ಅಹಮದಾಬಾದ್‌(ಅ.14): ಪ್ರೊ ಕಬಡ್ಡಿ 7ನೇ ಆವೃತ್ತಿಯ ಪ್ಲೇ ಆಫ್‌ ಹಂತ ಸೋಮವಾರ (ಅ.14)ದಿಂದ ಆರಂಭವಾಗಲಿದೆ. 6 ತಂಡಗಳು ಈ ಹಂತದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ದಬಾಂಗ್‌ ಡೆಲ್ಲಿ ಹಾಗೂ ಬೆಂಗಾಲ್‌ ವಾರಿಯರ್ಸ್‌ ನೇರ ಸೆಮಿಫೈನಲ್‌ ಹಂತಕ್ಕೇರಿದ್ದು, ನಂತರದ 4 ಸ್ಥಾನ ಪಡೆದಿರುವ ಯುಪಿ ಯೋಧಾ, ಯು ಮುಂಬಾ, ಹರಾರ‍ಯಣ ಸ್ಟೀಲರ್ಸ್‌ ಹಾಗೂ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಎಲಿಮಿನೇಟರ್‌ ಪಂದ್ಯಗಳಲ್ಲಿ ಸೆಣಸಲಿವೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!

ಮೊದಲ ಎಲಿಮಿನೇಟರ್‌ನಲ್ಲಿ ಬೆಂಗಳೂರು ಬುಲ್ಸ್‌, ಯುಪಿ ಯೋಧಾ ತಂಡವನ್ನು ಎದುರಿಸಿದರೆ, ಮಾಜಿ ಚಾಂಪಿಯನ್‌ ಯು ಮುಂಬಾ, ಹರಾರ‍ಯಣ ಸ್ಟೀಲರ್ಸ್‌ ಎದುರು ಸೆಣಸಲಿದೆ. ಎಲಿಮಿನೇಟರ್‌ನಲ್ಲಿ ಸೋತ ತಂಡಗಳು ಟೂರ್ನಿಯಿಂದ ಹೊರ ಬೀಳಲಿವೆ. ಅ.16 ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಮೊದಲ ಸೆಮೀಸ್‌ನಲ್ಲಿ ಡೆಲ್ಲಿ ತಂಡದ ಎದುರು ಎಲಿಮಿನೇಟರ್‌ 1ರಲ್ಲಿ ಗೆದ್ದ ತಂಡ ಹಾಗೂ 2ನೇ ಸೆಮೀಸ್‌ನಲ್ಲಿ ಬೆಂಗಾಲ್‌ ವಿರುದ್ಧ ಎಲಿಮಿನೇಟರ್‌ 2ರಲ್ಲಿ ಗೆದ್ದ ತಂಡ ಸೆಣಸಲಿದೆ. ಅ. 19ರಂದು ಫೈನಲ್‌ ಪಂದ್ಯ ನಡೆಯಲಿದೆ.

ಇದನ್ನೂ ಓದಿ: 2024ರ ಒಲಿಂಪಿ​ಕ್ಸ್‌ಗೆ ಕಬಡ್ಡಿ ಸೇರಲಿ: ಕಿರಣ್ ರಿಜಿ​ಜು

ಕ್ಯಾಫ್ಶನ್‌: ಭಾನುವಾರ ಅಹಮದಾಬಾದ್‌ನಲ್ಲಿ ಪ್ಲೇ ಆಫ್‌ಗೇರಿರುವ 6 ತಂಡಗಳ ನಾಯಕರುಗಳು ಟ್ರೋಫಿಯೊಂದಿಗೆ ಕಾಣಿಸಿಕೊಂಡರು.