ನವ​ದೆ​ಹ​ಲಿ[ಅ.09]: ದೇಶದೆಲ್ಲಡೆ ಪ್ರೊ ಕಬಡ್ಡಿ ಹವಾ ಜೋರಾಗಿರುವ ಬೆನ್ನಲ್ಲೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಬಡ್ಡಿಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಇದೀಗ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಹಾ ಈ ಬಗ್ಗೆ ಧ್ವನಿ ಎತ್ತಿದ್ದಾರೆ. 

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, 2024ರ ಪ್ಯಾರಿಸ್‌ ಒಲಿಂಪಿ​ಕ್ಸ್‌ಗೆ ಕಬಡ್ಡಿ ಸೇರಿಸ​ಲು ಸರ್ಕಾರ ಒತ್ತಡ ಹೇರ​ಲಿದೆ ಎಂದು ತಿಳಿ​ಸಿ​ದ್ದಾ​ರೆ. ‘ಗ್ರಾಮೀಣ ಕ್ರೀಡೆ​ಯೊಂದು ಹೇಗೆ ಯಶ​ಸ್ವಿ​ಯಾಗಿ ಬೆಳೆಯ​ಬ​ಹುದು ಎಂಬು​ದಕ್ಕೆ ಕಬಡ್ಡಿ ಉತ್ತಮ ಉದಾ​ಹ​ರಣೆ. ಮುಂದಿನ ದಿನಗಳಲ್ಲಿ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರಿ​ಕೊ​ಳ್ಳು​ವ ಬಗ್ಗೆ ನನಗೆ ವಿಶ್ವಾ​ಸ​ವಿ​ದೆ.’ ಕಬ​ಡ್ಡಿ ಕ್ರೀಡೆಗೆ ಅಂ.​ರಾ​. ಒಲಿಂಪಿಕ್‌ ಸಮಿತಿ (ಐಒ​ಸಿ) ಮಾನ್ಯತೆ ನೀಡ​ಬೇ​ಕು ಎಂದು ರಿಜಿಜು ಹೇಳಿದರು.

ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿ: ಭಜರಂಗ್ ಆಗ್ರಹ

ಕ್ರೀಡಾ ಸಚಿವನಾಗಿ ಗ್ರಾಮೀಣ ಕ್ರೀಡೆಯನ್ನು ಹೇಗೆ ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎನ್ನುವುದರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ. ಸ್ಥಳೀಯ ಕ್ರೀಡೆ ಹೇಗೆ ಯಶಸ್ವಿಯಾಗಿದೆ ಎನ್ನುವುದಕ್ಕೆ ಕಬಡ್ಡಿ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಕಬಡ್ಡಿಯನ್ನು ಒಲಿಂಪಿಕ್ಸ್’ಗೆ ಸೇರಿಸುವ ನಿಟ್ಟಿನಲ್ಲಿ ನಾವು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಕೋಟ್ಯಾಂತರ ಜನಸಂಖ್ಯೆ ಇರುವ ಶಕ್ತಿಶಾಲಿ ದೇಶ ಪ್ರಯತ್ನಿಸಿದರೆ ಇದು ಸಾಧ್ಯವಾಗಲಿದೆ ಎನ್ನುವ ವಿಶ್ವಾಸವನ್ನು ರಿಜಿಜು ವ್ಯಕ್ತಪಡಿಸಿದ್ದಾರೆ.

ವಾಟ್ಸ್‌ಆ್ಯಪ್ ಮೂಲಕ ಬಹುಮಾನ ಮೊತ್ತ ಗಳಿಸಿ..!

ಕಬಡ್ಡಿ ಏಷ್ಯನ್ ಗೇಮ್ಸ್’ನ ಭಾಗವಾಗಿದೆಯಾದರೂ, ಇದುವರೆಗೂ ಒಲಿಂಪಿಕ್ಸ್’ನಲ್ಲಿ ಅವಕಾಶ ಕಲ್ಪಿಸಿಲ್ಲ. 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್’ನಲ್ಲಿ ಇರಾನ್ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಭಾರತದ ನಂತರ ಚಿನ್ನ ಗೆದ್ದ ಮೊದಲ ತಂಡ ಎನ್ನುವ ಗೌರವಕ್ಕೂ ಇರಾನ್ ಪಾತ್ರವಾಯಿತು. ಇನ್ನು ಭಾರತದ ಪುರುಷರ ತಂಡ ಕಂಚಿನ ಪದಕ ಜಯಿಸಿದರೆ, ಮಹಿಳಾ ತಂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು.