ಭುವನೇಶ್ವರ( ನ.20) : ಇಲ್ಲಿನ ಕಳಿಂಗಾ ಹಾಕಿ ಮೈದಾನಕ್ಕೆ ಮಂಗಳವಾರ ಭೇಟಿ ನೀಡಿದ ನಟ ಕಮಲ್‌ ಹಾಸನ್‌ ಭಾರತ ಪುರುಷರ ತಂಡಕ್ಕೆ ಶುಭಕೋರಿದರು. 

ಈ ವೇಳೆ ಕಮಲ್‌ಗೆ ಭಾರತ ತಂಡದ ಜೆರ್ಸಿಯನ್ನು ಉಡು​ಗೊರೆಯಾಗಿ ನೀಡಲಾ​ಯಿತು. ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಷ್ಯಾವನ್ನು ಮಣಿ​ಸಿದ ಭಾರತ, ಟೋಕಿಯೋ ಗೇಮ್ಸ್‌ಗೆ ಟಿಕೆಟ್‌ ಖಚಿತಪಡಿ​ಸಿ​ಕೊಂಡಿತು. 

 

ಪ್ರಸ್ತುತ ನಡೆಯುತ್ತಿರುವ 3 ವಾರಗಳ ರಾಷ್ಟ್ರೀಯ ಶಿಬಿರ ಡಿ.8ರಂದು ಕೊನೆಗೊಳ್ಳಲಿದೆ. 2020ರ ಜನವರಿಯಲ್ಲಿ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಭಾರತ ಆಡ​ಲಿದೆ.