Asianet Suvarna News Asianet Suvarna News

PKL 2019: ನಾಲ್ಕನೇ ಸ್ಥಾನಕ್ಕೆ ಜಿಗಿದ ಮುಂಬಾ!

ಪ್ರೊ ಕಬ​ಡ್ಡಿ ಲೀಗ್ ಟೂರ್ನಿಯಲ್ಲಿ ಯು ಮುಂಬಾ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸೋ ಮೂಲಕ ಲೀಗ್ ಪಂದ್ಯದ ಅಂತಿಮ ಹಂತದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 

Pro kabbaddi 2019 U Mumba Beat Haryana Steelers by 39-33 points
Author
Bengaluru, First Published Oct 11, 2019, 10:01 AM IST

ಗ್ರೇಟ​ರ್‌ ನೋಯ್ಡಾ(ಅ.11): ಪ್ರೊ ಕಬಡ್ಡಿ 7ನೇ ಆವೃ​ತ್ತಿ​ಯಲ್ಲಿ ಗುರು​ವಾರ ನಡೆದ ಏಕೈಕ ಪಂದ್ಯ​ದಲ್ಲಿ ಮಾಜಿ ಚಾಂಪಿಯನ್‌ ಯು ಮುಂಬಾ, ಹರ್ಯಾಣ ಸ್ಟೀಲರ್ಸ್ ವಿರುದ್ಧ 39-33 ಅಂಕಗಳಲ್ಲಿ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ಒಟ್ಟಾರೆ 12ನೇ ಗೆಲುವು ಪಡೆದ ಮುಂಬಾ 69 ಅಂಕ​ಗ​ಳೊಂದಿಗೆ ​ಪ​ಟ್ಟಿ​ಯಲ್ಲಿ 4ನೇ ಸ್ಥಾನ​ಕ್ಕೇ​ರಿತು. 

ಇದನ್ನೂ ಓದಿ: ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್

ನಾಯಕ ಫಜೆಲ್‌ ಅತ್ರ​ಚಾಲಿ 8 ಅಂಕ ಹಾಗೂ ಸಂದೀಪ್‌ ನರ್ವಾಲ್‌ 5 ಅಂಕ​ಗ​ಳನ್ನು ಗಳಿ​ಸಿದ್ದು, ಮುಂಬಾ ಕಾರ್ನರ್‌ ಡಿಫೆನ್ಸ್‌ ಯಶಸ್ಸು ಸಾಧಿ​ಸಿತ್ತು. ಮುಂಬಾ ತಂಡ​ದಲ್ಲಿ ಅವ​ಕಾಶ ಪಡೆದ ಅಜಿಂಕ್ಯಾ ಕಾಪ್ರೆ, ಡೊಂಗ್‌ ಲೀ ತಲಾ 9 ರೈಡ್‌ ಅಂಕ​ಗ​ಳನ್ನು ಸಂಪಾ​ದಿ​ಸಿದರು. ಹರ್ಯಾಣ ಪರ ವಿಕಾಸ್‌ ಖಂಡೋಲ (6 ಅಂಕ) ಮಿಂಚದ ಕಾರಣ ವಿನಯ್‌ (11 ಅಂಕ) ಶ್ರಮ​ ವ್ಯರ್ಥ​ವಾ​ಯಿ​ತು. 

ಇದನ್ನೂ ಓದಿ: ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!

ಹರಾರ‍ಯಣ ಪರ ರವಿ 4 ಟ್ಯಾಕಲ್‌ ಅಂಕ ಗಳಿ​ಸಿ​ದರು. ಮೊದ​ಲಾರ್ಧ ಉಭಯ ತಂಡ​ಗಳೂ 15-15ರಲ್ಲಿ ಸಮ​ಬಲ ಸಾಧಿ​ಸಿ​ದ​ವು. ಸ್ಟೀಲ​ರ್‍ಸ್ 3ನೇ ಸ್ಥಾನ​ದ​ಲ್ಲಿದೆ. ಶುಕ್ರ​ವಾರ ಈ ಆವೃ​ತ್ತಿಯ ಕೊನೆಯ 2 ಲೀಗ್‌ ಪಂದ್ಯ​ಗಳು ನಡೆ​ಯ​ಲಿ​ವೆ.

ಅಂಕಪಟ್ಟಿಯಲ್ಲಿ ಬೆಂಗಾಲ್ ವಾರಿಯರ್ಸ್ ಮೊದಲ ಸ್ಥಾನದಲ್ಲಿದ್ದರೆ, ದಬಾಂಗ್ ದಿಲ್ಲಿ, ಹರ್ಯಾಣ ಸ್ಟೀಲರ್ಸ್, ಯು ಮುಂಬಾ, ಯುಪಿ ಯೋಧ ಹಾಗೂ ಬೆಂಗಳೂರು ಬುಲ್ಸ್ ನಂತರದ ಸ್ಥಾನ ಪಡೆದುಕೊಂಡಿದೆ. ಆರಂಭಿಕ 6 ಸ್ಥಾನದಲ್ಲಿರುವ ಈ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.
 

Follow Us:
Download App:
  • android
  • ios