ಸೆಮೀಸ್ ರೇಸ್‌ನಿಂದ ಹೊರಬಿದ್ದ ಸಿಂಧು
BWF ಬ್ಯಾಡ್ಮಿಂಟನ್ ವಿಶ್ವ ಟೂರ್‌ನಿಂದ ಪಿವಿ ಸಿಂಧು ಹೊರಬಿದ್ದಿದ್ದಾರೆ. ಆರಂಬದಲ್ಲೇ ಮುಗ್ಗರಿಸಿದ್ದ ಸಿಂಧೂ ಇದೀಗ ಟೂರ್ನಿಯಿಂದ ಹೊರಬೀಳೋ ಮೂಲಕ ನಿರಾಸೆ ಮೂಡಿಸಿದ್ದಾರೆ.
ಗುವಾಂಗ್ಜು(ಡಿ.13): ಹಾಲಿ ಚಾಂಪಿಯನ್ ಭಾರತದ ಪಿ.ವಿ.ಸಿಂಧು ವರ್ಷಾಂತ್ಯದ ಬಿಡ್ಲ್ಯುಎಫ್ ವಿಶ್ವ ಟೂರ್ ಫೈನಲ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಸಿಂಧು, ಚೀನಾದ ಚೆನ್ ಯೂಫೀ ವಿರುದ್ಧ 22-20, 16-21, 12-21 ಗೇಮ್‌ಗಳಲ್ಲಿ ಪರಾಭವಗೊಂಡರು.
ಇದನ್ನೂ ಓದಿ: PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್!
ಮೊದಲ ಪಂದ್ಯದಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋಲುಂಡಿದ್ದರು. ಸಿಂಧು ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು, ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಹೇ ಬಿಂಗ್ ಜಿಯೋ ವಿರುದ್ಧ ಯಮಗುಚಿ ಸೋಲಬೇಕಿತ್ತು. ಆದರೆ ಯಮಗುಚಿ ಗೆಲುವು ಸಾಧಿಸಿ, ಸೆಮೀಸ್‌ಗೇರಿದರು. ‘ಎ’ ಗುಂಪಿನಿಂದ ಚೆನ್ ಯೂಫೀ ಸಹ ಉಪಾಂತ್ಯಕ್ಕೆ ಪ್ರವೇಶಿಸಿದರು.
ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು.
ಮೊದಲ ಗೇಮ್‌ನಲ್ಲಿ 17-20ರಿಂದ ಹಿಂದಿದ್ದ ಸಿಂಧು ಸತತ 4 ಅಂಕ ಗಳಿಸಿ ಗೇಮ್ ಗೆದ್ದರು. ಆದರೆ ನಂತರದ 2 ಗೇಮ್‌ಗಳಲ್ಲಿ ಸೋತು, ಪಂದ್ಯ ಬಿಟ್ಟುಕೊಟ್ಟರು. ಶುಕ್ರವಾರ ನಡೆಯಲಿರುವ ಔಪಚಾರಿಕ ಪಂದ್ಯದಲ್ಲಿ ಸಿಂಧು, ಬಿಂಗ್ ಜಿಯೋ ವಿರುದ್ಧ ಆಡಲಿದ್ದಾರೆ.