ಒಲಿಂಪಿಕ್ಸ್‌ ಅರ್ಹತೆ: ಚಾನುಗೆ 8ನೇ ಸ್ಥಾನ

ಮಾಜಿ ವಿಶ್ವಚಾಂಪಿಯನ್ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಂಜುರಿ ಕಾರಣದಿಂದ ಹಲವು ಮಹತ್ವದ ಟೂರ್ನಿಯಿಂದ ಹೊರಗುಳಿದಿದ್ದ ಚಾನು ಇದೀಗ ಅಂತಿಮ ರ್ಯಾಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. 
 

Olympics qualifiers weightlifter meerabai chanu secured 8th place

ನವದೆಹಲಿ(ಜ.03) : ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌(ಐಡಬ್ಲ್ಯುಎಫ್‌) ಪ್ರಕಟಿಸಿದ ನೂತನ ಅರ್ಹತಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ವೇಟ್‌ಲಿಫ್ಟರ್‌, ಮಾಜಿ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನು 8ನೇ ಸ್ಥಾನ ಪಡೆದಿದ್ದಾರೆ. ಗುರುವಾರ ಪ್ರಕಟಿಸಲಾದ ಹೊಸ ಪಟ್ಟಿಯಲ್ಲಿ 49 ಕೆ.ಜಿ ವಿಭಾಗದಲ್ಲಿ ಚಾನು ಒಟ್ಟು 2966.6406 ಅಂಕಗಳನ್ನು ಸಂಪಾದಿಸಿದ್ದಾರೆ. 

ಇದನ್ನೂ ಓದಿ: ಚಾನುಗೆ ಥಾಯ್ಲೆಂಡ್‌ ವೇಟ್‌ಲಿಫ್ಟಿಂಗ್‌ ಚಿನ್ನ

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 2018ರ ನವೆಂಬರ್‌ನಿಂದ ಏಪ್ರಿಲ್‌ 2020ರ ವರೆಗಿನ ಮೂರು ಅವಧಿಗಳಲ್ಲಿ ಕನಿಷ್ಠ ಒಂದು ಸ್ಪರ್ಧೆಯಲ್ಲಿ ಪಾಲ್ಗೊಂಡಿರಬೇಕು. ಒಟ್ಟಾರೆ 6 ಕೂಟಗಳಲ್ಲಿ ಭಾಗವಹಿಸಿರಬೇಕು ಎನ್ನುವ ಮಾನದಂಡವಿದೆ. 

ಇದನ್ನೂ ಓದಿ: ಡೋಪಿಂಗ್‌: 4 ವರ್ಷ ನಿಷೇಧಕ್ಕೊಳಗಾದ ಸೀಮಾ

ಬೆನ್ನು ನೋವಿನ ಕಾರಣ ಕೆಲ ಪ್ರಮುಖ ಸ್ಪರ್ಧೆಗಳನ್ನು ಚಾನು ತಪ್ಪಿಸಿಕೊಂಡಿದ್ದರೂ, ಏಪ್ರಿಲ್‌ನಲ್ಲಿ ಪ್ರಕಟಗೊಳ್ಳಲಿರುವ ಅಂತಿಮ ಪಟ್ಟಿಯಲ್ಲಿ ಚಾನುಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

Latest Videos
Follow Us:
Download App:
  • android
  • ios