Pro Kabaddi League ದಬಾಂಗ್ ದಿಲ್ಲಿ, ಯು ಮುಂಬಾ ಗೆಲುವಿನ ಸವಾರಿ, ರೋಚಕ ಹೋರಾಟಕ್ಕೆ ಸಾಕ್ಷಿಯಾದ ಉದ್ಯಾನನಗರಿ!

ಸೋಮವಾರ ನಡೆದ ಎರಡು ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಮೊದಲ ಪಂದ್ಯದಲ್ಲಿ ಯು ಮುಂಬಾ ಗೆಲುವಿನ ನಗೆ ಬೀರಿದರೆ, ದ್ವಿತೀಯ ಪಂದ್ಯದಲ್ಲಿ ದಂಬಾಗ್ ದಿಲ್ಲಿ ಗಲುವಿನ ನಗಾರಿ ಬಾರಿಸಿದೆ.

Pro Kabaddi League 2022 U mumba beat up yodhas and Dabang Delhi wins against Gujarat giants ckm

ಬೆಂಗಳೂರು(ಅ.10): ನಾಯಕ ನವೀನ್‌ ಕುಮಾರ್‌ ಅವರ ಸೂಪರ್‌ ಅದ್ಭುತ ರೈಡಿಂಗ್‌ ಸಾಧನೆಯ ಮೂಲಕ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆಸಿ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 53-33 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಯುಪಿ ಯೋಧಾಸ್‌ ವಿರುದ್ಧ 30-23 ಅಂತರದಲ್ಲಿ ಜಯ ಗಳಿಸಿತ್ತು. ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಎಕ್ಸ್‌ಪ್ರೆಸ್‌ 15 ರೈಡಿಂಗ್‌ ಅಂಕಗಳನ್ನು ಗಳಿಸಿ ಪ್ರೋ ಕಬಡ್ಡಿ ಲೀಗ್‌ ಇತಿಹಾಸಲ್ಲಿ 44ನೇ ಬಾರಿಗೆ ಸೂಪರ್‌ 10 ಸಾಧನೆ ಮಾಡಿದರು. ತಂಡದ ಪರ ಮಂಜಿತ್‌ ಕೂಡ 10 ರೈಡಿಂಗ್‌ ಅಂಕಗಳನ್ನು ಗಳಿಸಿ ಸೂಪರ್‌ 10 ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ಯಾಕಲ್‌ನಲ್ಲಿ ಕ್ರಿಷನ್‌ 7 ಅಂಕಗಳನ್ನು ಗಳಿಸಿ ಬೃಹತ್‌ ಜಯಕ್ಕೆ ನೆರವಾದರು.

ಗುಜರಾತ್‌ ಜಯಂಟ್ಸ್‌ ಪರ ರಾಕೇಶ್‌ ಒಂಟಿಯಾಗಿ ಹೋರಾಟ ನಡೆಸಿದ ರೀತಿಯಲ್ಲಿ 15 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಪ್ರಥಮಾರ್ಧದಲ್ಲಿ ದಬಾಂಗ್‌ ಡೆಲ್ಲಿ ಮುನ್ನಡೆ: ನಾಯಕ ನವೀನ್‌ ಕುಮಾರ್‌ ಕೊನೆಯ ಕ್ಷಣದಲ್ಲಿ ಮಿಂಚಿನ ರೈಡಿಂಗ್‌ ಮಾಡುವ ಮೂಲಕ ದಬಾಂಗ್‌ ಡೆಲ್ಲಿ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 21-17 ಅಂತರದಲ್ಲಿ ಮುನ್ನಡೆ ಕಂಡುಕೊಂಡಿದೆ. ನವೀನ್‌ ಕುಮಾರ್‌ ಮೊದಲ ಪಂದ್ಯದಲ್ಲಿ ತೋರಿದ ಯಶಸ್ಸನ್ನು ಎರಡನೇ ಪಂದ್ಯದಲ್ಲಿ ಕಾಣಲಿಲ್ಲ. ಮೊದಲ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದದದ್ದೇ ಇದಕ್ಕೆ ಕಾರಣ ಇರಬಹದು. ಆರಂಭದ 8 ರೈಡ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 3 ಅಂಕಗಳು. ನಂತರ ನೈಜ ಪ್ರದರ್ಶನ ತೋರಿ 7 ಅಂಕಗಳನ್ನು ಸಂಪಾದಿಸಿದರು. ಜೊತೆಯಲ್ಲಿ ಗುಜರಾತ್‌ ತಂಡವನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಮಂಜೀತ್‌ 4 ಅಂಕಗಳ ಮೂಲಕ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್‌ ವಿಭಾಗದಲ್ಲಿ ಕಿಶನ್‌ ಹಾಗೂ ವಿಶಾಲ್‌ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

Pro Kabaddi League ಬೆಂಗಳೂರು ಬುಲ್ಸ್‌ಗೆ ಸತತ 2ನೇ ಗೆಲುವು, ಮೊದಲ ಸ್ಥಾನಕ್ಕೆ ಲಗ್ಗೆ!

