ಕಠ್ಮಂಡು: ಭಾರತ ಪುರುಷ ಹಾಗೂ ಮಹಿಳಾ ವಾಲಿಬಾಲ್‌ ತಂಡಗಳು, ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ. 

ಏಷ್ಯನ್‌ ವಾಲಿ​ಬಾಲ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ಗೇರಿದ ಭಾರತ!

ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಪುರುಷರ ತಂಡ, ಆತಿಥೇಯ ನೇಪಾಳ ವಿರುದ್ಧ 25-15, 25-13, 25-16 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. 

ಪಾಕ್ ವಿರುದ್ಧ ತ್ರಿಶತಕ ಬಾರಿಸಿ ಅಬ್ಬರಿಸಿದ ಡೇವಿಡ್ ವಾರ್ನರ್

ಮಹಿಳಾ ವಿಭಾಗದ ಕ್ವಾರ್ಟರ್‌ನಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ 25-8, 25-11, 25-9 ಅಂಕಗಳಿಂದ ಜಯಭೇರಿ ಬಾರಿಸಿತು. ಶನಿವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ಮಾಲ್ಡೀವ್ಸ್’ನ್ನು
ಎದುರಿಸಲಿದೆ.