ತಂದೆ-ತಾಯಿ ವಿಮಾನ ಹತ್ತಿಸಿ ಕನಸು ನನಸು ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ
* ತಮ್ಮ ಬಹುಕಾಲದ ಕನಸು ನನಸು ಮಾಡಿದ ನೀರಜ್ ಚೋಪ್ರಾ
* ಮೊದಲ ಬಾರಿಗೆ ತಂದೆ-ತಾಯಿಯನ್ನು ವಿಮಾನಯಾನ ಮಾಡಿಸಿದ ಚಿನ್ನದ ಚೋಪ್ರಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ನವದೆಹಲಿ(ಸೆ.11): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾ ತಮ್ಮ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನಯಾನ ಮಾಡಿಸುವ ಮೂಲಕ ಬಹುಕಾಲದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.
ತಮಗೆ ಪ್ರಾಯೋಕತ್ವ ನೀಡಿದ ಸಂಸ್ಥೆಯಾದ ಬಳ್ಳಾರಿಯ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಐಐಎಸ್(ಇನ್ಪೈರ್ ಇನ್ಸಿಟ್ಯೂಟ್ ಆಫ್ ಸ್ಪೋರ್ಟ್ಸ್)ಗೆ ಭೇಟಿ ನೀಡಲು ವಿಮಾನದೊಂದಿಗೆ ನೀರಜ್ ಚೋಪ್ರಾ ತನ್ನ ಪೋಷಕರಾದ ಸತೀಷ್ ಕುಮಾರ್ ಹಾಗೂ ಸರೋಜ್ ದೇವಿ ಜತೆ ಪ್ರಯಾಣ ನಡೆಸಿದ್ದಾರೆ.
ನೀರಜ್ ಬ್ರ್ಯಾಂಡ್ ಸಾವಿರ ಪಟ್ಟು ಏರಿಕೆ, ಸಹಿ ಮಾಡಿದ್ದು ಒಂದೆರಡು ಸಂಸ್ಥೆಗಳ ಜತೆ ಅಲ್ಲ!
ನನ್ನ ಪೋಷಕರನ್ನು ಮೊದಲ ಬಾರಿಗೆ ವಿಮಾನಯಾನ ಮಾಡಿಸಿದೆ, ಇಂದು ನನ್ನ ಸಣ್ಣ ಕನಸೊಂದು ನನಸಾಯಿತು ಎಂದು ತನ್ನ ತಂದೆ-ತಾಯಿಯೊಂದಿಗೆ ವಿಮಾನದೊಳಗೆ ಕುಳಿತಿರುವ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ನೀರಜ್ ಚೋಪ್ರಾ ಹಾಗೂ ಮತ್ತವರ ಪೋಷಕರಲ್ಲದೇ, ಕೋಚ್ ಹಾಗೂ ಒಲಿಂಪಿಯನ್ ಸೂಪರ್‌ಹೆವಿವೈಟ್ ಬಾಕ್ಸರ್ ಸತೀಷ್ ಕುಮಾರ್ ಕೂಡಾ ಏರ್‌ಕ್ರಾಫ್ಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.