PKL: ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಮುಗ್ಗರಿಸಿದ ಬೆಂಗಳೂರು ಬುಲ್ಸ್‌!

ಸತತ ಎರಡು ಗೆಲುವಿನ ಓಟದಲ್ಲಿದ್ದ ಬೆಂಗಳೂರು ಬುಲ್ಸ್‌ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ತನ್ನ ಮೊದಲ ಸೋಲು ಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲು ಕಂಡಿತು.

Pro Kabaddi Bengaluru Bulls face first defeat Bengal Warriors san

ಬೆಂಗಳೂರು (ಅ.12): ಮಣಿಂದರ್‌ ಸಿಂಗ್‌ ಮಾಂತ್ರಿಕ ಆಟದ ಮುಂದೆ ದಿಕ್ಕು ತೋಚದಂತಾದ ಬೆಂಗಳೂರು ಬುಲ್ಸ್‌ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ತನ್ನ ಮೊದಲ ಸೋಲು ಕಂಡಿದೆ. ಲೀಗ್‌ನ ತನ್ನ 3ನೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾದ ಬೆಂಗಳೂರು ಬುಲ್ಸ್‌ ತಂಡ 33-42 ಅಂತರದಿಂದ ಬೆಂಗಾಲ್‌ ವಾರಿಯರ್ಸ್‌ಗೆ ಶರಣಾಯಿತು. ಲೀಗ್‌ನಲ್ಲಿ ತನ್ನ ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಮೊದಲ ಸೋಲು ಇದಾಗಿದೆ. ಬೆಂಗಾಲ್‌ ತಂಡದ ನಾಯಕ ಮಣಿಂದರ್‌ ಸಿಂಗ್‌ ಆಕರ್ಷಕ 11 ಅಂಕ ಸಂಪಾದಿಸುವ ಮೂಲಕ ಸೂಪರ್‌ ಟೆನ್‌ ಗರಿಯೊಂದಿಗೆ ತಂಡದ ಗೆಲುವಿಗೆ ಕಾರಣೆ ನೀಡಿದರು. ಬೆಂಗಾಲ್‌ ತಂಡದ ಅಜೇಯ ಓಟ ಮುಂದುವರಿದಿದ್ದು, ಈವರೆಗೂ ಆಡಿರುವ ಮೂರು ಪಂದ್ಯಗಳ ಪೈಕಿ 2 ಗೆಲುವು ಹಾಗೂ 1 ಡ್ರಾ ಪ್ರದರ್ಶನ ತೋರಿದೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡ ಪ್ರೊ ಕಬಡ್ಡಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಪಾಟ್ನಾ ಪೈರೇಟ್ಸ್‌ ತಂಡವನ್ನು ಸೋಲಿಸಿತು. 30-21 ಅಂಕಗಳೊಂದಿಗೆ ತೆಲುಗು ಟೈಟಾನ್ಸ್‌ ವಿಜಯ ಸಾಧಿಸಿತು. ಇದು ಲೀಗ್‌ನಲ್ಲಿ ತೆಲುಗು ಟೈಟಾನ್ಸ್‌ ತಂಡದ ಮೊದಲ ಗೆಲುವು ಎನಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ತೆಲುಗು ಟೈಟಾನ್ಸ್‌ ತಂಡ ಸೋಲು ಕಂಡಿತ್ತು.

