ಡೋಪಿಂಗ್‌: 4 ವರ್ಷ ನಿಷೇಧಕ್ಕೊಳಗಾದ ಸೀಮಾ

ಕಾಮನ್ವೆಲ್ತ್‌ ಚಾಂಪಿಯನ್‌ಷಿಪ್‌ ವೇಟ್‌ಲಿಫ್ಟಿಂಗ್ ಬೆಳ್ಳಿ ಪದಕ ವಿಜೇತೆ ಸೀಮಾ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು 4 ವರ್ಷ ನಿಷೇಧಕ್ಕೆ ಗುರಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Women Weightlifter Seema banned for 4 years for doping by NADA

ನವದೆಹಲಿ(ಡಿ.29): ರಾಷ್ಟ್ರೀಯ ಉದ್ದೀಪನ ಔಷಧ ನಿಗ್ರಹ ಘಟಕ(ನಾಡಾ)ದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಮನ್ವೆಲ್ತ್‌ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತೆ, ವೇಟ್‌ಲಿಫ್ಟರ್‌ ಸೀಮಾ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ. 

ಹೆಚ್ಚಾದ ಡೋಪಿಂಗ್‌: ಕ್ರೀಡಾ ಸಚಿವ ರಿಜಿಜು ಆತಂಕ

ವಿಶಾಖಪಟ್ಟಣಂನಲ್ಲಿ ನಡೆದ 34ನೇ ಮಹಿಳಾ ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೀಮಾ ಅವರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಪರೀಕ್ಷೆಗೊಳಪಡಿಸಿದಾಗ ನಿಷೇಧಿತ ಮದ್ದು ಸೇವಿಸಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಾಡಾ ಶಿಸ್ತು ಸಮಿತಿ ಈ ನಿಷೇಧ ಕ್ರಮ ಕೈಗೊಂಡಿದೆ. 

ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

ಸೀಮಾ 2017ರ ಕಾಮನ್ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು 2018ರ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 6ನೇ ಸ್ಥಾನ ಪಡೆದಿದ್ದರು.
 

Latest Videos
Follow Us:
Download App:
  • android
  • ios