶ್ವ ದರ್ಜೆಯ ವೇದಿಕೆಯನ್ನು ಒದಗಿಸುವುದರ ಜೊತೆಗೆ, ಆಯ್ಕೆಯಾದ ಆಟಗಾರರು ಅತ್ಯುತ್ತಮ ಕೋಚಿಂಗ್‌ ಮತ್ತು ತರಬೇತಿಯನ್ನು ಪಡೆಯುತ್ತಾರೆ. ಆಕರ್ಷಕ ಬಹುಮಾನ ಮೊತ್ತವೂ ಇದ್ದು, ವೈಯಕ್ತಿಯ ಪ್ರಶಸ್ತಿಯನ್ನೂ ಕೂಡ ಲೀಗ್‌ನಲ್ಲಿ ನೀಡಲಾಗುತ್ತದೆ' ಎಂದು ಜಿಕೆ ವೆಂಕಟ್‌ ತಿಳಿಸಿದ್ದಾರೆ. ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ ಫ್ರಾಂಚೈಸಿ ಮಾಲೀಕರಾದ ಸೃಷ್ಟಿ ರಾಣಾ (ಹರಿಯಾಣ ಹಂಟರ್ಸ್), ಎ ವೆಂಕಟ್ ರೆಡ್ಡಿ ಶ್ರೀ ರಾಜಾ (ಹೈದರಾಬಾದ್ ಗ್ಲೈಡರ್ಸ್), ವಿಜಯ್ ಕುಮಾರ್ ಬನ್ಸಾಲಿ (ಗುಜರಾತ್ ಥಂಡರ್ಸ್), ರುಚಿತಾ ಮಿತ್ತಲ್ (ಮಹಾರಾಷ್ಟ್ರ ಅವೆಂಜರ್ಸ್), ಡಾ ಆರ್ ಕೆ ಗುಪ್ತಾ (ಡೆಲ್ಲಿ ವಾರಿಯರ್ಸ್),   ಟಿಎಲ್ ರಾವ್ ಮತ್ತು ಮೊಹಮ್ಮದ್. ರಯೀಸ್ (ರಾಜಸ್ಥಾನ ರೆಬೆಲ್ಸ್) ಉಪಸ್ಥಿತರಿದ್ದರು.

ದೇಶ ಪ್ರತಿನಿಧಿಸುವ ಕನಸು ನನಸು ಮಾಡಿಕೊಂಡ ಕಾಶ್ಮೀರಿ ಅಥ್ಲೀಟ್‌ ಡ್ಯಾನಿಶ್‌ ಮಂಜೂರ್

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಕ್ಕು ಇಲಾಖೆಯ ಖಾಸಗಿ ಪ್ರಧಾನ ಕಾರ್ಯದರ್ಶಿ ವೈ.ಆನಂದ್‌ ರಾಜ್‌, ಗೌರವ ಅತಿಥಿಗಳಾಗಿಅಭಯ್ ಸಿಂಗ್ ರಾಥೋಡ್ (ಗ್ರ್ಯಾಂಡ್ ಮಾಸ್ಟರ್ ಮತ್ತು ಟಿಪಿಎಲ್ ಉಪಾಧ್ಯಕ್ಷರು), ಸಂಜೀವ್ ಸೆಹಗಲ್ (ಸುಪ್ರೀಂ ಕೋರ್ಟ್ ಎಎಜಿ), ಸೈಶಾ ಸೆಹಗಲ್ ( ಬಾಲಿವುಡ್‌ ನಟಿ), ಮಹೇಂದ್ರ ಪಾಲ್ ಅರೋರಾ (ಟಿಪಿಎಲ್ ಉಪಾಧ್ಯಕ್ಷ), ವಿನಯ್ ಕುಮಾರ್ (ಜಾಗತಿಕ ವ್ಯಾಪಾರ ಉದ್ಯಮಿ ಮತ್ತು  ಟಿಪಿಎಲ್ ಸದಸ್ಯ), ಮಾಯಾ ಠಾಕೂರ್ (ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾದ ಡಿಜಿ) ಮತ್ತು ಆನಂದ್ ಪಾಂಡೆ (ಭಾರತೀಯ ಒಲಿಂಪಿಕ್ ಅಸೋಸಿಯೇಷನ್) ಹಾಜರಿದ್ದರು.
 

Latest Videos
Follow Us:
Download App:
  • android
  • ios