ಶ್ರೀಕಾಂತ್‌ ಜಾದವ್‌ (6) ಹಾಗೂ ಗಿರೀಶ್‌ ಮಾರುತಿ (5) ಕ್ರಮವಾಗಿ ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ (PKL) ಉತ್ತಮ ಪ್ರದರ್ಶನ ತೋರಿದರು. ವಾರಿಯರ್ಸ್‌ನ ಅನುಭವಿ ಆಟಗಾರ ದೀಪಕ್‌ ಹೂಡಾ 10 ರೈಡ್‌ಗಳನ್ನು ಮಾಡಿದರೂ ಕೇವಲ ಒಂದು ಅಂಕ ಸಂಪಾದನೆ ಮಾಡಿದರು. ಬೆಂಗಳೂರು ತಂಡಕ್ಕೆ ತವರಿನ ಅಪಾರ ಪ್ರೇಕ್ಷಕರ, ಬೆಂಬಲ ಹಾಗೂ ಪ್ರೋತ್ಸಾಹದ ಹೊರತಾಗಿಯೂ ದಿಟ್ಟ ನಿರ್ವಹಣೆ ತೋರುವಲ್ಲಿ ವಿಫಲವಾಯಿತು. ಬೆಂಗಳೂರು ಬುಲ್ಸ್‌ (Bengaluru Bulls) ತಂಡದ ಪರವಾಗಿ ಭರತ್‌ 8 ಅಂಕ ಸಂಪಾದನೆ ಮಾಡಿದರೆ, ವಿಕಾಸ್‌ ಖಂಡೋಲಾ 7 ಅಂಕ ಸಂಪಾದನೆ ಮಾಡಿದರು. ಆದರೆ ಇವರಿಬ್ಬರ ಪ್ರಯತ್ನ ತಂಡಕ್ಕೆ ಗೆಲುವು ತಂದುಕೊಡುವಲ್ಲಿ (Pro Kabaddi) ಸಹಾಯ ಮಾಡಲಿಲ್ಲ.

ಬೆಂಗಾಲ್‌ ವಾರಿಯರ್ಸ್‌ ತಂಡಕ್ಕೆ 1 ಅಂಕದ ಮುನ್ನಡೆ: ಮೊದಲ ಅವಧಿಯ ಆಟ ಮುಗಿದ ವೇಳೆಗೆ ಬೆಂಗಾಲ್‌ ವಾರಿಯರ್ಸ್‌ (Bengal Warriors) ತಂಡ ಕೇವಲ1 ಅಂಕದ ಮುನ್ನಡೆ ಹೊಂದಿತ್ತು. ಬೆಂಗಾಲ್‌ 15 ಅಂಕ ಸಂಪಾದನೆ ಮಾಡಿದ್ದರೆ, ಬುಲ್ಸ್‌ 14 ಅಂಕ ಗಳಿಸಿತ್ತು.  ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ಕೊನೆಯ ಕ್ಷಣದಲ್ಲಿ ವಾರಿಯರ್ಸ್‌ಗೆ ಸುಲಭವಾಗಿ ಅಂಕಗಳನ್ನು ನೀಡಿತು. ಬೆಂಗಾಲ್‌ ವಾರಿಯರ್ಸ್‌ ಈ ಅವಧಿಯಲ್ಲಿ ಒಮ್ಮೆ ಆಲೌಟ್‌ ಆದರೂ, ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.  ವಾರಿಯರ್ಸ್‌ ರೈಡಿಂಗ್‌ನಲ್ಲಿ 10 ಅಂಕಗಳನ್ನು ಗಳಿಸಿದ್ದು ಬುಲ್ಸ್‌ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ನಾಯಕ ಮಣಿಂದರ್‌ ಸಿಂಗ್‌ 4 ಅಂಕಗಳನ್ನು ಗಳಿಸಿದರೆ, ಮನೋಜ್‌ ಗೌಡ 3 ಅಂಕಗಳನ್ನು ಗಳಿಸಿ ವಾರಿಯರ್ಸ್‌ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಳೂರು ಪರ ಭರತ್‌ 4 ಅಂಕಗಳನ್ನು ಗಳಿಸಿದರು.

Pro Kabaddi League ಹರ್ಯಾಣ ಹಾಗೂ ತೆಲುಗು ಟೈಟಾನ್ಸ್‌ಗೆ ಗೆಲುವಿನ ಸಿಹಿ!

