ಅಡಿಲೇಡ್[ನ.30]: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[335] ಪಾಕಿಸ್ತಾನ ವಿರುದ್ಧ ಅಡಿಲೇಡ್’ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ತ್ರಿಶತಕ ಬಾರಿಸಿದ್ದಾರೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ದಾಖಲಾಗಿದೆ. ಇದೀಗ 589 ರನ್ ಬಾರಿಸಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಮುಷ್ತಾಕ್ ಅಲಿ ಟ್ರೋಫಿ: ರಾಹುಲ್-ಪಡಿಕ್ಕಲ್ ಅಬ್ಬರ, ಫೈನಲ್ ಪ್ರವೇಶಿಸಿದ ಕರ್ನಾಟಕ

ಮೊದಲ ದಿನದಾಟದ ಅಂತ್ಯಕ್ಕೆ 166 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಾರ್ನರ್, ಪಾಕ್ ಬೌಲರ್’ಗಳ ಮೇಲೆ ಸವಾರಿ ಮಾಡಿದರು. 389 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು. ಈ ದೀರ್ಘ ಇನಿಂಗ್ಸ್’ನಲ್ಲಿ 37 ಮನಮೋಹಕ ಬೌಂಡರಿಗಳು ಸೇರಿದ್ದವು. ಡಿಸೆಂಬರ್ 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಬಾರಿಸಿದ ಬಳಿಕ ಉಳಿದ್ಯಾವ ಕ್ರಿಕೆಟಿಗರೂ 275 ರನ್’ಗಳ ಸಮೀಪವೂ ಬಂದಿರಲಿಲ್ಲ. ಆದರೀಗ ವಾರ್ನರ್ ತ್ರಿಶತಕ ಸಿಡಿಸುವ ಮೂಲಕ ಬರೋಬ್ಬರಿ 3 ವರ್ಷಗಳ ಬಳಿಕ ಸುದೀರ್ಘ ಇನಿಂಗ್ಸ್ ಕಟ್ಟಿದ್ದಾರೆ.

ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!

ಡೇವಿಡ್ ವಾರ್ನರ್ ಆಕರ್ಷಕ ತ್ರಿಶತಕ[335*] ಹಾಗೂ ಮಾರ್ನಸ್ ಲಬುಶೇನ್ ಸಮಯೋಚಿತ [162] ಶತಕದ ನೆರವಿನಿಂದ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 589 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಅಂದಹಾಗೆ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತ ಕೂಡಾ ಹೌದು.   

ವಾರ್ನರ್ ದಾಖಲೆಯ ಝಲಕ್ ಇಲ್ಲಿದೆ ನೋಡಿ...