ನೀರಜ್ ಬ್ರ್ಯಾಂಡ್ ಸಾವಿರ ಪಟ್ಟು ಏರಿಕೆ, ಸಹಿ ಮಾಡಿದ್ದು ಒಂದೆರಡು ಸಂಸ್ಥೆಗಳ ಜತೆ ಅಲ್ಲ!
* ಚಿನ್ನ ಸಾಧಕ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ ಏರಿಕೆ
* ಟೋಕಿಯೋದಿಂದ ಹಿಂದಿರುಗಿದ ಬಳಿಕ ಏರಿಕೆ
* ಪ್ರಮುಖ ಕಂಪನಿಗಳ ಜತೆ ನೀರಜ್ ಒಪ್ಪಂದ
* ಸಿದ್ಧ ಉಡುಪುಗಳ ಕಂಪನಿಯ ಜತೆಯೂ ಒಪ್ಪಂದ
ನವದೆಹಲಿ(ಸೆ. 07) ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಸಾಧಿಸಿದ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ ಏರಿಕೆ ಕಂಡಿದೆ. ಒಲಿಂಪಿಕ್ಸ್ ನಲ್ಲಿ 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚಿನ್ನದ ಪದಕ ಜಯಿಸಿ ದಾಖಲೆ ಬರೆದಿದ್ದರು. ಟೋಕಿಯೊದಿಂದ ಮರಳಿ ಬಂದ ನಂತರ ಚಿನ್ನದ ಹುಡುಗನ ಮೌಲ್ಯವು ಶೇ.1000 ರಷ್ಟು ಏರಿಕೆಯಾಗಿದೆ.
ನೀರಜ್ ಚೋಪ್ರಾರ ಸಾರ್ವಜನಿಕ ಸಂಪರ್ಕ ಖಾತೆ ನಿರ್ವಹಿಸುವ ಹಾಗೂ ಭಾರತೀಯ ಜಾವೆಲಿನ್ ತಾರೆಯನ್ನು ಪ್ರತಿನಿಧಿಸುವ ಜೆಎಸ್‌ಡಬ್ಲ್ಯೂ(JSW) ಪ್ರಕಾರ, ಭಾರತೀಯ ತಾರೆಯ Endorsement Fee ಕನಿಷ್ಠ 10 ಪಟ್ಟು ಹೆಚ್ಚಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಅವರು ಐಷಾರಾಮಿ ಆಟೋಮೊಬೈಲ್ ಕಂಪನಿಗಳು ಮತ್ತು ಸಿದ್ಧ ಉಡುಪುಗಳ ಬ್ರ್ಯಾಂಡ್ ನೊಂದಿಗೆ ಐದಾರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂಬ ವಿವರವು ಲಭ್ಯವಾಗಿವೆ.
ಸೆಕ್ಸ್ ಬಗ್ಗೆ ನೀರಜ್ ಚೋಪ್ರಾಗೆ ಪ್ರಶ್ನೆ ಕೇಳಿದ ಇತಿಹಾಸ ತಜ್ಞ
ನೀರಜ್ ಚೋಪ್ರಾ ಈಗಾಗಲೇ ಬೈಜುಸ್, ಟಾಟಾ AIA ಲೈಫ್ ಇನ್ಶೂರೆನ್ಸ್ ಮತ್ತು ಟಾಪ್ ಫಾರ್ಮಾಸ್ಯುಟಿಕಲ್ ಕಂಪನಿ, ಎಕ್ಸಾನ್ ಮೊಬೈಲ್ ಮತ್ತು ಮಸಲ್ ಬ್ಲೇಜ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕಗಳು ಈಗ ವರ್ಷಕ್ಕೆ ಸುಮಾರು 2.5 ಕೋಟಿ ರೂ. ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ಅಗ್ರ ಭಾರತೀಯ ಕ್ರಿಕೆಟಿಗರ ಸಾಲಿಗೆ ಸೇರಿಸುತ್ತದೆ. ಕ್ರಿಕೆಟಿಗರಾದ ಕೊಹ್ಲಿ, ಎಂ.ಎಸ್.ಧೋನಿ ವಾರ್ಷಿಕ 1 ರಿಂದ 5 ಕೋಟಿ ರೂ. ಗಳಿಸುತ್ತಾರೆ.
ಅಭಿನವ್ ಬಿಂದ್ರಾ ನಂತರ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. ಇಡೀ ದೇಶವೇ ಸಂಭ್ರಮಿಸಿತ್ತು. ಹಲವು ದಶಕಗಳ ಬಳಿಕ ಭಾರತದ ಹಾಕಿ ತಂಡ ಸಹ ಅದ್ಭುತ ಪ್ರದರ್ಶನ ನೀಡಿತ್ತು.