ದೀಪಿಕಾ ಪಡುಕೋಣೆ, ಪಿವಿ ಸಿಂಧುಗೆ ಹೊಸ ಜವಾಬ್ದಾರಿ ಕೊಟ್ಟ ನರೇಂದ್ರ ಮೋದಿ
ದೀಪಿಕಾ ಪಡುಕೋಣೆ, ಪಿವಿ ಸಿಂಧುಗೆ ಹೊಸ ಜವಾಬ್ದಾರಿ ಕೊಟ್ಟ ನರೇಂದ್ರ ಮೋದಿ/ ನಾರಿ ಶಕ್ತಿಯ ಅನಾವರಣಕ್ಕೆ "ಭಾರತ್ ಕೀ ಲಕ್ಷ್ಮೀ'/ ಮಹಿಳಾ ಸಬಲೀಕರಣಕ್ಕೆ ಹೊಸ ನೋಟ
ನವದೆಹಲಿ(ಅ. 22) ನಟಿ ದೀಪಿಕಾ ಪಡುಕೋಣೆ ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೊಸ ಜವಾಬ್ದಾರಿಯೊಂದಿಗೆ ದೇಶದ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೊಸ ಆಲೋಚನೆ, ಹೊಸ ಅಭಿಯಾನ "ಭಾರತ್ ಕೀ ಲಕ್ಷ್ಮೀ' ಯೋಜನೆಗೆ ಇವರು ಒಂದರ್ಥದಲ್ಲಿ ರಾಯಭಾರಿಗಳಾಗಲಿದ್ದಾರೆ.
ಮಹಿಳೆಯರ ಶಕ್ತಿ ಸಾರುವ ಹೊಸ ಅಭಿಯಾನಕ್ಕೆ ಕೈಜೋಡಿಸುತ್ತಿರುವ ಬಗ್ಗೆ ಇಬ್ಬರು ಸೆಲೆಬ್ರಿಟಿಗಳು ಸಂತಸವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ. ಮಹಿಳೆಯರಿಂದ ಮರೆಯಲಾಗದ ಸಾಧನೆಗಳ ಅನಾವರಣ ಸಹ ಈ ಕಾರ್ಯಕ್ರಮದಿಂದ ಆಗಲಿದೆ.
'ನನ್ನ ಬಯೋಪಿಕ್ ಮಾಡಲು ದೀಪಿಕಾನೇ ಬೆಸ್ಟ್'
ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿದ್ದು ಭಾರತದ ನಾರಿ ಶಕ್ತಿ ಅನಾವರಣ ಅಗತ್ಯವಿದೆ, ಪ್ರತಿಭೆ ಎಂಬುದು ಸಮರ್ಪಣೆ ಮತ್ತು ಸ್ಪಷ್ಟ ನಿರ್ಣಯದ ಪ್ರತಿಫಲನವಾಗಿದ ಎಂದು ಹೇಳಿದ್ದಾರೆ.
ನಮ್ಮ ಮುಖ್ಯ ಧ್ಯೇಯ ಮಹಿಳೆಯರ ಸ್ವಾವಲಂಬನೆ. ಪಿವಿ ಸಿಂಧು ಮತ್ತು ದೀಪಿಕಾ ಪಡುಕೋಣೆ ಈ ಸಂದೇಶವನ್ನು ದೇಶದ ಎಲ್ಲ ಮೂಲೆಗೆ ತಲುಪಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಕಲ್ಲಿ ದೀಪಿಕಾ ಬ್ಯೂಸಿಯಾಗಿದ್ದಾರೆ. ಪತಿ ರಣ್ ವೀರ್ ಸಿಂಗ್ ಅವರೊಂದಿಗೆ "83" ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.