Asianet Suvarna News Asianet Suvarna News

ಭುವ​ನೇ​ಶ್ವರ, ರೂರ್ಕೆ​ಲಾ​ದ​ಲ್ಲಿ 2023ರ ಪುರು​ಷರ ಹಾಕಿ ವಿಶ್ವ​ಕ​ಪ್‌

ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಒಡಿ​ಶಾದ ಭುವ​ನೇ​ಶ್ವರ ಹಾಗೂ ರೂರ್ಕೆಲಾ ಜಂಟಿ ಆತಿಥ್ಯ ವಹಿಸಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Odisha to host 2023 men's hockey World Cup Says CM Naveen Patnaik
Author
Bhubaneswar, First Published Nov 28, 2019, 12:12 PM IST

ಭುವ​ನೇ​ಶ್ವರ(ನ.28): 2023ರ ಪುರು​ಷರ ಹಾಕಿ ವಿಶ್ವ​ಕಪ್‌ ಟೂರ್ನಿಗೆ ಒಡಿ​ಶಾದ ಭುವ​ನೇ​ಶ್ವರ ಹಾಗೂ ರೂರ್ಕೆಲಾ ಜಂಟಿ ಆತಿಥ್ಯ ನೀಡ​ಲಿವೆ ಎಂದು ಬುಧ​ವಾರ ಒಡಿ​ಶಾದ ಮುಖ್ಯ​ಮಂತ್ರಿ ನವೀನ್‌ ಪಟ್ನಾ​ಯಕ್‌ ಘೋಷಿ​ಸಿ​ದರು. ಭಾರತ ಸತತ 2ನೇ ಬಾರಿಗೆ ವಿಶ್ವ​ಕಪ್‌ ಆತಿಥ್ಯ ಹಕ್ಕು ಪಡೆದಿದ್ದು, ಜ.13ರಿಂದ 29ರ ವರೆಗೂ ಟೂರ್ನಿ ನಡೆ​ಯ​ಲಿದೆ.

ಭಾರತ ಹಾಕಿ ತಂಡಕ್ಕೆ ಶುಭಕೋರಿದ ಕಮಲ್‌ ಹಸನ್!

2018ರ ವಿಶ್ವ​ಕಪ್‌ಗೂ ಭುವ​ನೇಶ್ವರ ಆತಿಥ್ಯ ವಹಿ​ಸಿತ್ತು. ಬೆಲ್ಜಿಯಂ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿತ್ತು. ಇತ್ತೀ​ಚಿನ ವರ್ಷಗಳಲ್ಲಿ ಭುವ​ನೇ​ಶ್ವರದ ಕಳಿಂಗಾ ಕ್ರೀಡಾಂಗಣ ಹಲವು ಪ್ರಮುಖ ಟೂರ್ನಿ​ಗ​ಳಿಗೆ ವೇದಿಕೆ ಕಲ್ಪಿ​ಸಿದೆ. 2017ರ ಹಾಕಿ ವಿಶ್ವ ಲೀಗ್‌ ಫೈನಲ್‌, 2019ರ ಪುರು​ಷರ ಹಾಕಿ ಸೀರೀಸ್‌ ಫೈನಲ್ಸ್‌, ಇದೇ ತಿಂಗಳ ಆರಂಭ​ದಲ್ಲಿ ವಿಶ್ವ​ಕಪ್‌ ಅರ್ಹತಾ ಪಂದ್ಯ​ಗ​ಳು ಇಲ್ಲಿ ನಡೆ​ದಿ​ದ್ದವು.

2023ರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ; ದಿನಾಂಕ ಪ್ರಕಟ!

ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಪಾಲಿಗೆ ವಿಶ್ವಕಪ್ ಟೂರ್ನಿ ಮಹತ್ವದ್ದಾಗಿದೆ. ಹಾಗಾಗಿ ಗುಣಮಟ್ಟದ ವ್ಯವಸ್ಥೆ ಬೇಕಾಗುತ್ತದೆ. ಸದ್ಯದ ಮಟ್ಟಿಗೆ ಭುವನೇಶ್ವರ ಹಾಗೂ ಡೆಲ್ಲಿಯಲ್ಲಿ ಮಾತ್ರ ಅಂತಹ ಗುಣಮಟ್ಟದ ಕ್ರೀಡಾಂಗಣ ಇದೆ. ಇದೀಗ ರೂರ್ಕೆಲಾ ಸಹ ಸಿದ್ದವಾಗಿದ್ದು, ಇನ್ನಷ್ಟು ಅದನ್ನು ಮೇಲ್ದರ್ಜೆಗೇರಿಸಬೇಕಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಸರ್ಕಾರದ ಜಠಿಲ ಕಾನೂನುಗಳಿಂದ ಡೆಲ್ಲಿ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತದ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೇಂದರ್ ಭಾತ್ರಾ ತಿಳಿಸಿದ್ದಾರೆ. 
 

Follow Us:
Download App:
  • android
  • ios