Pro Kabaddi League : ಥ್ರಿಲ್ಲಿಂಗ್ ಗೆಲುವು ಸಾಧಿಸಿದ ಪುಣೇರಿ, ಜೈಪುರ, ಯುಪಿ ಯೋಧಾ!

ಹರಿಯಾಣ ಸ್ಟೀಲರ್ಸ್ ವಿರುದ್ಧ 2 ಅಂಕಗಳ ಗೆಲುವು ಕಂಡ ಜೈಪುರ
34-33 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿ ಪುಣೇರಿ
36-35 ಅಂಕದಿಂದ ಪಟನಾ ತಂಡವನ್ನು ಸೋಲಿಸಿದ ಯುಪಿ ಯೋಧಾ
 

pro kabaddi UP Yoddha Beat Patna and Pirates Paltan Beat Titans in third match Jaipur Beat Haryana san

ಬೆಂಗಳೂರು (ಡಿ. 25): ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ (Pro Kabaddi League) ಶನಿವಾರದ ಎಲ್ಲಾ ಪಂದ್ಯಗಳ ರೋಚಕವಾಗಿ ಅಂತ್ಯ ಕಂಡಿವೆ. ಮೈದಾನಕ್ಕಿಳಿದ್ದ ತಂಡಗಳ ಪೈಕಿ ಪುಣೇರಿ ಪಲ್ಟನ್ (Puneri Paltan) ಹಾಗೂ ಯುಪಿ ಯೋಧಾ ( UP Yoddha) ತಂಡಗಳು ಎದುರಾಳಿಯ ವಿರುದ್ಧ ಕೇವಲ 1 ಅಂಕದ ಅಂತರದಲ್ಲಿ ಜಯಸಿದರೆ, ದಿನದ ಅಂತಿಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ವಿರುದ್ಧ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers)2 ಅಂಕಗಳ ಗೆಲುವು ಕಂಡಿತು. ಸೂಪರ್ ಸ್ಟಾರ್ ಪ್ಲೇಯರ್ ಪ್ರದೀಪ್ ನರ್ವಾಲ್ (Pardeep Narwal) ಹಾಲಿ ಋತುವಿನ ಮೊದಲ ಸೂಪರ್ 10 ಸಾಧನೆಯೊಂದಿಗೆ ಯುಪಿ ಯೋಧಾ ಗೆಲುವು ಕಂಡಿತು.

ಕಂಠೀರವ ಮೈದಾನದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡ 36-35 ಅಂಕಗಳಿಂದ ಪಟನಾ ಪೈರೇಟ್ಸ್ ತಂಡವನ್ನು ಸೋಲಿಸಿದರೆ, 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 34-33 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿತು. ಕೊನೆಯ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 40-38 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಬಗ್ಗು ಬಡಿಯಿತು.

ಯುಪಿ ಗೆಲುವಿಗೆ ನೆರವಾದ ಪ್ರದೀಪ್ ನರ್ವಾಲ್: ಹಲವು ವರ್ಷಗಳ ಕಾಲ ಪಟನಾ ಪೈರೇಟ್ಸ್ ತಂಡದ ಸ್ಟಾರ್ ಆಟಗಾರನಾಗಿದ್ದ ಪ್ರದೀಪ್ ನರ್ವಾಲ್, ಈ ಬಾರಿ ಅದೇ ತಂಡದ ವಿರುದ್ಧ ಭರ್ಜರಿ ಆಟವಾಡುವ ಮೂಲಕ ಯುಪಿ ಗೆಲುವಿಗೆ ಕಾರಣರಾದರು. ಯುಪಿ ತಂಡದ ಮೊದಲ 7 ಅಂಕಗಳಲ್ಲಿ 6 ಅಂಕಗಳನ್ನು ಪಡೆದಿದ್ದ ಪ್ರದೀಪ್ ನರ್ವಾಲ್ ಪಂದ್ಯದ ಕೊನೆಯವರೆಗೂ ಇದೇ ಆಟವನ್ನು ಮುಂದುವರಿಸಿದ್ದರು. ಮೂರು ಬಾರಿ ಪಟನಾ ತಂಡದ ಡಿಫೆನ್ಸ್ ವಿಭಾಗ ಪ್ರದೀಪ್ ಅವರನ್ನು ಟ್ಯಾಕಲ್ ಮಾಡಲು ಯಶಸ್ವಿಯಾದರೂ, ಉಳಿದ ರೈಡರ್ ಗಳ ಕಾಣಿಕೆಯಿಂದಾಗಿ ಯುಪಿ ವಿರಾಮದ ವೇಳೆಗೆ 20-16ರ ಮುನ್ನಡೆ ಕಂಡಿತ್ತು. 2ನೇ ಅವಧಿಯ ಆರಂಭದಲ್ಲಿ ಯುಪಿ ತಂಡದ ಡಿಫೆನ್ಸ್ ವಿಭಾಗದ ಭರ್ಜರಿ ನಿರ್ವಹಣೆಯಿಂದಾಗಿ ಪಟನಾ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಮೂರು ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಕೊನೆಯ ಹಂತದಲ್ಲಿ ಪಟನಾ ತಂಡ ತಿರುಗೇಟು ನೀಡುವ ಪ್ರಯತ್ನ ಮಾಡಿತಾದರೂ ಅದಕ್ಕೆ ಯುಪಿ ಅವಕಾಶ ಕೊಡಲಿಲ್ಲ.

