ಪ್ರದೀಪ್ ನರ್ವಾಲ್ ಒಂದೇ ರೈಡ್‌ನಲ್ಲಿ 6 ಅಂಕ ಗಳಿಸುವ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಗ್ರೇಟರ್ ನೋಯ್ಡಾ(ಅ.07): ಪಾಟ್ನಾ ಪೈರೇಟ್ಸ್‌ನ ತಾರಾ ರೈಡರ್ ಪ್ರದೀಪ್ ನರ್ವಾಲ್ ಒಂದೇ ರೈಡ್‌ನಲ್ಲಿ 6 ಅಂಕಗಳನ್ನು ಸಂಪಾದಿಸಿದ ಪ್ರೊ ಕಬಡ್ಡಿ ದಾಖಲೆ ಬರೆದಿದ್ದಾರೆ. 38ನೇ ನಿಮಿಷದಲ್ಲಿ ಪ್ರದೀಪ್ ದಾಖಲೆಯ ರೈಡ್ ಮಾಡಿದ್ದರು. ಪ್ರೊ ಕಬಡ್ಡಿ 7ನೇ ಆವೃತ್ತಿಯ ಕೊನೆಯ ಪಂದ್ಯವಾಡಿದ ಪಾಟ್ನಾ ಪರ ಮಿಂಚಿದ ಪ್ರದೀಪ್ 300 ರೈಡ್ ಅಂಕಗಳ ಮೈಲಿಗಲ್ಲು ದಾಖಲಿಸಿದರು.

Scroll to load tweet…

PKL 7: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯೋಧಾ

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಈಗಾಗಲೇ ಪ್ಲೇಆಫ್ ಪ್ರವೇಶಿಸಿದ ಬೆಂಗಾಲ್ ವಾರಿಯರ್ಸ್‌ ತನ್ನ ತಾರಾ ಆಟಗಾರರಿಗೆ ವಿಶ್ರಾಂತಿ ನೀಡಿತು. ಪ್ರದೀಪ್ ಭರ್ಜರಿ ಪ್ರದರ್ಶನದಿಂದ ಪಾಟ್ನಾ 69-41ರಲ್ಲಿ ಅಮೋಘ 28 ಅಂಕಗಳಿಂದ ಜಯಿಸಿತು. ಈ ಪಂದ್ಯವೊಂದರಲ್ಲೇ ದಾಖಲೆ 110 ಅಂಕಗಳು ಹರಿದುಬಂದವು. ಬೆಂಗಾಲ್ ತಂಡವನ್ನು 4 ಬಾರಿ ಆಲೌಟ್‌ನತ್ತ ತಳ್ಳಿದ ಪಾಟ್ನಾ ಶ್ರೇಷ್ಠ ಪ್ರದರ್ಶನ ನೀಡಿತು. ಈ ಆವೃತ್ತಿಗೆ ಪಾಟ್ನಾ ಗೆಲುವಿನ ವಿದಾಯ ಹೇಳಿತು.

Scroll to load tweet…

ಪಂದ್ಯವೊಂದರಲ್ಲೇ ಪ್ರದೀಪ್ 36 ಅಂಕಗಳನ್ನು ಸಂಪಾದಿಸಿದರು. 34 ರೈಡ್ ಹಾಗೂ 2 ಟ್ಯಾಕಲ್ ಅಂಕಗಳನ್ನೂ ಗಳಿಸಿದ್ದು, ಪವನ್ ಶೆರಾವತ್ ದಾಖಲೆ ಮುರಿಯುವಲ್ಲಿ ಎಡವಿದರು. ಮೊದಲಾರ್ಧ ಪಾಟ್ನಾ 27-17ರಲ್ಲಿ ಮುನ್ನಡೆ ಪಡೆಯಿತು. 22 ಪಂದ್ಯಗಳಲ್ಲಿ 13 ಸೋಲುಂಡಿದ್ದ ಪಾಟ್ನಾ 8 ನೇ ಜಯ ಸಾಧಿಸಿದ್ದು, 51 ಅಂಕಗಳನ್ನು ಸಂಪಾದಿಸಿತು.

4ನೇ ಸ್ಥಾನಕ್ಕೆ ಯುಪಿ ಯೋಧಾ!

ಯು.ಪಿ ಯೋಧಾ ತವರಿನ ಚರಣದಲ್ಲಿ ಸತತ 2ನೇ ಜಯ ಸಾಧಿಸಿದ್ದು, 20ನೇ ಪಂದ್ಯದಲ್ಲಿ 69 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿತು. ಭಾನುವಾರ ಇಲ್ಲಿ ನಡೆದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ 43-39ರಲ್ಲಿ ರೋಚಕ ಜಯ ಸಾಧಿಸಿತು. 

Scroll to load tweet…

ಕಳೆದ ಪಂದ್ಯದಲ್ಲಿ ಗೆದ್ದ ಯೋಧಾ 6ನೇ ತಂಡವಾಗಿ ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇಆಫ್ ಪ್ರವೇಶಿಸಿತ್ತು. ಕೊನೆಯ ಪಂದ್ಯವಾಡಿದ ಪುಣೇರಿ 12ನೇ ಸೋಲುಂಡು ಹೊರಬಿದ್ದಿತು.