ನವದೆಹಲಿ(ಫೆ.08): ವಿಶ್ವ ಚಾಂಪಿಯನ್‌, ಭಾರತದ ಮೀರಾಬಾಯಿ ಚಾನು ಥಾಯ್ಲೆಂಡ್‌ನಲ್ಲಿ ನಡೆದ ಇಜಿಎಟಿ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಗೆದ್ದ ಮೊದಲ ಅಂತಾರಾಷ್ಟ್ರೀಯ ಪದಕ ಇದಾಗಿದೆ. 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು, ಸ್ನಾಚ್‌ನಲ್ಲಿ  82 ಕೆ.ಜಿ, ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 110 ಕೆ.ಜಿ (ಒಟ್ಟು 192 ಕೆ.ಜಿ) ಭಾರ ಎತ್ತಿ ಚಿನ್ನಕ್ಕೆ ಮುತ್ತಿಟ್ಟರು. 

 

 

ಇದನ್ನೂ ಓದಿ: ಫಿಫಾ: 103ನೇ ಸ್ಥಾನಕ್ಕೆ ಕುಸಿದ ಭಾರತ ತಂಡ

ಈ ಕೂಟ ಒಲಿಂಪಿಕ್‌ ಅರ್ಹತಾ ಸುತ್ತುಗಳಲ್ಲಿ ಒಂದಾಗಿದ್ದು, ಇಲ್ಲಿ ಗಳಿಸಿದ ಅಂಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನೆರವಾಗಲಿದೆ. ಬೆನ್ನು ನೋವಿನ ಕಾರಣ ಚಾನು ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ಗೆ ಗೈರಾಗಿದ್ದರು.