PKL 2021 : ಬೆಂಗಳೂರು ಬುಲ್ಸ್ ಗೆ ಸೋಲಿನ ಗುದ್ದು, ತೆಲುಗು-ತಮಿಳ್ ಸೂಪರ್ ಟೈ
ಪುಣೇರಿ ಗೆಲುವಿನಲ್ಲಿ ಮಿಂಚಿದ ಮೋಹಿತ್ ಗೋಯತ್: ಪಂದ್ಯದ ಕೊನೇ ಕ್ಷಣದಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗುವ ಮೂಲಕ ತೆಲುಗು ಟೈಟಾನ್ಸ್ ವಿರುದ್ಧ ಪುಣೇರಿ ಪಲ್ಟನ್ ರೋಚಕ ಗೆಲುವು ಕಂಡಿತು. ತೆಲುಗು ಟೈಟಾನ್ಸ್ ಪರವಾಗಿ ಸಿದ್ಧಾರ್ಥ್ ದೇಸಾಯಿ (Siddharth Desai) 15 ಅಂಕ ಸಂಪಾದನೆ ಮಾಡಿದರೂ, 37ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕೋರ್ಟ್ ಗೆ ಇಳಿದ ಮೋಹಿತ್ ಗೋಯತ್‌  (Mohit Goyat)ಆಕರ್ಷಕ 9 ಅಂಕ ಸಂಪಾದನೆ ಮಾಡುವ ಮೂಲಕ ಪುಣೇರಿ ವಿಜಯಕ್ಕೆ ನೆರವಾದರು. ಇವರಿಗೆ ಉತ್ತಮ ಸಾಥ್ ನೀಡಿದ ಅಸ್ಲಂ ಇನಾಮ್ ದಾರ್ (Aslam Inamdar) 8 ಅಂಕ ಸಂಪಾದನೆ ಮಾಡಿದರು.

Pro Kabaddi League: ತಲೈವಾಸ್ ಮೇಲೆ ಬೆಂಗಳೂರು ಬುಲ್ಸ್ ಸವಾರಿ..!
ಅರ್ಜುನ್ ಅಬ್ಬರಕ್ಕೆ ಬೆಂಡಾದ ಸ್ಟೀಲರ್ಸ್: ಪಂದ್ಯದ 5ನೇ ನಿಮಿಷದಲ್ಲಿ ಬದಲಿ ಆಅಟಗಾರನಾಗಿ ಕಣಕ್ಕಿಳಿದು ಆಕರ್ಷಕ 18 ಅಂಕ ಸಂಪಾದನೆ ಮಾಡಿದ ಅರ್ಜುನ್ ದೇಸ್ವಾಲ್ (Arjun Deshwal) ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಏಕಾಂಗಿಯಾಗಿ ಗೆಲುವಿನ ದಡ ಮುಟ್ಟಿಸಿದರು. ಎದುರಾಳಿ ತಂಡದಲ್ಲಿ ನಾಯಕ ವಿಕಾಸ್ ಖಂಡೋಲಾ 14 ಅಂಕ ಸಂಪಾದನೆ ಮಾಡಿದರೂ ಇದು ಗೆಲುವಿಗೆ ಸಾಕಾಗಲಿಲ್ಲ. ಅರ್ಜುನ್ ದೇಸ್ವಾಲ್ ಅಲ್ಲದೆ, ನಾಯಕ ಆಲ್ರೌಂಡರ್ ದೀಪಕ್ ಹೂಡಾ ಜೈಪುರ ಪರವಾಗಿ 10 ಅಂಕವನ್ನು ಗಳಿಸಿದರು.

Latest Videos
Follow Us:
Download App:
  • android
  • ios