ಬುಲ್ಸ್‌ಗೆ ಸ್ಫೂರ್ತಿ ತುಂಬಿದ ಕಿಚ್ಚ ಸುದೀಪ್‌: ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ (Kichcha Sudeep) ಅವರು ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಶುಭ ಹಾರೈಸಿದರು.  ಇದುವರೆಗೂ ನಡೆದ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಬುಲ್ಸ್‌ 9ನೇ ಋತುವಿನಲ್ಲಿ ಉತ್ತಮ ಆರಂಭ ಕಂಡಿದೆ. ತೆಲುಗು ಟೈಟಾನ್ಸ್‌ ಹಾಗೂ ಪುಣೇರಿ ಪಲ್ಟನ್‌ ವಿರುದ್ಧ ಜಯ ಗಳಿಸಿದ ಮಾಜಿ ಚಾಂಪಿಯನ್‌ ಬುಲ್ಸ್‌ ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದೆನಿಸಿದೆ.

Pro Kabaddi League ದಬಾಂಗ್ ದಿಲ್ಲಿ, ಯು ಮುಂಬಾ ಗೆಲುವಿನ ಸವಾರಿ, ರೋಚಕ ಹೋರಾಟಕ್ಕೆ ಸಾಕ್ಷಿಯಾದ ಉದ್ಯಾನನಗರಿ!

ನಾವೆಲ್ಲರೂ ಕಬಡ್ಡಿ ಆಡಿದವರೇ, ಕಳೆದ ಋತುವಿನಲ್ಲಿ ಕಬಡ್ಡಿಯೊಂದಿಗಿನ ನನ್ನ ಸಂಬಂಧ ಹಸಿರಾಗಿಯೇ ಉಳಿದಿದೆ. ಶಾಲಾ ದಿನಗಳಲ್ಲಿ ಕಬಡ್ಡಿ ಆಡಿರುವುದು ನನಗೆ ಈಗಲೂ ನೆನಪಿದೆ. ಕ್ರೀಡೆಯಲ್ಲಿರುವ ದೈಹಿಕ ಸಮರವನ್ನು ಎಂದೂ ಮರೆಯಲಾಗದು ಎಂದು ಕಬಡ್ಡಿ ಬಗೆಗಿನ ಪ್ರೀತಿ ಬಗ್ಗೆ ಕಿಚ್ಚ ಸುದೀಪ್‌ ಮಾತಾಡಿದ್ದಾರೆ.ಅವರ ಮುಖಗಳನ್ನು ನೋಡುವುದಕ್ಕಿಂತ, ಅವರೆಲ್ಲರೂ ನನ್ನ ಮೇಲೆ ಬಿದ್ದರೆ ಏನಾಗಬಹುದು ಎಂದು ಅವರ ದೇಹವನ್ನು ನೋಡುತ್ತಿದ್ದೇನೆ, ಅವರೆಲ್ಲ ಉತ್ತಮ ಕಸರತ್ತು ನಡೆದ ಉತ್ತಮ ದೈಹಿಕ ಕ್ಷಮತೆಯನ್ನು ಹೊಂದಿದ್ದಾರೆ. ಇದಕ್ಕೆಲ್ಲ ಯಾವ ರೀತಿಯ ತರಬೇತಿ ಬೇಕಾಗಬಹುದು ಎಂದು ನಾನು ಅಚ್ಚರಿಯಿಂದ ಯೋಚಿಸುತ್ತಿದ್ದೇನೆ. ಕೌಶಲ್ಯದ ಜೊತೆಯಲ್ಲಿ ದೈಹಿಕ ಸಾಮರ್ಥ್ಯ ಬೇಕಾಗುವ ಅತ್ಯಂತ ಅಪರೂಪದ ಕ್ರೀಡೆ ಕಬಡ್ಡಿ ಎಂದು ಬೆಂಗಳೂರು ಬುಲ್ಸ್‌ ತಂಡದ ಬಗ್ಗೆ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios