ದಕ್ಷಿಣ ಏಷ್ಯನ್ ಗೇಮ್ಸ್: 2ನೇ ದಿನ ಭಾರ​ತಕ್ಕೆ 27 ಪದ​ಕ!

ಭಾರತೀಯ ಕ್ರೀಡಾಪಟುಗಳು ದಕ್ಷಿಣ ಏಷ್ಯನ್ ಗೇಮ್ಸ್ ಕೂಟದಲ್ಲಿ ಎರಡನೇ ದಿನವೂ ಪಾರಮ್ಯ ಮೆರೆದಿದ್ದು 27 ಪದಕಗಳನ್ನು ಬಾಚಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

South Asian Games Indian Team second in medal tally after day two

ಕಾಠ್ಮಂಡು[ಡಿ.04]: ದಕ್ಷಿಣ ಏಷ್ಯಾ ಕ್ರೀಡಾ​ಕೂ​ಟದಲ್ಲಿ ಭಾರ​ತದ ಪದಕ ಬೇಟೆ ಮುಂದು​ವ​ರಿ​ದಿದೆ. ಕೂಟದ 2ನೇ ದಿನವಾದ ಮಂಗ​ಳ​ವಾರ ಭಾರತ 11 ಚಿನ್ನ ಸೇರಿ ಬರೋ​ಬ್ಬರಿ 27 ಪದ​ಕ​ಗ​ಳನ್ನು ಗೆದ್ದು​ಕೊಂಡಿತು. 

ವಾಲಿಬಾಲ್‌: ಭಾರತ ತಂಡಗಳು ಸೆಮೀಸ್‌ಗೆ

ಅಥ್ಲೆ​ಟಿಕ್ಸ್‌ನಲ್ಲಿ 10 ಪದಕ (4 ಚಿನ್ನ, 4 ಬೆಳ್ಳಿ, 2 ಕಂಚು) ಹಾಗೂ ಶೂಟಿಂಗ್‌ನಲ್ಲಿ 9 ಪದಕ (4 ಚಿನ್ನ, 4 ಬೆಳ್ಳಿ, 1 ಕಂಚು) ದೊರೆಯಿತು. ವಾಲಿ​ಬಾಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡ​ಗಳು ಚಿನ್ನ ಗೆದ್ದರೆ, ಟೇಕ್ವಾಂಡೋನಲ್ಲಿ 1 ಚಿನ್ನ, 3 ಕಂಚು ಒಲಿ​ಯಿತು. ಟೇಬಲ್‌ ಟೆನಿಸ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡ​ಗಳು ಚಿನ್ನ ಜಯಿ​ಸಿ​ದವು.

ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!

ಭಾರತ ಒಟ್ಟು 18 ಚಿನ್ನ, 16 ಬೆಳ್ಳಿ, 9 ಕಂಚಿನ ಪದ​ಕ​ಗ​ಳೊಂದಿಗೆ ಒಟ್ಟು 43 ಪದ​ಕ​ಗ​ಳನ್ನು ಗೆದ್ದು ಪದಕ ಪಟ್ಟಿಯಲ್ಲಿ 2ನೇ ಸ್ಥಾನ​ದ​ಲ್ಲಿದೆ. ಆತಿ​ಥೇಯ ನೇಪಾಳ 44 ಪದಕಗಳೊಂದಿಗೆ (23 ಚಿನ್ನ, 9 ಬೆಳ್ಳಿ, 12 ಕಂಚು) ಮೊದಲ ಸ್ಥಾನದಲ್ಲಿ​ದ್ದರೆ, ಶ್ರೀಲಂಕಾ 46 ಪದಕಗಳು (5 ಚಿನ್ನ, 14 ಬೆಳ್ಳಿ, 27 ಕಂಚು) ಗೆದ್ದು 3ನೇ ಸ್ಥಾನ​ದ​ಲ್ಲಿದೆ. ಖೋ ಖೋನಲ್ಲಿ ಭಾರತ ಪುರುಷ, ಮಹಿಳಾ ತಂಡ​ಗಳು ಫೈನಲ್‌ಗೇರಿದ್ದು, ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿವೆ. ಕ್ರೀಡಾ​ಕೂಟದಲ್ಲಿ ಒಟ್ಟು 7 ರಾಷ್ಟ್ರಗಳ 2715 ಕ್ರೀಡಾ​ಪ​ಟು​ಗಳು ಪಾಲ್ಗೊಂಡಿ​ದ್ದಾರೆ.
 

Latest Videos
Follow Us:
Download App:
  • android
  • ios