ವಿಶ್ವ ಟೂರ್‌ ಫೈನಲ್ಸ್‌: ಜಯದೊಂದಿಗೆ ಗುಡ್‌ಬೈ ಹೇಳಿದ ಸಿಂಧು!

ಪಿವಿ ಸಿಂಧು ವಿಶ್ವ ಟೂರ್ ಫೈನಲ್ಸ್ ಟೂರ್‌ನಿಂದ ಹೊರಬಿದ್ದಿದ್ದಾರೆ. ಆರಂಭಿಕ 2 ಪಂದ್ಯದಲ್ಲಿ ಸೋಲು ಕಂಡ ಸಿಂಧು, ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಗೆ ಗುಡ್ ಬೈ ಹೇಳಿದ್ದಾರೆ. 

pv sindhu exit from BWF badminton world tour finals

ಗುವಾಂಗ್ಜು(ಡಿ.14): ಹಾಲಿ ಚಾಂಪಿಯನ್‌, ಭಾರತದ ಪಿ.ವಿ.ಸಿಂಧು ಗೆಲುವಿನೊಂದಿಗೆ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ಗೆ ಗುಡ್‌ಬೈ ಹೇಳಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋಲುಂಡು, ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದ ಸಿಂಧು, ಶುಕ್ರವಾರ ನಡೆದ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ಚೀನಾದ ಹೇ ಬಿಂಗ್‌ ಜಿಯೋ ವಿರುದ್ಧ 21-19, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ: ಸೆಮೀಸ್‌ ರೇಸ್‌ನಿಂದ ಹೊರಬಿದ್ದ ಸಿಂಧು

ಮೊದಲ ಗೇಮ್‌ನಲ್ಲಿ 9-18ರಿಂದ ಹಿಂದಿದ್ದ ಸಿಂಧು, ಸತತವಾಗಿ 9 ಅಂಕ ಗಳಿಸಿ ಅತಿರೋಚಕವಾಗಿ ಗೇಮ್‌ ಗೆದ್ದುಕೊಂಡರು. ದ್ವಿತೀಯ ಗೇಮ್‌ನ ಬಿಡುವಿನ ವೇಳೆಗೆ 11-6ರಿಂದ ಮುಂದಿದ್ದ ಸಿಂಧು, ಪ್ರಬಲ ಪೈಪೋಟಿ ಎದುರಿಸಿದರು 2 ಅಂಕಗಳ ಅಂತರದಲ್ಲಿ ಗೇಮ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು. ಇದರೊಂದಿಗೆ ಬಿಂಗ್‌ ಜಿಯೋ ವಿರುದ್ಧ ಸತತ 4ನೇ ಸೋಲು ತಪ್ಪಿಸಿಕೊಂಡರು. ಸಿಂಧು ಮುಂಬರುವ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಟೂರ್ನಿಯಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: ವಿಶ್ವ ಟೂರ್‌ ಫೈನಲ್‌: ಸಿಂಧುಗೆ ಸೋಲು

ಸಿಂಧು ಮೊದಲ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ದ 21-18, 18-21, 8-21 ಗೇಮ್‌ಗಳಲ್ಲಿ ಸೋಲು ಕಂಡಿದ್ದರು. 2ನೇ ಪಂದ್ಯದಲ್ಲಿ ಚೀನಾದ ಚೆನ್ ಯೂಫೀ ವಿರುದ್ಧ 22-60, 16-21, 12-21 ಗೇಮ್‌ಗಳ ಅಂತರದಲ್ಲಿ ಸೋಲು ಕಂಡಿದ್ದರು. 

Latest Videos
Follow Us:
Download App:
  • android
  • ios