ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!
2019ರ ಪ್ರೋ ಕಬಡ್ಡಿ ಪ್ಲೇ ಆಫ್ ಪಂದ್ಯಗಳು ಅ.14 ರಿಂದ ಆರಂಭವಾಗಲಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. 2019ರ ಪ್ರೊ ಕಬಡ್ಡಿ ಪ್ರಶಸ್ತಿ ಮೊತ್ತ ಬರೋಬ್ಬರಿ 8 ಕೋಟಿ ರೂಪಾಯಿ ತಲುಪಿದೆ.
ನವದೆಹಲಿ(ಅ.13):ಪ್ರೊ ಕಬಡ್ಡಿ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಳೆಯಿಂದ(ಅ.14) ಪ್ಲೇ ಆಫ್ ಪಂದ್ಯ ನಡೆಯಲಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧ ಮುಖಾಮುಖಿಯಾಗುತ್ತಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ವಿಶೇಷ ಅಂದರೆ 2019ರ ಪ್ರೋ ಕಬಡ್ಡಿ ಚಾಂಪಿಯನ್ ತಂಡ ಬರೋಬ್ಬರಿ 3 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ.
ಇದನ್ನೂ ಓದಿ: ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್ ಅ.19ರಂದು ಅಹ್ಮದಾಬಾದ್ನಲ್ಲಿ ನಡೆಯಲಿದ್ದು, ಚಾಂಪಿಯನ್ ತಂಡ 3 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ. ರನ್ನರ್ಅಪ್ ತಂಡ 1.8 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆಯಲಿದೆ. 3ನೇ ಹಾಗೂ 4ನೇ ಸ್ಥಾನ ಸಂಪಾದಿಸುವ ತಂಡಗಳು ತಲಾ 90 ಲಕ್ಷ ರೂಪಾಯಿ ಬಹುಮಾನ ಗೆಲ್ಲಲಿವೆ.
ಇದನ್ನೂ ಓದಿ: ಒಂದೇ ರೈಡ್‌ನಲ್ಲಿ ಪ್ರದೀಪ್ ನರ್ವಾಲ್‌ಗೆ 6 ಅಂಕ..!
5ನೇ ಹಾಗೂ 6ನೇ ಸ್ಥಾನ ಸಂಪಾದಿಸುವ ತಂಡಗಳು ತಲಾ 45 ಲಕ್ಷ ರೂಪಾಯಿ ಬಹುಮಾನ ಪಡೆದುಕೊಳ್ಳಲಿವೆ. ಡೆಲ್ಲಿ, ಬೆಂಗಾಲ್, ಹರ್ಯಾಣ, ಯು.ಪಿ ಯೋಧಾ, ಮುಂಬಾ ಹಾಗೂ ಬೆಂಗಳೂರು ತಂಡಗಳು ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ ಆಫ್ ಸೆಣಸಲಿವೆ. ಯಾವುದೇ ತಂಡವಾದರೂ ಕನಿಷ್ಠ ಪಕ್ಷ 45 ಲಕ್ಷ ರೂಪಾಯಿ ಮೊತ್ತ ಗೆಲ್ಲುವುದು ಖಚಿತ. 50 ಲಕ್ಷ ರೂಪಾಯಿ ವೈಯಕ್ತಿಕ ಪ್ರಶಸ್ತಿ ನೀಡುತ್ತಿದ್ದು, ಒಟ್ಟಾರೆ ಪ್ರಶಸ್ತಿ ಮೊತ್ತ 8 ಕೋಟಿ ರೂಪಾಯಿ ತಲುಪಿದೆ.