ನೆಟ್ಟಿಗರು ಮನು ಬಾಕರ್ ಜೊತೆ ನೀರಜ್ ಚೋಪ್ರಾ ಮದ್ವೆ ಮಾಡಿಸುತ್ತಿದ್ದರೆ, ಅವರು ಜರ್ಮನಿಗೆ ಹೋಗಿದ್ಯಾಕೆ?
ಒಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ನಡುವೆ ಮದುವೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ನೀರಜ್ ಜರ್ಮನಿಗೆ ಹಾರಿದ್ದಾರೆ.
ಬೆಂಗಳೂರು: 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಯುವ ಶೂಟರ್ ಮನು ಭಾಕರ್ ಹಾಗೂ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಾಲಿಗೆ ಅತ್ಯಂತ ಸ್ಮರಣೀಯ ಎನಿಸಿಕೊಂಡಿತು. ಪ್ಯಾರಿಸ್ ಒಲಿಂಪಿಕ್ಸ್ ಕೂಟದಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಬೇಟೆಯಾಡಿದರೆ, ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದ ಏಕೈಕ ಭಾರತೀಯ ಅಥ್ಲೀಟ್ ಎನಿಸಿಕೊಂಡರು. ಇದೆಲ್ಲದರ ನಡುವೆ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಮದುವೆಯಾಗುವ ಸಾಧ್ಯತೆಯಿದೆ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದರು. ಇದೆಲ್ಲದರ ನಡುವೆ ನೀರಜ್ ಚೋಪ್ರಾ ಜರ್ಮನಿಗೆ ಹಾರಿದ್ದಾರೆ.
ಹೌದು, ಹರ್ಯಾಣ ಮೂಲದ ಯುವ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಪ್ಯಾರಿಸ್‌ನಲ್ಲಿ ಭಾರತ ಪರ ಒಲಿಂಪಿಕ್ ಪದಕದ ಖಾತೆ ತೆರೆದರು. ಇದಾದ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲೂ ಮನು ಭಾಕರ್ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಸ್ವಾತಂತ್ರ್ಯ ಭಾರತದಲ್ಲಿ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಅಪರೂಪದ ಕೀರ್ತಿಗೆ ಮನು ಭಾಕರ್ ಪಾತ್ರರಾಗಿದ್ದರು.
ಮೊಹಮ್ಮದ್ ಸಿರಾಜ್ ತಮ್ಮ 'ಡ್ರೀಮ್ ಕಾರ್'ಗೆ ಖರ್ಚು ಮಾಡಿದ್ದು ಎಷ್ಟು ಕೋಟಿ ರುಪಾಯಿ ಗೊತ್ತಾ?
ಇನ್ನೊಂದೆಡೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಪ್ಯಾರಿಸ್ ಕೂಟದಲ್ಲಿ 89.45 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪದಕ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್ ಎನ್ನುವ ಹಿರಿಮೆಗೆ ಪಾಣಿಪತ್ ಮೂಲದ ನೀರಜ್ ಪಾತ್ರರಾದರು.
ಇನ್ನು ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಆತ್ಮೀಯವಾಗಿ ಮಾತನಾಡುವ ವಿಡಿಯೋ ಕ್ಲಿಪಿಂಗ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇನ್ನು ಮನು ಭಾಕರ್ ತಾಯಿ ಕೂಡಾ ಈ ರೀತಿಯ ವದಂತಿಗಳನ್ನು ಅಲ್ಲಗಳೆದಿದ್ದರು.
"ಕೇಳಿ ಶಾಕ್ ಆಯ್ತು..!" ಒಲಿಂಪಿಕ್ಸ್ ಸಿದ್ಧತೆಗೆ ನನಗೆ ಕೇಂದ್ರ ₹1.5 ಕೋಟಿ ಕೊಟ್ಟಿಲ್ಲ: ಅಶ್ವಿನಿ ಪೊನ್ನಪ್ಪ ಕಿಡಿ
ಇನ್ನು ಸ್ವತಃ ಮನು ಭಾಕರ್, ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, "ಈ ಎಲ್ಲಾ ವದಂತಿಗಳಲ್ಲಿ ಸತ್ಯವಿಲ್ಲ. ನಾನು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳನ್ನು ಗೆಲ್ಲಬೇಕೆಂದುಕೊಂಡಿದ್ದೇನೆ. ನನ್ನ ಗುರಿ ಏನಿದ್ದರೂ ಕಠಿಣ ಪರಿಶ್ರಮಪಟ್ಟು ನನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದಾಗಿದೆ" ಎಂದು ಹೇಳಿದ್ದಾರೆ.
ಇನ್ನು ಇದೆಲ್ಲದರ ನಡುವೆ ನೀರಜ್ ಚೋಪ್ರಾ, ಜರ್ಮನಿಗೆ ಹಾರಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ನೀರಜ್, ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ವೈದ್ಯರನ್ನು ಕಾಣಲು ಜರ್ಮನಿಗೆ ತೆರಳಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇನ್ನು ಒಂದು ತಿಂಗಳ ಕಾಲ ನೀರಜ್ ಜರ್ಮನಿಯಲ್ಲೇ ಇರಲಿದ್ದಾರೆ ಎಂದು ಗೊತ್ತಾಗಿದೆ. ಒಲಿಂಪಿಕ್ಸ್‌ಗೂ ಮೊದಲು ನೀರಜ್ ಜರ್ಮನಿಗೆ ತೆರಳಿ ವೈದ್ಯರ ಬಳಿ ಸಮಾಲೋಚಿಸಿದ್ದರು. ಅಲ್ಲಿಯೇ ಕೆಲ ಕಾಲ ಅಭ್ಯಾಸ ನಿರತರಾಗಿದ್ದರು. ಈ ಬಾರಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.