ವಿಶ್ವ ಟೂರ್‌ ಫೈನಲ್‌: ಸಿಂಧುಗೆ ಸೋಲು

ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಆರಂಭದಲ್ಲಿ ಮುಗ್ಗರಿಸಿದ್ದಾರೆ. ಜಪಾನ್‌ನ ಅಕಾನೆ ಯಮಗುಚಿ ವಿರುದ್ದ ಸಿಂಧು ಸೋಲು ಕಂಡರು.

BWF world tour finals pv sindhu loses to japans akane yamaguchi

ಗುವಾಂಗ್ಜು(ಡಿ.12): ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಶಟ್ಲರ್‌ ಪಿ.ವಿ.ಸಿಂಧು ಸೋಲಿನ ಆರಂಭ ಪಡೆದಿದ್ದಾರೆ. ಮಹಿಳಾ ಸಿಂಗಲ್ಸ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಬುಧವಾರ ಹಾಲಿ ಚಾಂಪಿಯನ್‌ ಸಿಂಧು ಮುಗ್ಗರಿಸಿದ್ದಾರೆ. ಈ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆಯಾಗಿದೆ.

 

ಇದನ್ನೂ ಓದಿ: PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21-18, 18-21, 8-21 ಗೇಮ್‌ಗಳಲ್ಲಿ ಸಿಂಧು ಪರಾಭವಗೊಂಡರು. ಮೊದಲ ಗೇಮ್‌ನಲ್ಲಿ ಜಯಿಸಿದ್ದ ಸಿಂಧು, ನಂತರದ 2 ಗೇಮ್‌ಗಳನ್ನು ಸುಲಭವಾಗಿ ಬಿಟ್ಟುಕೊಟ್ಟರು. ಗುರುವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಚೀನಾದ ಚೆನ್‌ ಯೂಫೀ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಸೋಲುಂಡರೆ, ಸೆಮಿಫೈನಲ್‌ ಪ್ರವೇಶಿಸುವ ಕನಸು ನುಚ್ಚುನೂರಾಗಲಿದೆ.

 

Latest Videos
Follow Us:
Download App:
  • android
  • ios