ಗುಜರಾತ್‌ ಜಯಂಟ್ಸ್‌ ಆರಂಭದಿಂದಲೂ ದಿಟ್ಟ ಹೋರಾಟ ನೀಡುತ್ತ ಸಮಬಲ ಸಾಧಿಸಿತ್ತು. ರಾಕೇಶ್‌ ಸೂಪರ್‌ 10 ಮೂಲಕ ತಂಡ ಉತ್ತಮ ಸವಾಲು ನೀಡುವಲ್ಲಿ ನೆರವಾದರು. ತಂಡದ ಡಿಫೆನ್ಸ್‌ ವಿಭಾಗ ನಿರೀಕ್ಷಿತ ಪ್ರಮಾಣದಲ್ಲಿ ಅಂಕ ಗಳಿಸದಿರುವುದು ಗುಜರಾತ್‌ನ ಮೊದಲಾರ್ಧದ ಹಿನ್ನಡೆಗೆ ಕಾರಣವಾಯಿತು.

ಯು ಮುಂಬಾಕ್ಕೆ ಜಯ: 
ಆಲ್ರೌಂಡ್‌ ಪ್ರದರ್ಶನ ತೋರಿದ ಯು ಮುಂಬಾ ತಂಡ ಯುಪಿ ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ 30-23 ಅಂತರದಲ್ಲಿ ಜಯದ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಡಬಾಂಗ್‌ ಡೆಲ್ಲಿ ವಿರುದ್ಧ ಸೋಲನುಭವಿಸಿತ್ತು. ಪ್ರಥಮಾರ್ಧದಲ್ಲಿ 14-9 ಅಂತರದಲ್ಲಿ ಮುನ್ನಡೆದ ಯು ಮುಂಬಾ ದ್ವಿತಿಯಾರ್ಧಲ್ಲೂ ಆ ಮುನ್ನಡೆಯನ್ನು ಕಾಯ್ದುಕೊಂಡಿತು. ಸುರೀಂದರ್‌ ಸಿಂಗ್‌ ನಾಯಕತ್ವದ ಯು ಮುಂಬಾ ತಂಡದ ಪರ ರೈಡರ್‌ ಜೈ ಭಗವಾನ್‌ 6 ಅಂಕಗಳನ್ನು ಗಳಿಸಿ ಯಶಸ್ವಿ ರೈಡರ್‌ ಎನಿಸಿದರು. ರಿಂಕು ಹಾಗೂ ಕಿರಣ್‌ ಮಗರ್‌ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಗುಮಾನ್‌ ಸಿಂಗ್‌ (5) ಅವರು ಕೂಡ ರೈಡಿಂಗ್‌ನಲ್ಲಿ ಮಿಂಚಿ ತಂಡದ ಜಯಕ್ಕೆ ನೆರವಾದರು. ಟ್ಯಾಕಲ್‌ನಲ್ಲಿ ಯುಮುಂಬಾ 14 ಅಂಕಗಳನ್ನು ಗಳಿಸಿದ್ದು ಯು ಪಿ ಯೋಧಾಶ್‌ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.

Pro Kabaddi League ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ!

ಯುಪಿ ಯೋಧಾ ತಂಡದ ಅನುಭವಿ ಆಟಗಾರ ಪ್ರದೀಪ್‌ ನರ್ವಾಲ್‌ ರೈಡಿಂಗ್‌ನಲ್ಲಿ ಯಶಸ್ಸು ಕಾಣಲಿಲ್ಲ. ಮಾಡಿದ 18 ರೈಡಿಂಗ್‌ನಲ್ಲಿ ಅವರು ಗಳಿಸಿದ್ದು ಕೇವಲ 5 ಅಂಕ. ಸಾಮಾನ್ಯವಾಗಿ ದ್ವಿತಿಯಾರ್ಧಲ್ಲಿ ತನ್ನ ನೈಜ ಆಟವನ್ನು ಪ್ರದರ್ಶಿಸುವ ನರ್ವಾಲ್‌ ಯು ಮುಂಬಾ ವಿರುದ್ಧ ಚೇತರಿಸಿಕೊಳ್ಳಲಿಲ್ಲ. ಅಶು ಸಿಂಗ್‌ ಹಾಗೂ ಸುಮಿತ್‌ ಟ್ಯಾಕಲ್‌ನಲ್ಲಿ ಒಟ್ಟು ಗಳಿಸಿದ 8 ಅಂಕಗಳು ಸೋಲಿನ ಅಂತರವನ್ನು ಕಡಿಮೆ ಮಾಡಿತು. ತಂಡವೊಂದು ಒಬ್ಬ ಆಟಗಾರನನ್ನೇ ನೆಚ್ಚಿಕೊಂಡಿರಬಾರದು ಎಂಬ ಸಂದೇಶವನ್ನೂ ಈ ಪಂದ್ಯ ಸಾರಿತು.
 

Latest Videos
Follow Us:
Download App:
  • android
  • ios