Asianet Suvarna News Asianet Suvarna News

PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

ಪಿಬಿಎಲ್ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 7 ತಂಡಗಳು ಸ್ಟಾರ್ ಶಟ್ಲರ್‌ಗಳನ್ನು ಖರೀದಿಸಲು ಮುಗಿಬಿದ್ದವು. ಭಾರತದ ತಾರಾ ಶಟ್ಲರ್ ಪಿವಿ ಸಿಂಧು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ

PBL auction pv singh bags highest paid shuttler title
Author
Bengaluru, First Published Nov 27, 2019, 9:46 AM IST

ನವ​ದೆ​ಹ​ಲಿ(ನ.27) : ಮುಂದಿನ ವರ್ಷ ಜ.20ರಿಂದ ಫೆ.9ರ ವರೆಗೆ ನಡೆ​ಯ​ಲಿ​ರುವ ಪ್ರೀಮಿ​ಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿ​ಎ​ಲ್‌)​ 5ನೇ ಆವೃ​ತ್ತಿಯ ಹರಾಜು ಪ್ರಕ್ರಿ​ಯೆ​ಯಲ್ಲಿ ವಿಶ್ವ ಚಾಂಪಿ​ಯನ್‌ ಪಿ.ವಿ ಸಿಂಧು .77 ಲಕ್ಷ ಮೊತ್ತವನ್ನು ಬಾಚಿಕೊಂಡಿದ್ದಾರೆ. ವಿಶ್ವ ನಂ.1 ಸಿಂಗಲ್ಸ್‌ ತಾರೆ ಚೈನೀಸ್‌ ತೈಪೆಯ ತೈ ತ್ಜು ಯಿಂಗ್‌ ಕೂಡ 77 ಲಕ್ಷ ಪಡೆದಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿಂಧು ಹಾಗೂ ತೈ ತ್ಜು ಯಿಂಗ್‌ ಈ ಆವೃ​ತ್ತಿಯ ಅತ್ಯಂತ ದುಬಾರಿ ಶಟ್ಲ​ರ್‌​ಗ​ಳು ಎನಿ​ಸಿ​ಕೊಂಡ​ರು. ಉಳಿ​ದಂತೆ ಪುರು​ಷ​ರಲ್ಲಿ ತಾರಾ ಶಟ್ಲರ್‌ ಬಿ.ಸಾಯಿ ಪ್ರಣೀತ್‌ 32 ಲಕ್ಷ ರು. ಪಡೆ​ದಿ​ದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ, ಪಿವಿ ಸಿಂಧುಗೆ ಹೊಸ ಜವಾಬ್ದಾರಿ ಕೊಟ್ಟ ನರೇಂದ್ರ ಮೋದಿ

ವಿಶ್ವ ನಂ.9 ಅಮೆ​ರಿ​ಕದ ಸಿಂಗಲ್ಸ್‌ ತಾರಾ ಆಟ​ಗಾರ್ತಿ ಬೀವನ್‌ ಝಾಂಗ್‌​ 39 ಲಕ್ಷ ರು. ಜ್ಯಾಕ್‌ಪಾಟ್‌ ಹೊಡೆ​ದಿ​ದ್ದಾ​ರೆ. ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿ​ಚಂದ್‌ ಪುತ್ರಿ ಗಾಯತ್ರಿ ಗೋಪಿ​ಚಂದ್‌​ರನ್ನು ಚೆನ್ನೈ ಸೂಪ​ರ್‌​ಸ್ಟಾ​ರ್‍ಸ್ ಆಯ್ಕೆ ಮಾಡಿದೆ. ಉದ​ಯೋ​ನ್ಮುಖ ಅಸ್ಸಾ​ಮೀಸ್‌ ಶಟ್ಲರ್‌ 3 ಲಕ್ಷ ರು. ಮೊತ್ತಕ್ಕೆ ತವರು ತಂಡ ನಾತ್‌ರ್‍ ಈಸ್ಟ್‌ ವಾರಿ​ಯ​ರ್‍ಸ್ ಸೇರಿ​ದ​ರು. ಈ ಬಾರಿ 74 ಶಟ್ಲ​ರ್‌​ಗಳು ಟೂರ್ನಿ ಆಡ​ಲಿ​ದ್ದಾ​ರೆ. ಬಿ.ಸು​ಮೀತ್‌ ರೆಡ್ಡಿ​ಯನ್ನು 11 ಲಕ್ಷ ಹಾಗೂ ಚಿರಾಗ್‌ ಶೆಟ್ಟಿಅವ​ರನ್ನು 15.5 ಲಕ್ಷಕ್ಕೆ ಪುಣೆ ಉಳಿ​ಸಿ​ದೆ.

ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

ತಾರಾ ಶಟ್ಲ​ರ್‌ ಸಿಂಧುಗೆ 77 ಲಕ್ಷ ರು. ಕೊಟ್ಟು ಹೈದ​ರಾ​ಬಾದ್‌ ಹಂಟ​ರ್‍ಸ್ ತನ್ನಲ್ಲೇ ಉಳಿ​ಸಿ​ಕೊಂಡಿದೆ. ಚೈನೀಸ್‌ ತೈಪೆಯ ತೈ ತ್ಜು ಯಿಂಗ್‌ರನ್ನು ಹಾಲಿ ಚಾಂಪಿ​ಯನ್‌ ತಂಡ ಬೆಂಗ​ಳೂರು ರಾರ‍ಯಪ್ಟ​ರ್‍ಸ್ ದುಬಾರಿ ಖರೀದಿ ಮಾಡಿದೆ. ಇನ್ನೊಂದೆಡೆ ಯುವ ಶಟ್ಲರ್‌ ಬಿ.ಸಾಯಿ ಪ್ರಣೀತ್‌ ಅವ​ರನ್ನು ತನ್ನಲ್ಲೇ ಉಳಿ​ಸಿ​ಕೊಂಡಿ​ದೆ.

39 ಲಕ್ಷಕ್ಕೆ ಬೀವನ್‌ ಝಾಂಗ್‌ರನ್ನು​ ಅವಧ್‌ ವಾರಿ​ಯ​ರ್‍ಸ್ ಉಳಿ​ಸಿ​ಕೊಂಡಿ​ದೆ. ಎಲ್ಲಾ ಫ್ರಾಂಚೈ​ಸಿ​ಗಳೂ ಹರಾ​ಜಿ​ನಲ್ಲಿ 2 ಕೋಟಿ ರು. ಮೊತ್ತ​ವನ್ನು ಬಳ​ಸಿ​ಕೊ​ಳ್ಳುವ ಅವ​ಕಾಶ ಹೊಂದಿ​ದ್ದವು. ಆದರೆ ಯಾವುದೇ ಒಬ್ಬ ಶಟ್ಲ​ರ್‌​ಗೆ 77 ಲಕ್ಷ​ಕ್ಕಿಂತ ಹೆಚ್ಚು ವಿನಿ​ಯೋಗ ಮಾಡು​ವಂತಿ​ಲ್ಲ. ಕಳೆದ ಬಾರಿ ಅತಿ​ಹೆಚ್ಚು ಮೊತ್ತದ ಮಿತಿ 80 ಲಕ್ಷ ರು. ಆಗಿ​ತ್ತು. 154 ಆಟ​ಗಾ​ರರ ಹರಾ​ಜಿ​ನಲ್ಲಿ ಲಕ್ಷ್ಯ ಸೇನ್‌, ಪುರು​ಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿ​ರಾಜ್‌ ಹಾಗು ಚಿರಾಗ್‌ ಶೆಟ್ಟಿಇದ್ದ​ರು.

ತಾರಾ ಶಟ್ಲ​ರ್‌​ಗ​ಳು ಗೈರು:
ಭಾರ​ತದ ತಾರಾ ಶಟ್ಲ​ರ್‌​ಗ​ಳಾದ ಸೈನಾ ನೆಹ್ವಾಲ್‌ ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ 5ನೇ ಆವೃ​ತ್ತಿ​ಯಲ್ಲಿ ಆಡ​ದಿ​ರಲು ನಿರ್ಧ​ರಿ​ಸಿದ್ದಾರೆ. ಇಬ್ಬರೂ ಶಟ್ಲ​ರ್‌​ಗಳು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ​ಯಿಂದ ಮುಂಬ​ರುವ ಅಂತಾ​ರಾ​ಷ್ಟ್ರೀಯ ಟೂರ್ನಿ​ಗ​ಳಲ್ಲಿ ತಮ್ಮ ಅತ್ಯು​ತ್ತಮ ಪ್ರದ​ರ್ಶನ ನೀಡುವ ಗುರಿ ಹೊಂದಿ​ದ್ದಾರೆ. ಸ್ಪೇನ್‌ ತಾರೆ ಕ್ಯಾರೊ​ಲಿನಾ ಮರೀನ್‌ ಈ ಬಾರಿ ಸ್ಪರ್ಧಿ​ಸು​ತ್ತಿ​ಲ್ಲ.

ಲೀಗ್‌ನಲ್ಲಿ 7 ತಂಡ​ಗಳು:
5ನೇ ಆವೃತ್ತಿಯ ಪಿಬಿಎಲ್‌ನಲ್ಲಿ 7 ತಂಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹಾಲಿ ಚಾಂಪಿಯನ್‌ ಬೆಂಗಳೂರು ರಾರ‍ಯಪ್ಟ​ರ್‍ಸ್, ಅವಧ್‌ ವಾರಿ​ಯ​ರ್‍ಸ್, ಮುಂಬೈ ರಾಕೆಟ್ಸ್‌, ಹೈದ​ರಾ​ಬಾದ್‌ ಹಂಟ​ರ್‍ಸ್, ಚೆನ್ನೈ ಸೂಪ​ರ್‌​ಸ್ಟಾ​ರ್‍ಸ್, ನಾತ್‌ರ್‍ ಈಸ್ಟರ್ನ್‌ ವಾರಿ​ಯ​ರ್‍ಸ್, ಪುಣೆ 7 ಏಸ​ಸ್‌ ತಂಡಗಳು ಪ್ರಶಸ್ತಿ ಕಣದಲ್ಲಿವೆ.

Follow Us:
Download App:
  • android
  • ios