ಮೊಹಮ್ಮದ್ ಸಿರಾಜ್ ತಮ್ಮ 'ಡ್ರೀಮ್ ಕಾರ್'ಗೆ ಖರ್ಚು ಮಾಡಿದ್ದು ಎಷ್ಟು ಕೋಟಿ ರುಪಾಯಿ ಗೊತ್ತಾ?
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಮೈದಾನದೊಳಗೆ ಹಾಗೂ ಮೈದಾನದಾಚೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಿರಾಜ್ ತಮ್ಮ ಕನಸಿನ ಕಾರೊಂದನ್ನು ಖರೀದಿಸಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಹೈದರಾಬಾದ್ ಮೂಲದ ಬಲಗೈ ವೇಗಿ ಮೊಹಮ್ಮದ್ ಸಿರಾಜ್‌ಗೆ ಕ್ರಿಕೆಟ್ ಕೇವಲ ಜನಪ್ರಿಯತೆಯನ್ನಷ್ಟೇ ತರದೇ ಅಪಾರ ಶ್ರೀಮಂತಿಯನ್ನೂ ತಂದುಕೊಟ್ಟಿದೆ.
ಒಂದು ಕಾಲದಲ್ಲಿ ಜೀವನ ನಿರ್ವಹಣೆಗಾಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಶ್ರಮದಿಂದ ಸಿರಾಜ್, ಇಂದು ಟೀಂ ಇಂಡಿಯಾ ಜನಪ್ರಿಯ ಆಟಗಾರನಾಗಿದ್ದಾರೆ.
ಸಿರಾಜ್ ತಂದೆ ಕುಟುಂಬದ ಹೊಟ್ಟೆ ತುಂಬಿಸಲು ದಿನವಿಡಿ ಆಟೋ ಓಡಿಸುತ್ತಿದ್ದರು. ಆದರೆ ಇದೀಗ ಸಿರಾಜ್ ಅವರ ಸತತ ಪರಿಶ್ರಮ ಹಾಗೂ ಟ್ಯಾಲೆಂಟ್‌ನಿಂದಾಗಿ ಅವರ ಕುಟುಂಬದ ಅದೃಷ್ಟವೇ ಬದಲಾಗಿ ಹೋಗಿದೆ.
ಕ್ರಿಕೆಟ್‌ನಲ್ಲಿ ಸದಾ ಬ್ಯುಸಿಯಾಗಿರುವ ಅವರು ಸದ್ಯ ಶ್ರೀಲಂಕಾ ಪ್ರವಾಸ ಮುಗಿಸಿ ತವರಿಗೆ ವಾಪಾಸ್ಸಾಗಿದ್ದು, ತಮ್ಮ ಕುಟುಂಬದ ಜತೆಗೆ ಕ್ವಾಲಿಟಿ ಸಮಯವನ್ನು ಕಳೆಯುತ್ತಿದ್ದಾರೆ.
ಇದೀಗ ಸಿರಾಜ್ ತಮ್ಮ ಜೀವನದ ಅತಿದೊಡ್ಡ ಕನಸೊಂದನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸಿರಾಜ್ ಇದೀಗ ರೇಂಜ್ ರೋವರ್ ಆಟೋಬಯೋಗ್ರಫಿ LWB ಐಶಾರಾಮಿ ಕಾರೊಂದನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಐಶಾರಾಮಿ ರೇಂಜ್ ರೋವರ್ ಆಟೋಬಯೋಗ್ರಫಿ LWP ಟಾಪ್ ಮಾಡೆಲ್ ಕಾರಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 2.60 ಕೋಟಿ ರುಪಾಯಿಗಳು
ಈ ಲಕ್ಸುರಿ ಕಾರ್ 2996 ಸಿಸಿ ಇಂಜಿನ್ ಹೊಂದಿದ್ದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದು ಒಂದು ಲೀಟರ್‌ಗೆ 10.42ರ ಮೈಲೇಜ್ ನೀಡುತ್ತದೆ.
ಈ ಐಶಾರಾಮಿ ಕಾರು ಖರೀದಿಸಿದ ಬಳಿಕ ಸಿರಾಜ್, "ಕನಸುಗಳಿಗೆ ಯಾವುದೇ ಮಿತಿಯಿಲ್ಲ, ಹೆಚ್ಚು ಪರಿಶ್ರಮ ಪಟ್ಟರೇ, ಹೆಚ್ಚು ಯಶಸ್ಸು ಸಿಗುತ್ತದೆ" ಎಂದು ಹೈದರಾಬಾದ್ ಮೂಲದ ವೇಗಿ ಸಂತಸ ಹಂಚಿಕೊಂಡಿದ್ದಾರೆ.